ಧಾರವಾಡ - ಹುಬ್ಬಳ್ಳಿ

ರೈತ ಕೃಷಿ ಕಾರ್ಮಿಕರ ಸಂಘಟನೆ ಧಾರವಾಡ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ

ರೈತ ಕೃಷಿ ಕಾರ್ಮಿಕರ ಸಂಘಟನೆ ಧಾರವಾಡ   ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ

ರೈತ ಕೃಷಿ ಕಾರ್ಮಿಕರ ಸಂಘಟನೆ ಧಾರವಾಡ   ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ 

ಧಾರವಾಡ 11 : ಗೊಂಜಾಳ  ( ಮೆಕ್ಕೆಜೋಳಕ್ಕೆ ) ಈ ಕೂಡಲೇ ಬೆಂಬಲ ಬೆಲೆ ರೂ.3,000 ನೀಡಿ ಖರೀದಿ ಮಾಡಲು ಒತ್ತಾಯಿಸಿ  ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ( ಎ ಐ ಕೆ ಕೆ ಎಂ ಎಸ್ ) ವತಿಯಿಂದ  ಧಾರವಾಡ   ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.   

       ಧಾರವಾಡ ಜಿಲ್ಲೆಯ ಧಾರವಾಡ ಕಲಘಟಗಿ ಮತ್ತು ಅಳ್ನಾವರ ತಾಲೂಕಿನ ರೈತರುಗಳಾದ ನಾವು  ಗೊಂಜಾಳವನ್ನು  ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದೇವೆ . ಈ ಬೆಳೆಯೇ ನಮ್ಮ ಜೀವನಕ್ಕೆ ಆಧಾರವಾಗಿದೆ. ಕಳೆದ ವರ್ಷ ಬರಗಾಲದಿಂದ  ಗೊಂಜಾಳ  ಮಣ್ಣುಪಾಲಾಯಿತು. ಈ ವರ್ಷ ಉತ್ತಮ ಮಳೆಯಾದ ಕಾರಣ, ಉತ್ತಮ ಫಸಲು ಪಡೆಯಬಹುದು ಎಂಬ ನೀರೀಕ್ಷೆಯಲ್ಲಿದ್ದ ನಮಗೆ, ಗೋಂಜಳ ಕೈ ಸೇರುವ ಹೊತ್ತಿಗೆ, ಅಕಾಲಿಕ ವಿಪರೀತ  ಮಳೆಯಿಂದಾಗಿ ನೀರೀಕ್ಷಿತ ಪ್ರಮಾಣದಲ್ಲಿ ಫಸಲು ಬಾರದೆ ನಿರಾಸೆ ಉಂಟು ಮಾಡಿದೆ. ಇಂತಹ ಸಂದರ್ಭದಲ್ಲಿ ಕೈಗೆ ಬಂದಿರುವ ಅಲ್ಪಸ್ವಲ್ಪ ಗುಂಜಾಳವನ್ನು  ಮಾರಾಟ ಮಾಡಲು ಹೋದರೆ ಕಳೆದ ವಾರದಲ್ಲಿ, 3000 ದಿಂದ 3200 ವರೆಗೆ ಮಾರಾಟವಾಗಿದ್ದ, ಗೊಂಜಾಳ  ಈಗ 1800-2000 ಮಾರಾಟವಾಗುತ್ತಿರುವುದರಿಂದ ರೈತರ ಚಿಂತೆಗೀಡು ಮಾಡಿದೆ. ನಾಲ್ಕು ಕೆಜಿ ಗುಂಜಾಳ  ಬೀಜಕ್ಕೆ 1500 ರಿಂದ 2000 ಕೊಟ್ಟು ತಂದು ಬಿತ್ತನೆ ಮಾಡಿದ್ದೇವೆ. ಅದೇ ಗುಂಜಾಳ ಮಾರುಕಟ್ಟೆಗೆ ಮಾರಾಟಕ್ಕೆ ಹೋದರೆ 1000 ಕೆಜಿ  ಗೊಂಜಾಳಕ್ಕೆ  1800 -2000 ಕೇಳುತ್ತಿದ್ದಾರೆ. ಗುಂಜಾಳ ಬೆಳೆಯಲು ಬೀಜ ಗೊಬ್ಬರ, ಕೀಟನಾಶಕ ಸಿಂಪಡಿಸಲು  ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಈ ಪರಿಸ್ಥಿತಿಯಲ್ಲಿ ನಾವು ಮಾರಾಟ ಮಾಡಿದರೆ,  ಖರ್ಚು ಮಾಡಿದ ಹಣ ವಾಪಸ್ ಬಾರದೆ ನಮ್ಮ ದುಡಿಮೆ ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ. ಹಾಗಾಗಿ ತಾವುಗಳು ಈ ಕೂಡಲೇ ಗೊಂಜಾಳ ಬೆಳೆಗೆ  ಕನಿಷ್ಠ 3,000 ಕ್ವಿಂಟಲ್ ಗೆ  ನಿಗದಿ  ಮಾಡಬೇಕಾಗಿ ಮನವಿ ಮಾಡುತ್ತೇವೆ. 

ಬೇಡಿಕೆಗಳು : 1. ಗೊಂಜಾಳ ( ಮೆಕ್ಕೆಜೋಳಕ್ಕೆ ) ಬೆಂಬಲ ಬೆಲೆ ಖಾತ್ರಿಪಡಿಸಿ. 

2. ಗೊಂಜಾಳ ಕರೆದಿ ಕೇಂದ್ರ ಈ ಕೂಡಲೇ  ತೆರೆಯಬೇಕು. 

3. ಸೂಟ್ ಮುರಿಯದನ್ನು  ನಿಲ್ಲಿಸಿ  . 

4. ಗೊಂಜಾಳಕ್ಕೆ ಬೆಳೆ ನಷ್ಟ ಪರಿಹಾರ ನೀಡಬೇಕು. 

ಈ ಸಂದರ್ಭದಲ್ಲಿ ದೀಪಾ ಧಾರವಾಡ  ಜಿಲ್ಲಾಧ್ಯಕ್ಷರು, 

 ಶರಣು ಗೋನವಾರ  ಜಿಲ್ಲಾ ಕಾರ್ಯದರ್ಶಿ, ಜಿಲ್ಲಾ ಉಪಾಧ್ಯಕ್ಷ ಹನುಮೇಶ ಹುಡೇದ, ರಾಣಪ್ಪ ಸಾವಂತ್ ನವರು,ಮಲ್ಲಪ್ಪ ಮನ್ಸೂರ, ನಾಗಪ್ಪ, ಹುಸೇನ್ ಸಾಬ್  ಮುಂತಾದವರು ಇದ್ದರು. 


ಸುದ್ದಿ ಓದಿ