ರೋಟರಿ ಸಂಸ್ಥೆಗೆ ಪ್ರಥಮ ಸ್ಥಾನ:ಸಮಾಜಮುಖಿ ಸೇವೆಗೆ ಸಂದ ಗೌರವ - ಜಯಣ್ಣ ಜಂಬಿಗಿ
ರೋಟರಿ ಸಂಸ್ಥೆಗೆ ಪ್ರಥಮ ಸ್ಥಾನ:ಸಮಾಜಮುಖಿ ಸೇವೆಗೆ ಸಂದ ಗೌರವ - ಜಯಣ್ಣ ಜಂಬಿಗಿ
ರಾಣೇಬೆನ್ನೂರ: ನ 4ನಾಡು ಸೆರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ, ರೋಟರಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯು, ತನ್ನದೇ ಆದ ವಿಶಿಷ್ಟ ಸೇವೆಗಳ ಮೂಲಕ, ಸಮುದಾಯದಲ್ಲಿ ಗುರುತಿಸಿಕೊಂಡಿದೆ ಎಂದು 3170 ರೋಟರಿ ಜಿಲ್ಲಾ ರಾಜ್ಯಪಾಲ ನಾಸಿರಸಾಬ್ ಬೊರ್ಸೋಡೋವಾಲಾ ಹೇಳಿದರು. ಅವರು, ಕೊಲ್ಲಾಪುರದಲ್ಲಿ ನಡೆದ 2023 ಮತ್ತು 24ನೇ ಸಾಲಿನ ರೋಟರಿ ಸೇವಾ ಸಂಸ್ಥೆಗಳಿಗೆ ಕೊಡ ಮಾಡುವ , ಅತ್ಯುತ್ತಮ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸರಕಾರಗಳು ಮಾಡಬಹುದಾದ ಎಲ್ಲಾ ರೀತಿಯ ಜನಪದ ಕಾರ್ಯಗಳು, ರೋಟರಿ ಸಂಸ್ಥೆ ಸೇರಿದಂತೆ, ಇನ್ನಿತರೇ ಎಲ್ಲಾ ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ, ವಿವಿಧ ರೂಪದಲ್ಲಿ ಸೇವೆ ಸಲ್ಲಿಸುತ್ತಲ್ಲಿವೆ. ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ, ರಾಣೆಬೆನ್ನೂರು ರೋಟರಿ ಮಾಜಿ ಅಧ್ಯಕ್ಷ, ಜಯಣ್ಣ ಜಂಬಿಗಿ ಅವರು, ತಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲ ಸದಸ್ಯರು ನೀಡಿದ, ಪ್ರಾಂಜಲ ಮನಸ್ಸಿನ ಸಹಾಯ ಮತ್ತು ಸಹಕಾರದಿಂದ, ಪ್ರತಿಷ್ಠಿತ ಪ್ರಶಸ್ತಿಗಳು ದಕ್ಕಿವೆ. ಇದರಿಂದ ತಮ್ಮ ಸಂಸೆಗೆ ಮತ್ತು ವೈಯಕ್ತಿಕವಾಗಿ ತುಂಬಾ ಸಂತೋಷ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಜನಪರ ಸೇವೆಯೇ ಜನಾರ್ದನ ಸೇವೆ ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟಿರುವ ರೋಟರಿ ಸಂಸ್ಥೆಯು ವಿವಿಧ ರೂಪದಲ್ಲಿ ತನ್ನ ಸೇವೆಯಲ್ಲಿ ಸಾಗಿದೆ ಎಂದ ಅವರು ರೋಟರಿ ಅನೇಕ ಉದ್ದೇಶಗಳನ್ನು ಇಟ್ಟುಕೊಂಡಿದೆ ಅವುಗಳೆಲ್ಲವು ಸಾಕಾರ ಗೊಳಿಸಲು, ಸದಸ್ಯರ, ಜನ ಸಮುದಾಯದ ಪ್ರೋತ್ಸಾಹ ಅಗತ್ಯ ಎಂದರು. ಜಿಲ್ಲಾ ರೋಟರಿ 3170 ರಾಣೆಬೆನ್ನೂರು ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿದ್ದ, ರೊ, ಜಯಣ್ಣ (ಸುಜೀತ) ಚ ಜಂಬಗಿ, ಯವರು ನೀಡಿದ ಅತ್ಯುತ್ತಮ ಸೇವೆಗಾಗಿ ಪ್ರಥಮ ಸ್ಥಾನ.ಕಾರ್ಯದರ್ಶಿ, ಪುಟ್ಟರಾಜ ಅಂಗಡಿ, ಅವರನ್ನು ಉತ್ತಮ ಕಾರ್ಯದರ್ಶಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಬ್ಯಾಡಗಿಯ ಸಹಾಯಕ ರಾಜ್ಯಪಾಲ ಮಾಲತೇಶ ಅರಳಿಮಟ್ಟಿ, ಸದಸ್ಯ ಶಿವಯೋಗಿ ಅಂಗಡಿ, ಜಿಲ್ಲಾ ಕಾರ್ಯದರ್ಶಿ ಸಂಜು ವಾಸುಕಿ ಸೇರಿದಂತೆ, ರೋಟರಿ ಸದಸ್ಯರು, ಮಾಜಿ ಅಧ್ಯಕ್ಷರು, ಮತ್ತಿತರ ಗಣ್ಯರು , ಉಪಸ್ಥಿತರಿದ್ದರು.