ಶಿಗ್ಗಾವ್

ಗ್ರಾಮೀಣ ಪ್ರದೇಶ ಜನರು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿ : ಜೋಶಿ

ಗ್ರಾಮೀಣ ಪ್ರದೇಶ ಜನರು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿ : ಜೋಶಿ

ಲೋಕದರ್ಶನ ವರದಿ

ಶಿಗ್ಗಾವಿ : ರಾಜಕೀಯ ಹೊರತು ಸಾಮಾಜಿಕ ಜವಾಬ್ದಾರಿಯನ್ನು ಹೊತ್ತು ಪ್ರಲ್ಹಾದ ಜೋಶಿ ಸೇವೆ ಮಾಡುತ್ತಿದ್ದು, ಗ್ರಾಮೀಣ ಪ್ರದೇಶ ಜನರು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಗೋವಿಂದ ಜೋಶಿ ಹೇಳಿದರು.

 ತಾಲೂಕಿನ ಕುನ್ನುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಕ್ಷಮತಾ ಸೇವಾ ಸಂಸ್ಥೆ ಹುಬ್ಬಳ್ಳಿ, ಮೃತ್ಯುಂಜಯ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಶಿಗ್ಗಾವಿ ಡಾ ಎಂ ಎಂ ಜೋಶಿ ನೇತ್ರ  ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಇವರ ಸಹಯೋಗದಲ್ಲಿ ನಡೆದ ಉಚಿತ ವೈದ್ಯಕೀಯ  ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

 ಸಮಾಜದ ಎಲ್ಲವನ್ನೂ ಪಡೆದಿದ್ದೇವೆ ನಾವು ಸಮಾಜಕ್ಕೆ ನಮ್ಮಿಂದ ಅಲ್ಪ ಸೇವೆ ನೀಡುವ ಉದ್ದೇಶದಿಂದ ಈ ಕಾರ್ಯ   ಜೋಶಿಯವರು ಮಾಡುತ್ತಿದ್ದಾರೆ ಎಂದರು, ಪ್ರತಿಷ್ಠಿತ ವೈದ್ಯರು ಸಲಹೆ ಪಡೆದು ಗ್ರಾಮೀಣ ಪ್ರದೇಶದ ಬಡ ಜನರನ್ನು ಆರೋಗ್ಯಯುತ ಜೀವನ ನಡೆಸಲು ಅವಕಾಶ ಸಿಕ್ಕಂತಾಗುತ್ತದೆ ಎಂದರು.

ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಕಡು ಬಡತನದಲ್ಲಿ ತಮ್ಮ ಕುಟುಂಬ ನಿರ್ವಹಣೆ ಕಷ್ಟಕರ ಆಗಿದೆ ಜನರ ಮನದಲ್ಲಿ ಇಟ್ಟುಕೊಂಡೇ ಹಲವಾರು ಸಂಸ್ಥೆಗಳು ಉಚಿತ ವೈದ್ಯಕೀಯ ಶಿಬಿರ ಹಮ್ಮಿಕೊಂಡಿದ್ದು ಶ್ಲಾಘನೀಯ ಸಂಗತಿ, ಕ್ಯಾನ್ಸರ, ಚಿಕ್ಕ ಮಕ್ಕಳ, ಹೃದಯ, ಕಣ್ಣು ಮುಂತಾದ ವಿಭಾಗದ ವೈದ್ಯ ತಜ್ಞರು ಗ್ರಾಮೀಣ ಪ್ರದೇಶದ ಜನರ ಆರೋಗ್ಯ ತಪಾಸಣೆ ಆಗಮಿಸಿದ್ದು ನಮ್ಮ ನಿಮ್ಮೆಲ್ಲರ ಪುಣ್ಯದ ಕೆಲಸ ಎಂದರು.

 ಗ್ರಾಮ ಪಂಚಾಯತಿ ಅಧ್ಯಕ್ಷ ಮಹೇಶ ಚಿಕ್ಕವಿರಮಠ ಗ್ರಾಮೀಣ ಪ್ರದೇಶ ಜನರು ಕೆಲಸ ಕಾರ್ಯಗಳ ಮಧ್ಯ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸದಾ ಕುಟುಂಬದ ನಿರ್ವಹಣೆ ದುಡಿದು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದಿಲ್ಲ ಇಂತಹ  ಆರೋಗ್ಯ ತಪಾಸಣೆ ಶಿಬಿರದ ಪ್ರಯೋಜನ ಪಡೆದು ತಮ್ಮ ಕಾಯಿಲೆ ಇರುವವರು ಗುರುತಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ರಾಜ್ಯ ಪ್ರಶಸ್ತಿ ವಿಜೇತ ಜಯದೇವ ಅಗಡಿ ಮಾತನಾಡಿ ವಿಜ್ಞಾನದ ಬಹಳಷ್ಟು ಮುಂದೆ ವರದಿದ್ದು ಪ್ರಾಚೀನ ಕಾಲದಲ್ಲಿ ಗೆಡ್ಡೆ ಗೆಣಸು ಹಣ್ಣು ತರಕಾರಿ ಸೇವಿಸದೆ ಪಾಸ್ಟ್ಫುಡ್ ಮೊರೆ ಹೋಗಿ ತಮ್ಮ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ ಎಂದರು.

ಎಸ.ಡಿ.ಎಂ.ಸಿ ಅಧ್ಯಕ್ಷ ಫಕ್ಕೀರಗೌಡ ಜಕ್ಕನಕಟ್ಟಿ, ಗ್ರಾಮ ಪಂಚಾಯತಿ ಸದಸ್ಯರಾದ ರಾಮಣ್ಣ ಇಂದೂರ, ಬಸನಗೌಡ ಬ್ಯಾಹಟ್ಟಿ, ಡಿ ಆರ್ ಬೂಮ್ಮನಳ್ಳಿ, ಹನುಮಂತ ಮಾನೆ, ಡಾ. ಎಂ.ಎಂ ತಿರ್ಲಾಪೂರ, ಡಾ. ರಾಣಿ ತಿರ್ಲಾಪೂರ, ತಜ್ಞವೈದ್ಯರು ಆಶಾ ಕಾರ್ಯಕರ್ತೆಯರು ಸುತ್ತ ಮುತ್ತಲಿನ ಗ್ರಾಮಸ್ಥರು ಇದ್ದರು.

**ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 500 ಜನ ರೋಗಿ ನಿರೋಗಿಗಳು ಸಣ್ಣ ಪುಟ್ಟ ತೊಂದರೆ ನರರೋಗ, ಎಲುಬು ಕೀಲು,  ಸ್ತ್ರೀ ಪ್ರಸೂತಿ, ನೇತ್ರ ತಪಾಸಣೆಯ ಸದುಪಯೋಗ ಪಡಿಸಿಕೊಂಡರು.

-ನರಹರಿ ಕಟ್ಟಿ ಭಾಜಪ ಯುವ ಮೋರ್ಚಾ ರಾಜ್ಯ ಸಮಿತಿ ಸದಸ್ಯ 

ಸುದ್ದಿ ಓದಿ