ಧಾರವಾಡ - ಹುಬ್ಬಳ್ಳಿ

ಜಾನಪದ ಸಾಹಿತ್ಯವು ಜನಪದರ ಜೀವನಾನುಭವದ ರಸಘಟ್ಟ: ವೀರಣ್ಣ

ಜಾನಪದ ಸಾಹಿತ್ಯವು ಜನಪದರ ಜೀವನಾನುಭವದ ರಸಘಟ್ಟ: ವೀರಣ್ಣ

 ಜಾನಪದ ಸಾಹಿತ್ಯವು ಜನಪದರ ಜೀವನಾನುಭವದ ರಸಘಟ್ಟ: ವೀರಣ್ಣ  

ಧಾರವಾಡ 22: ಜಾನಪದ ಸಾಹಿತ್ಯವು ಜನಪದರ ಜೀವನಾನುಭವದ ರಸಘಟ್ಟಿ. ಇಂತಹ ಮೋಹಕ ಸಾಹಿತ್ಯವನ್ನು ಜನಪದರು ನಮಗಾಗಿ ಕಟ್ಟಿಕೊಟ್ಟಿರುವ ಬಹುದೊಡ್ಡ ಅಮೂಲ್ಯ ಆಸ್ತಿಯಾಗಿದೆ ಎಂದು ಕ.ವಿ.ವ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಹೇಳಿದರು. 

ಅವರು ನಗರದ ಕ.ಸಾ.ಪ. ಭವನದಲ್ಲಿ ಬೆಲವಂತರ ಗ್ರಾಮದ ಬಯಲು ಬಸವೇಶ್ವರ ಮಹಿಳಾ ಸಂಘ ಹಾಗೂ ನಟಶೇಖರ ಪಂ. ಬಸವರಾಜ ಮನಸೂರ ಟ್ರಸ್ಟ್‌ ಸಹಯೋಗದಲ್ಲಿ ಆಯೋಜಿಸಲ್ಪಟ್ಟ ಜಾನಪದ ಸಂಭ್ರಮ-24 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಜಾನಪದ ಸಾಹಿತ್ಯ ಶಿಷ್ಟಪದ ಸಾಹಿತ್ಯದ ತಾಯಿ ಇದ್ದಂತೆ ಈ ಸಾಹಿತ್ಯದಲ್ಲಿ ಪುರುಷರಿಗಿಂತ ಮಹಿಳೆಯರದೇ ಪ್ರಧಾನಪಾತ್ರ. ನಮ್ಮ ಜನಪದ ತಾಯಂದಿರು ಅನಕ್ಷರಸ್ಥರಾದರೂ ಕಾವ್ಯಕಟ್ಟುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಜಾನಪದ ಸಾಹಿತ್ಯದಲ್ಲಿ ನಮ್ಮ ಬದುಕನ್ನು ತಿದ್ದಿ ಸಂಸ್ಕಾರಗೊಳಿಸುವ ಆದಮ್ಯ ಶಕ್ತಿ ಇದೆ. ಈ ಜಾನಪದ ಹಾಡುಗಳು ತುಂಬಾ ಕಾವ್ಯಮಯವು, ಭಾವಮಯವೂ ಆಗಿದ್ದು ರಸಾನುಭವವನ್ನುಂಟು ಮಾಡುತ್ತವೆ. ಈ ಸಾಂಸ್ಕೃತಿಕ ಬಳುವಳಿಯನ್ನು ನಾವು ನೀವೆಲ್ಲಾ ಉಳಿಸಿ, ಬೆಳೆಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.ಅತಿಥಿ ಬಸವರಾಜ ಅಪ್ಪಣ್ಣವರ್ ಮಾತನಾಡಿ, ಜಾನಪದ ಹಾಡುಗಳು ನಮ್ಮ ಬೇಸರ ಹಾಗೂ ಜಡತ್ವವನ್ನು ನೀಗಿಸಿ ಆನಂದ ಉಂಟು ಮಾಡುವುಗಳಾಗಿವೆ, ಸಂಗೀತದ ಉಪಕರಣಗಳಿಲ್ಲದೇ ಹಾಡುವ ಕಲೆಯಾಗಿದೆ ಎಂದರು. 

ಜಾನಪದ ಕಲಾವಿದರಾದ ಎಸ್‌. ಎನ್‌. ಬಿದರಳ್ಳಿ ಮಾತನಾಡಿ, ಜಾನಪದ ಸಾಹಿತ್ಯವು ಜಾತಿ-ಧರ್ಮವನ್ನು ಮೀರಿದ ಸಾಹಿತ್ಯವಾಗಿದ್ದು, ಉತ್ತಮ ಕಲಾವಿದರಾಗಲು ಬದ್ಧತೆ, ಶ್ರದ್ಧೆ ಅಗತ್ಯ ಎಂದರು.ಗೀರೀಶ ರಡ್ಡೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸೋಮಣ್ಣ ರಡ್ಡೇರ, ಅಶೋಕ ರಡ್ಡೇರ, ಸೈದುಸಾಬ ಕುಂದಗೋಳ, ಶಾಂತವ್ವ ದಾಸ್ತಿಕೊಪ್ಪ, ರತ್ನವ್ವ ಬಡಿಗೇರ ಹಾಗೂ ವಿರುಪಾಕ್ಷಿ ದೇವರ --- ಮುಂತಾದವರಿದ್ದರು. 

ಯಕ್ಕೇರ​‍್ಪ ನಡುವಿನಮನಿ (ಶಾನವಾಡ ಮಾಸ್ತರ) ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವರಾಜ ಮೇಸ್ತ್ರಿ, ಬಿ. ಕೆ. ಸೋದರ, ವೀರಭದ್ರ​‍್ಪ ನವಲಗುಂದ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಕೊನೆಯಲ್ಲಿ ತಾಲೂಕಿನ ವಿವಿಧ ಮಹಿಳಾ ತಂಡಗಳು ಸೊಗಸಾದ ಜಾನಪದ ಹಾಡುಗಳನ್ನು ಪ್ರಸ್ತುತಪಡಿಸಿದರು. ವಿಜೇತ ತಂಡಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. 


ಸುದ್ದಿ ಓದಿ