ರಾಣೆಬೆನ್ನೂರ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಯಾಗಬೇಕು : ದೇವರಾಜ್

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಯಾಗಬೇಕು : ದೇವರಾಜ್

ರಾಣೇಬೆನ್ನೂರು: ಜೂ 11 ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಮಾನವನ ಅವಿಭಾಜ್ಯ ಅಂಗವಾಗಬೇಕು ಅಂದಾಗ ಮಾತ್ರ ನಮ್ಮ ಸುತ್ತಮುತ್ತಲ ಪರಿಸರ ಹಸಿರಾಗಿದ್ದು ಸದಾಕಾಲವೂ ಮಾನಸಿಕ ಶಾಂತಿ ನೆಮ್ಮದಿಯ ಜೊತೆಗೆ ಆರೋಗ್ಯಕರ ಬೆಳವಣಿಗೆ ಕಾಣಲು ಸಾಧ್ಯವಾಗುವುದು ಎಂದು  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕ ಕೃಷಿ ಅಧಿಕಾರಿ ದೇವರಾಜ್ ಹೇಳಿದರು. ಅವರು ತಾಲೂಕಿನ ಮೆಡ್ಲೇರಿ ವಲಯ ಐರಣಿ ಕಾರ್ಯಕ್ಷೇತ್ರದಲ್ಲಿ ಎಸ್.ಕೆ. ಡಿ. ಆರ್. ಡಿ.ಪಿ ಆಯೋಜಿಸಿದ್ದ   ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ದಿನ ನಿತ್ಯದ ಶಿಕ್ಷಣದ ಜೊತೆ ಜೊತೆಗೆ, ಸಾಮಾಜಿಕ ಕಳಕಳಿಯನ್ನು ಹೊತ್ತು, ಪರೂಪಕಾರಿ  ಸೇವಾ ಕಾರ್ಯಗಳನ್ನು, ಬದುಕಿನಲ್ಲಿ ಅಳವಡಿಸಿಕೊಂಡು ಸಾಗಿದಾಗ ಮಾತ್ರ ಮಾನಸಿಕ ಶಾಂತಿ ನೆಮ್ಮದಿ ಹೊಂದಲು ಸಾಧ್ಯವಾಗುವುದು ಎಂದರು. ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಸುತ್ತಲೊ  ಆವರಣದಲ್ಲಿ ವಿವಿಧ ಬಗೆಯ ನೂರಾರು ಶಶಿಗಳನ್ನು ಹಚ್ಚಲಾಯಿತು.  . ಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಎಚ್ ಕೆ   ಅವರು ಪರಿಸರ ರಕ್ಷಣೆ ಮತ್ತು ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ವಿಷಯ ಕುರಿತು ಸಾಧ್ಯಂತವಾಗಿ ಮಾತನಾಡಿದರು.  ಮಕ್ಕಳು ಯಾವುದೋ ಕಾರ್ಯಕ್ರಮಗಳಿಗೆ  ಹಣ ಖರ್ಚು ಮಾಡುವುದರ ಬದಲು ಆ ಸಂದರ್ಭದ ನೆನಪಿಗಾಗಿ  ಒಂದೊಂದು ಗಿಡಗಳನ್ನು ತಂದು  ನೆಡುವುದನ್ನು  ಅಭ್ಯಾಸ ಮಾಡಿಕೊಳ್ಳಬೇಕು.   ಗಿಡ ಮರಗಳನ್ನು ಬೆಳೆಸಿರುವುದರಿಂದ ನಮ್ಮ ಸುತ್ತ ಮುತ್ತಲಿನ ಪರಿಸರ ಮತ್ತು ನಮ್ಮ ಆರೋಗ್ಯ ಚೆನ್ನಾಗಿರುತ್ತೆ ಎಂದು   ತಿಳಿಸಿದರು. ಇದೇ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ನಾಗಮ್ಮ ಚಳಗೇರಿ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವ ಸಹಾಯ ಸಂಘದ ಸದಸ್ಯರು  ಶಾಲೆಯ ಸಹ ಶಿಕ್ಷಕರು  ಶಾಲಾ ಮಕ್ಕಳು  ಮತ್ತು ಸೇವಾ ಪ್ರತಿನಿಧಿಗಳು  ಉಪಸ್ಥಿತರಿದ್ದರು.

ಸುದ್ದಿ ಓದಿ