ಮನರಂಜನೆ

ಡ್ರಗ್ಸ್ ಪ್ರಕರರಣ: ನಟಿ ರಿಯಾ ಚಕ್ರವರ್ತಿ ನ್ಯಾಯಾಂಗ ಬಂಧನ ವಿಸ್ತರಣೆ

ಡ್ರಗ್ಸ್  ಪ್ರಕರರಣ: ನಟಿ ರಿಯಾ ಚಕ್ರವರ್ತಿ ನ್ಯಾಯಾಂಗ ಬಂಧನ ವಿಸ್ತರಣೆ

ಮುಂಬೈ, ಸೆ 22 :ಸುಶಾಂತ್ ಸಿಂಗ್  ರಜಪೂತ್ ಸಾವಿನ  ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್‌ಸಿಬಿ ಪೊಲೀಸರಿಂದ  ಬಂಧನಕ್ಕೊಳಗಾಗಿರುವ ನಟಿ ರಿಯಾ ಚಕ್ರವರ್ತಿ ಅವರ   ನ್ಯಾಯಾಂಗ ಬಂಧನವನ್ನು ಅಕ್ಟೋಬರ್   6ರವರೆಗೂ ವಿಸ್ತರಿಸಲಾಗಿದೆ.ಬೈಕುಲ್ಲಾ ಜೈಲಿನಲ್ಲಿರುವ  ನಟಿ ರಿಯಾ ಅವರ  14 ದಿನಗಳ ನ್ಯಾಯಾಂಗ   ಬಂಧನದ ಅವಧಿ ಇಂದಿಗೆ  ಮುಗಿದ ಹಿನ್ನೆಲೆ    ಮುಂಬೈ ಎನ್‌ಡಿಪಿಎಸ್  ನ್ಯಾಯಾಲಯದ ಮುಂದೆ   ಹಾಜರು ಪಡಿಸಲಾಗಿತ್ತು.   ಹೆಚ್ಚಿನ ತನಿಖೆ    ಅಗತ್ಯವಿರುವ ಕಾರಣ ರಿಯಾಗೆ   ಮತ್ತೆ 14 ದಿನಗಳ   ಕಾಲ ಜೈಲು ವಾಸಕ್ಕೆ  ಕೋರ್ಟ್ ಆದೇಶಿಸಿದೆ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ರಿಯಾ ಚಕ್ರವರ್ತಿ ಡ್ರಗ್ಸ್ ನೀಡುತ್ತಿದ್ದರು ಎಂಬ ಆರೋಪದಲ್ಲಿ ಎನ್‌ಸಿಬಿ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 8 ರಂದು ರಿಯಾ ಅವರನ್ನು ಎನ್‌ಸಿಬಿ ತನ್ನ    ವಶಕ್ಕೆ ತೆಗೆದುಕೊಂಡು, , ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು.  ಸೆಪ್ಟೆಂಬರ್ 22ರವರೆಗೂ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಸೂಚನೆ ನೀಡಿತ್ತು.

  ನಟಿ ರಿಯಾ ಚಕ್ರವರ್ತಿ, ಸಹೋದರ ಶೌವಿಕ್ ಚಕ್ರವರ್ತಿ, ಸುಶಾಂತ್ ಮ್ಯಾನೇಜರ್ ಸ್ಯಾಮುಯೆಲ್ ಮಿರಂಡಾ, ಜೈದ್ ಸೇರಿದಂತೆ ಎಲ್ಲ ಆರೋಪಿಗಳಿಗೂ ಅಕ್ಟೋಬರ್ 14ವರೆಗೂ ನ್ಯಾಯಾಂಗ ಬಂಧನ ವಿಸ್ತರಿಸಿದೆ. ಇನ್ನು ಹದಿನಾಲ್ಕು ದಿನಗಳ ಕಾಲ ರಿಯಾ ಚಕ್ರವರ್ತಿ ಬೈಕುಲ್ಲಾ ಜೈಲಿನ ಮಹಿಳಾ ವಿಭಾಗದ ಕೊಠಡಿಯಲ್ಲಿ ವಾಸವಾಗಿರಬೇಕಿದೆ.ರಿಯಾ ಚಕ್ರವರ್ತಿ ಮತ್ತು ಶೌವಿಕ್ ಚಕ್ರವರ್ತಿ ಜಾಮೀನಿಗಾಗಿ ಮುಂಬೈ ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 23 ರಂದು ಜಾಮೀನು ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಡ್ರಗ್ಸ್ ಪ್ರಕರಣದಲ್ಲಿ ಪೆಡ್ಲರ್‌ಗಳ ಜೊತೆ ಸಂಪರ್ಕದಲ್ಲಿದ್ದರು ಎಂಬ ಆರೋಪದಲ್ಲಿ ತನಿಖೆ ಮಾಡಿರುವ ಎನ್‌ಸಿಬಿ ಪೊಲೀಸರ ಬಳಿ ರಿಯಾ ಹಾಗೂ ಇನ್ನಿತರ ಆರೋಪಿಗಳು ಸಾಕಷ್ಟು ಮಾಹಿತಿ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ನಟಿಯರಿಗೆ ಎನ್‌ಸಿಬಿ ನೋಟಿಸ್ ನೀಡುವ ಸಾಧ್ಯತೆಯಿದೆ. 

ಸುದ್ದಿ ಓದಿ