ದೊಡ್ಡಪೇಟೆ ಬಸವೇಶ್ವರ ದೇವಸ್ಥಾನದಿಂದ ರೈತರ ಪ್ರತಿಭಟನಾ ಮೆರವಣಿಗೆ
ದೊಡ್ಡಪೇಟೆ ಬಸವೇಶ್ವರ ದೇವಸ್ಥಾನದಿಂದ ರೈತರ ಪ್ರತಿಭಟನಾ ಮೆರವಣಿಗೆ
ರಾಣೇಬೆನ್ನೂರ 03: ನ 3ದಿನದಿಂದ ದಿನಕ್ಕೆ ಭಾರಿ ಸದ್ದು ಮಾಡುತ್ತಿರುವ ವಕ್ಪ್ ಪ್ರಕರಣ ಇದೀಗ ರಾಣೆಬೆನ್ನೂರಿಗೂ ಆವರಿಸಿ ರೈತರಲ್ಲಿ ಹಾಗೂ ನಾಗರೀಕರಲ್ಲಿ ಆಕ್ರೋಶದ ಜೊತೆಗೆ ಹೆಚ್ಚಿನ ಆತಂಕ ಮೂಡಿಸಿದ್ದು, ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೆಲ ರೈತರ ಜಮೀನುಗಳಲ್ಲಿ ವಕ್ಪ್ ಆಸ್ತಿ ಎಂದು ಪಹಣಿಯಲ್ಲಿ ಹೆಸರು ನೊಂದಾವಣೆಯಾಗಿರುವುದು ರೈತರ ಆಕ್ರೋಶಕ್ಕೆ, ಆತಂಕಕ್ಕೆ ಮೂಲ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಕ್ಪ್ ಆಸ್ತಿಯ ಸರ್ವೆ ನಂಬರಗಳಲ್ಲಿ ತಮ್ಮ ಜಮೀನಿನ ಸರ್ವೆ ನಂಬರ ನಮೂದಾಗಿರುವದು ರೈತರ ಆತಂಕ ಇಮ್ಮಡಿಗೊಳಿಸಿದೆ. ಈ ಹಿನ್ನಲೆಯಲ್ಲಿ ರವಿವಾರ ನಗರದ ಶ್ರೀಕೊಟ್ಟೂರೇಶ್ವರ ದೇವಸ್ಥಾನದಲ್ಲಿ ನಡೆದ ರೈತರ ಸಭೆಯ ಆನಂತರ ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಪ್ರಭುಸ್ವಾಮಿ ಕರ್ಜಗಿಮಠ ಮಾಹಿತಿ ನೀಡಿದರು. ಈಗಾಗಲೇ ಈ ಆಸ್ತಿಗಳನ್ನು ವಕ್ಪ್ ಬೋರ್ಡಿಗೆ ಸೇರಿಸಬೇಕೆಂದು ಅನೇಕ ಮುಖಂಡರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆಂದು ಹೇಳಲಾಗಿದ್ದು, ಈ ಪ್ರಸ್ಥಾವನೆ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಗೆ ನಿರ್ಧರಿಸಿರುವುದಾಗಿ ಹೇಳಿದರು. ಇನ್ನೋರ್ವ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ ನಗರ ಸೇರಿದಂತೆ ಗಂಗಾಜಲ ತಾಂಡಾ, ಕವಲೆತ್ತು, ಹಲಗೇರಿ, ಮೇಡ್ಲೇರಿ, ಕುಪ್ಪೇಲೂರ, ಐರಣಿ ಮತ್ತಿತರ ಸ್ಥಳಗಳಲ್ಲಿ ಅಂದಾಜು ಸಹಸ್ರಕ್ಕೂ ಅಧಿಕ ಎಕರೆ ವಿಸ್ತೀರ್ಣದ ಆಸ್ತಿಗಳು ವಕ್ಪ್ ಗೆ ಸೇರಿಸಲಾಗಿದೆ ಎಂದು ರೈತರು ಆರೋಪಸುತ್ತಿದ್ದು, ಈ ಸಂಭಂದ ರೈತರ ಉತಾರಗಳಲ್ಲೂ ವಕ್ಪ್ ಎಂದು ನಮೂದಾಗಿದೆ ಎಂದವರು ತಿಳಿಸಿದರು. ರೈತರು ಯಾವುದೇ ಕಾರಣಕ್ಕೂ ಆತಂಕ ಪಡಬಾರದು, ವಕ್ಪ್ ಆಸ್ತಿಯಂದು ಚಿಂತೆ ಮಾಡಬಾರದು, ಹೋರಾಟದ ಮೂಲಕ ಜಯ ಪಡೆಯಬೇಕು. ಆತಂಕಕ್ಕೆ ಒಳಗಾಗಿರುವ ಜನರು, ರೈತರು ನ. 4 ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10 ಗಂಟೆಗೆ ಇಲ್ಲಿನ ದೊಡ್ಡಪೇಟೆ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆಯ ಜೊತೆಗೆ ಬೈಕ್ ರ್ಯಾಲಿಯ ಮೂಲಕ ತೆರಳಿ ತಹಶೀಲ್ದಾರ, ಸರಕಾರ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗವುದು ಎಂದರು. ಯಾರೂ ಸಹ ಉದಾಸೀನ ತೋರಿಸದೆ ನಮಗೂ ಮುಂದಿನ ದಿನಗಳಲ್ಲಿ ಈ ಪ್ರಕರಣ ಬಿಸಿ ತಟ್ಟಲಿದೆ ಎಂದರಿತು ಅಂದು ನಡೆಯುವ ಪ್ರತಿಭಟನಾ ಮೆರವಣಿಗೆಯಲ್ಲಿ ರೈತರು, ನಾಗರೀಕರು ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಬಾಬಣ್ಣ ಕೊಪ್ಪದ, ರೇವಣಸಿದ್ದಯ್ಯ ನೂರಂದೇವರಮಠ, ಕೊಟ್ರ್ಪ ಸಿದ್ದಾಳಿ, ಪ್ರಶಾಂತ ಹಿತ್ತಲಮನಿ, ಬಸವರಾಜ ಗೌಳಿ, ಮಂಜುನಾಥ ಗೌಳಿ, ಶಂಭು ಹಿತ್ತಲಮನಿ, ವೆಂಕಟೇಶ ಹುಬ್ಬಳ್ಳಿ, ಬಿದ್ದಾಡೆಪ್ಪ ಚಕ್ರಸಾಲಿ, ಮಂಜಣ್ಣ ಪಾಮೇನಹಳ್ಳಿ, ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.ಊ3-ಖಓಖ11-ನ್ಯೂಸ್. ಂಓಆ. ಕಊಓಖಿಓ.