ರಾಣೆಬೆನ್ನೂರ

ಕಾಣೆಯಾದ ವ್ಯಕ್ತಿಯ ಪತ್ತೆ

ಕಾಣೆಯಾದ ವ್ಯಕ್ತಿಯ ಪತ್ತೆ

ಕಾಣೆಯಾದ ವ್ಯಕ್ತಿಯ ಪತ್ತೆ

ರಾಣಿಬೆನ್ನೂರ 22 : ಹೊಲಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ಇದುವರೆಗೂ ಮರಳಿ ಮನೆಗೆ ಬಾರದೆ ಕಾಣೆಯಾದ ಘಟನೆ ತಾಲೂಕಿನ ನಾಗೇನಹಳ್ಳಿ ಗ್ರಾಮದ ಘಟನೆ ನಡೆದಿದೆ. ಅದೇ ಗ್ರಾಮದ ಶಶಿಕುಮಾರ ಈರ​‍್ಪ ಬೆಂಕಿಗೌಡ್ರ ಎಂಬಾತ ಮನೆಯಿಂದ ಹೊರಗೆ ಹೋದವನು ಕಾಣೆಯಾಗಿದ್ದಾನೆ.  

    ಕಾಣೆಯಾದ ವ್ಯಕ್ತಿಯ ಚಹರೆ: ವಯಸ್ಸು 33, 5 ಫೂಟು 06 ಇಂಚು ಎತ್ತರ, ಕೋಲು ಮುಖ, ತೆಳ್ಳನೆಯ ಮೈಕಟ್ಟು, ಸಾದಾಗಪ್ಪು, ಮೈಬಣ್ಣ, ನೀಟಾದ ಮೂಗು, ತಲೆಯಲ್ಲಿ ಕಪ್ಪು ಕೂದಲು ಇವೆ. ಈತನು ಮನೆಯಿಂದ ಹೊರಡುವಾಗ ಹಸಿರು ಬಣ್ಣದ ಟೀ ಶರ್ಟ್‌, ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದಾನೆ. ವ್ಯಕ್ತಿ ಎಲ್ಲಿಯಾದರೂ ಪತ್ತೆಯಾದಲ್ಲಿ ಹಲಗೇರಿ ಪೊಲೀಸ್ ಠಾಣೆ:- 9480804554, ಕುಮಾರಪಟ್ಟಣ ವೃತ್ತ:- 9480804536, ರಾಣೇಬೆನ್ನೂರು ಉಪವಿಭಾಗ:- 9480804521, ಹಾವೇರಿ ಜಿಲ್ಲೆ ಪೊಲೀಸ್ ಕಂಟ್ರೋಲ್ ರೂಂ:- 9480804550 ಗೆ ಸಂಪರ್ಕಿಸಲು ಹಲಗೇರಿ ಪಿಎಸ್‌ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  



ಸುದ್ದಿ ಓದಿ