ಜಾನಪದ ಉತ್ಸವ ಕಾರ್ಯಕ್ರಮ
ರಾಣೆಬೆನ್ನೂರ: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಉಳಿಸಿ ಬೆಳೆಸಲು ಸರ್ವರೂ ಕನ್ನಡವನ್ನು ಉಸಿರಾಗಿಸಿಕೊಂಡು ಮುನ್ನಡೆಯಬೇಕು ಎಂದು ಗಚ್ಚಿನಮಠ ಮದ್ದರಕಿ, ಹಿರೇಮಠದ ಶಿವಯೋಗಿ ಶಿವಾಚಾರ್ಯರು ಹೇಳಿದರು.
ನಗರದ ಹೊರ ವಲಯದ ಅಡವಿ ಆಂಜನೇಯ ಬಡಾವಣೆಯಲ್ಲಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜನನಿ ಜಾನಪದ ಕಲಾ ವೇದಿಕೆ, ಯಕಲಾಸಪುರ ಇವರ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಾ ಮಟ್ಟದ 68ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಜಾನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡಿಗರಾದ ನಾವುಗಳೇ ಕನ್ನಡವನ್ನು ಸಂರಕ್ಷಿಸಿ ಬೆಳೆಸಬೇಕೆ ಹೊರತು ಅನ್ಯ ಭಾಷೆದವರು ಇದನ್ನು ಉಳಿಸಲು ಪ್ರಯತ್ನ ಎಂದಿಗೂ ಮಾಡಲಾರರು. ಕನ್ನಡಕ್ಕೆ ಕನ್ನಡವೇ ಸರಿಸಾಟಿಯಾಗಿದ್ದು, ಕನ್ನಡದ ಬಗ್ಗೆ ಸರ್ವರೂ ಹೆಮ್ಮೆ ಪಡಬೇಕು ಎಂದರು.ತಾಲೂಕಿನ ಕುಮಾರ ಪಟ್ಟಣ ತುಂಗಭದ್ರಾ ನದಿ ದಡದಲ್ಲಿರುವ ಪುಣ್ಯಕೋಟಿ ಮಠದ ಜಗದೀಶ್ವರ ಸ್ವಾಮೀಜಿಯವರು ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಪಾತ್ರ ಬಹಳಷ್ಟಿದೆ. ಕನ್ನಡದ ನೆಲ,ಜಲ, ಭಾಷೆ, ಸಂಸ್ಕೃತಿಗೆ ದಕ್ಕೆ ಬಾರದಂತೆ ನಾವುಗಳೆಲ್ಲರೂ ಶ್ರಮಿಸಬೇಕಾಗಿದೆ ಎಂದರು. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಶಿವಕುಮಾರ ಜಾಧವ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭಾ ಸದಸ್ಯ ಪ್ರಕಾಶ ಬುರಡಿಕಟ್ಟಿ. ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ , ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ರೈತ ಮುಖಂಡರಾದ ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ, ಮಂಜುನಾಥ ಗೌಡಶಿವಣ್ಣನವರ, ಜಟ್ಟೆಪ್ಪ ಕರೇಗೌಡ್ರ, ಚಂದ್ರಣ್ಣ ಬೇಡರ, ರಾಮಣ್ಣ ನಾಯಕ, ರಮೇಶ ಜಾಧವ, ಮಂಜುನಾಥ ದುಗ್ಗತ್ತಿ, ಯಲ್ಲಪ್ಪ ಹೆಚ್ ಸಿ, ಡಾ. ನಾಗರಾಜ ಚಳಗೇರಿ, ಎಚ್ ಎಫ್ ಅಕ್ಕಿ, ಹನುಮಂತಪ್ಪ ಚಳಗೇರಿ, ಕಲಾವಿದರಾದ ಪರಶುರಾಮ ಬಣಕಾರ, ಉದಯರಾಜ ಕೊಳಜಿ, ರಾಜು ಸೂರ್ವೇ , ಗುರುನಾಥ ಹುಬ್ಬಳ್ಳಿ, ಮೋಹನ ಜಾಧವ, ಗುಡ್ಡರಾಜ ಹಲಗೇರಿ, ಗಂಗಾ ಮೊಟೇಬೆನ್ನೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು