ಧಾರವಾಡ - ಹುಬ್ಬಳ್ಳಿ

ಎಲ್ಲರಲ್ಲಿಯೂ ಲಯ, ರಾಗ ಇರುತ್ತದೆ ಸದುಪಯೋಗ ಪಡಿಸಿಕೊಳ್ಳಬೇಕು

ಎಲ್ಲರಲ್ಲಿಯೂ ಲಯ, ರಾಗ ಇರುತ್ತದೆ ಸದುಪಯೋಗ ಪಡಿಸಿಕೊಳ್ಳಬೇಕು

 ಎಲ್ಲರಲ್ಲಿಯೂ ಲಯ, ರಾಗ ಇರುತ್ತದೆ ಸದುಪಯೋಗ ಪಡಿಸಿಕೊಳ್ಳಬೇಕು 

ಧಾರವಾಡ 19 : ಸಂಗೀತವನ್ನು ಕಲಿಯಲು ಅತಿ ಸರಳ ಮಾಧ್ಯಮ ಕರೋಕೆ ಎಂದು ದೇವರಹುಬ್ಬಳ್ಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಂ.ಜಿ. ಅಂಗಡಿ ಅಭಿಪ್ರಾಯಪಟ್ಟರು   

ಕರ್ನಾಟಕ ವಿದ್ಯಾವರ್ಧಕ ಸಂಘವು, 69ನೇ ರಾಜ್ಯೋತ್ಸವ, ಕರ್ನಾಟಕ ನಾಮಕರಣ - 50ರ ಸಂಭ್ರಮ ಅಂಗವಾಗಿ ವೀಣಾ ಪತ್ತಾರ ಸಂಗೀತ ವರ್ಷಿಣಿ ಕಲಾ ತಂಡ, ಧಾರವಾಡ ಅವರಿಂದ ಆಯೋಜಿಸಿದ್ದ ‘ಕರೋಕೆ ‘ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  

ಮುಂದುವರೆದು ಮಾತನಾಡಿದ ಅವರು, ಎಲ್ಲ ಮನುಷ್ಯರಲ್ಲಿಯೂ ಲಯ, ರಾಗಗಳಿರುತ್ತವೆ. ಎಲ್ಲ ಮನುಷ್ಯನು ಸಂಗೀತ ಪ್ರೀಯನಾಗಿರುತ್ತಾನೆ. ಆದರೆ ಎಲ್ಲರಿಗೂ ಅವಕಾಶಗಳು ಸಿಗುವುದಿಲ್ಲ. ಸಮಯವು ಸಿಗುವುದಿಲ್ಲ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಕರೋಕೆ ಎಲ್ಲ ಅನುಕೂಲಕರ ಮಾಧ್ಯಮವಾಗಿ ಹೊರಹೊಮ್ಮಿದೆ. ಇತ್ತೀಚಿನ ದಿನಗಳಲ್ಲಿ ಕರೋಕೆ ಪ್ರಚೀಲಿತ ಹೊಂದುತ್ತಿದೆ. ಕರ್ನಾಟಕ ವಿದ್ಯಾವರ್ಧಕ ಸಂಘವು ಈ ಮಾಧ್ಯಮವನ್ನು ಗುರತಿಸಿ ಅವಕಾಶ ನೀಡಿದ್ದು ಬಹಳ ಸಂತೋಷವೆನಿಸಿದೆ. ರಾಜ್ಯದ ಮೂಲೆ ಮೂಲೆಗಳಿಂದ ಸಂಗೀತಗಾರರು ಬಂದು ಕಾರ್ಯಕ್ರಮವನ್ನು ನೀಡುತ್ತಿದ್ದಾರೆ. ಇವರೆಲ್ಲರೂ ವೃತ್ತಿಪರರು, ಹವ್ಯಾಸಿ ಸಂಗೀತಗಾರರು. ತಮ್ಮ ವೃತ್ತಿಯ ಜೊತೆಗೆ ‘ಕರೋಕೆ’ ಮಾಧ್ಯಮವನ್ನು ಉಪಯೋಗಿಸಿಕೊಂಡು ಸಂಗೀತದಲ್ಲಿ ತಲ್ಲೀನರಾಗಿದ್ದಾರೆ ಎಂದರು.  

ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಉಪಾಧ್ಯಕ್ಷ ಕೃಷ್ಣಾ ಕೊಳ್ಳಾನಟ್ಟಿ ಮಾತನಾಡಿ, ಸಂಗೀತವು ಎಲ್ಲರಿಗೂ ಎಲ್ಲರ ಮನಸ್ಸಿಗೂ ಉಲ್ಲಾಸ ನೀಡುವ ಒಂದು ಸಾಧನವಾಗಿದೆ. ಎಷ್ಟೇ ಕಷ್ಟ, ದುಃಖವಿದ್ದರೂ ಸಂಗೀತ ಕೇಳುವುದರಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಇತ್ತಿಚಿನ ದಿನಗಳಲ್ಲಿ ಸಾಮಾನ್ಯ ಮನುಷ್ಯನು ಸಹ ಅವಕಾಶ ಸಿಕ್ಕಾಗ ತನ್ನ ಪ್ರತಿಭೆಯನ್ನು ಪ್ರಚುರಪಡಿಸುತ್ತಿದ್ದಾನೆ. ಇದಕ್ಕೆ ಕಾರಣ ಕಾರಣ ಕರೋಕೆ ಮಾಧ್ಯಮ. ಎಲ್ಲರೂ ಮನೆಯಲ್ಲಿದ್ದುಕೊಂಡು ಯಾರ ಸಹಕಾರವಿಲ್ಲದೆ ಕರೋಕೆಯನ್ನು ಉಪಯೋಗಿಸಿಕೊಂಡು ಹಾಡುಗಾರರಾಗಬಹುದು. ಇಂತಹ ಕಾರ್ಯಕ್ರಮಗಳಿಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಅನುವು ಮಾಡಿಕೊಟ್ಟು, ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದರು.  

ಮುಖ್ಯ ಅತಿಥಿಯಾಗಿ ಪ್ರೊ. ಎಂ.ಐ. ಸಾವಂತ ಆಗಮಿಸಿದ್ದರು. ಕರೋಕೆ ಕಾರ್ಯಕ್ರಮದಲ್ಲಿ ಹಾಡುಗಳನ್ನು ಪ್ರಸ್ತುತಪಡಿಸಿದ ಕಲಾವಿದರಿಗೆ ಗೌರವಿಸಿ, ಸನ್ಮಾನಿಸಲಾಯಿತು.  

ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಸ್ವಾಗತಿಸಿ, ನಿರೂಪಿಸಿದರು. ಸಂಗೀತ ವರ್ಷಿಣಿ ಕಲಾ ತಂಡದ ಅಧ್ಯಕ್ಷೆ ವೀಣಾ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರುತಿ ಬಡವಣ್ಣವರ ವಂದಿಸಿದರು.  

ಕಾರ್ಯಕ್ರಮದಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಕಲಾವಿದರು ಬಂದು ಕರೋಕೆ ಹಾಡುಗಳನ್ನು ಪ್ರಸ್ತುತಪಡಿಸಿದರು. ಕ್ಲಾಸಿಕ್ ಮಹಾವಿದ್ಯಾಲಯದ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ