ಸಿಂಧಗಿ

ಹೂಗಾರ ಸಮಾಜದವರು ಹೂವಿನ ಮನಸ್ಸು ಹೊಂದಿದವರು: ದೇವರೆಡ್ಡಿ

ಹೂಗಾರ ಸಮಾಜದವರು ಹೂವಿನ ಮನಸ್ಸು ಹೊಂದಿದವರು: ದೇವರೆಡ್ಡಿ
ಸಿಂದಗಿ : ಪಟಟ್ಣದಲ್ಲಿ ಶರಣ ಹೂಗಾರ ಮಾದಯ್ಯನವರ ಜಯಂತಿ ಆಚರಿಸಲಾಯಿತು

ಸಿಂದಗಿ10: ಹೂಗಾರ ಸಮಾಜದವರು ಹೂವಿನ ಮನಸ್ಸು ಹೊಂದಿದವರು. ಹೂವು ಬಾಡುತ್ತದೆ, ಆದರೆ ಹೂಗಾರ ಸಮಾಜದವರ ಮನಸ್ಸು ಬಾಡದೆ, ಸಮಾಜವನ್ನು ಅರಳಿಸುವ ಕೆಲಸ ಮಾಡುತ್ತಿದೆ ಎಂದು ಕಸಾಪ ತಾಲೂಕಾ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ ಹೇಳಿದರು.

ಪಟ್ಟಣದ ಶರಣ ಹೂಗಾರ ಮಾದಯ್ಯ ಸೌಹಾರ್ದ ಸಹಕಾರಿ ನಿ. ಸಭಾಭವನದಲ್ಲಿ ಶರಣ ಹೂಗಾರ ಮಾದಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾ ಮಾತನಾಡಿದರು.

12 ನೇ ಶತಮಾನದಲ್ಲಿ ಹೂಗಾರ ಮಾದಯ್ಯನವರು ಕಾಯಕದಲ್ಲಿ ಮುಕ್ತಿ ಮಾರ್ಗವಿದೆ ಎಂದು ಜಗತ್ತಿಗೆ ಸಾರಿದ್ದಾರೆ. ಕಾಯಕ ಜೀವಿಯಾಗಿದ್ದ ಶರಣ ಮಾದಯ್ಯ ಯಾರ ಮನಸ್ಸಿಗೂ ನೋವು ಮಾಡಿದವರಲ್ಲ ಎಂದರು.

ತಾಲೂಕಾ ಹೂಗಾರ ಸಮಾಜದ ಅಧ್ಯಕ್ಷ ಸುರೇಶ ಪೂಜಾರಿ ಮಾತನಾಡಿ, ಹೂಗಾರ ಸಮಾಜ 12ನೇ ಶತಮಾನದಲ್ಲಿ ಎಲ್ಲ ಸಮುದಾಯಗಳ ಜೊತೆಗೆ ಅನ್ಯೋನ್ಯದಿಂದ ಕಾಯಕ ಮಾಡುತ್ತಿದೆ. ಶರಣ ಪರಂಪರೆಯಲ್ಲಿ ಕಾಯಕ ನಂಬಿದ ಶರಣ ಹೂಗಾರ ಮಾದಯ್ಯ ಅವರು 700 ಗಣಂಗಗಳಲ್ಲಿ ಗುರುತಿಸಿಕೊಂಡವರು. 

ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಪೂಜಾರ ಮಾತನಾಡಿ, ಶರಣರ ಕಾಲದಲ್ಲಿ ಕಾಯಕ ತತ್ವ ಪರಿಪಾಲನೆಯ ಭಾಗವಾಗಿ ಹೂವು, ಪತ್ರಿ ಪೂಜೆಗೆ ನೀಡುವ ಮೂಲಕ ತಮ್ಮ ಬದ್ದತೆ ಪ್ರದರ್ಶಸಿದ್ದರು. ಹೂಗಾರ ಮಾದಯ್ಯ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಅಲ್ಲದೇ ಶರಣ ಹೂಗಾರ ಮಾದಯ್ಯ ಜಯಂತಿ ಸರಕಾರದಿಂದ ಆಚರಣೆ ಮಾಡುವಂತಾಗಬೇಕು ಎಂದು ಹೂಗಾರ ಸಮಾಜದ ಒತ್ತಾಯವಾಗಿದೆ ಎಂದು ಹೇಳಿದರು.

ಶ್ರೀ ಶರಣ ಹೂಗಾರ ಮಾದಯ್ಯ ಸೌಹಾರ್ದ ಸಹಕಾರಿ ನಿ. ಅಧ್ಯಕ್ಷ ಮಲ್ಲು ಪೂಜಾರಿ, ಅಂಬಣ್ಣ ಹೂಗಾರ, ಶಂಕರ ಹೂಗಾರ ಮಾತನಾಡಿ, ಶರಣರ ಕಾಲದಲ್ಲಿ ಪೂಜೆಗೆ ಹೂ, ಪತ್ರಿ ನೀಡುವ ಕಾಯಕ ಶರಣ ಹೂಗಾರ ಮಾದಯ್ಯ ಮಾಡುತ್ತಿದ್ದರು. ಇಂದಿಗೂ ಹೂಗಾರ ಸಮಾಜ ನಾಡಿನ ಎಲ್ಲಾ ಸಮುದಾಯಗಳ ಜೊತೆಗೆ ಪ್ರೀತಿ ವಿಶ್ವಾಸದೊಂದಿಗೆ ಹೂ, ಪತ್ರಿ ನೀಡುವ ಕಾಯಕ ಮಾಲಾಗುತ್ತಿದೆ ಎಂದು ಹೇಳಿದರು.ಹೂಗಾರ ಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.


ಸುದ್ದಿ ಓದಿ