ಹೂವಿನ ಹಡಗಲಿ

ಇಂಗ್ಲಿಷ್ ವಿಜ್ಞಾನ ಕಾರ್ಯಾಗಾರ

ಇಂಗ್ಲಿಷ್ ವಿಜ್ಞಾನ ಕಾರ್ಯಾಗಾರ

ಲೋಕದರ್ಶನ ವರದಿ

ಹೂವಿನ ಹಡಗಲಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಕಾರ್ಯಾಗಾರ ಪೂರಕವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ಹೇಳಿದರು.

ಪಟ್ಟಣದ ಎಂ ಎಂ ಪಾಟೀಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮಂಗಳವಾರ ಶಾಲಾ ಸಾಕ್ಷರತಾ ಶಿಕ್ಷಣ ಇಲಾಖೆತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘ, ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಕೆ ಇ ಎಸ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಇಂಗ್ಲಿಷ್ ವಿಜ್ಞಾನ ವಿಷಯ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿಜ್ಞಾನ ಇಂಗ್ಲಿಷ್ ಸ್ವಲ್ಪ ಕಠಿಣ. ಮಕ್ಕಳಿಗೆ ಅರ್ಥವಾಗುವಂತೆ ಸರಳವಾಗಿ ಬೋಧಿಸಿರಿ ಎಂದು ಹೇಳಿದರು.

ಇಂಗ್ಲಿಷ್ ವ್ಯಾಕರಣ ಪ್ರಬಂಧ ಪತ್ರ ಪ್ರಬಂಧ ಲೇಖನ ಮೊದಲಾದ ಅಂಶಗಳನ್ನು ಮಕ್ಕಳು ಸುಲಭವಾಗಿ ಬರೆಯುವಂತೆ ಕಲಿಸಬೇಕು.ವಿಜ್ಞಾನ ವಿಭಾಗದಲ್ಲಿ ಚಿತ್ರಗಳಿಂದಲೇ 14-16 ಅಂಕಗಳು ದೊರೆಯುತ್ತವೆ. ಅಂದವಾಗಿ ಚಿತ್ರ ರಚಿಸುವ ಸರಳ ವಿಧಾನಗಳನ್ನು ಅನುಸರಿಸಿ ಎಂದರು.ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಶಿವಲಿಂಗಪ್ಪ, ಉಪಾಧ್ಯಕ್ಷೆ ಮುದ್ದಿ ಕಸ್ತೂರಿ ಶೇಕ್ ಅಹ್ಮದ್, ಮುಖ್ಯ ಗುರುಗಳಾದ ಸೂರ್ಯಕಾಂತ್,ಕೆ ಶ್ರೀಕಾಂತ್ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್ ಮಲ್ಲಿಕಾರ್ಜುನ ಇತರರು ಉಪಸ್ಥಿತರಿದ್ದರು.ಸಂಪನ್ಮೂಲ ವ್ಯಕ್ತಿಗಳಾಗಿ ನವೀನ್ ಕುಮಾರ್ ಬಿ, ಗಣೇಶ್ ಪಿ ಶಿಕ್ಷಕರಿಗೆ ತರಬೇತಿ ನೀಡಿದರು. ಎಂ ಎಂ ಪಾಟೀಲ್ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಶಿಕ್ಷಕ ಸಹದೇವಪ್ಪ ನಿರ್ವಹಿಸಿದರು.ತಾಲೂಕಿನ ಸರ್ಕಾರಿ ಅನುದಾನಿತ ಅನುದಾನರಹಿತ ಮೊರಾರ್ಜಿ ವಸತಿ ಶಾಲೆಯ ಕನ್ನಡ ಗಣಿತ ವಿಷಯ ಶಿಕ್ಷಕರುಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.

ಸುದ್ದಿ ಓದಿ