ಉದ್ಯೋಗ ಖಾತರಿ ಯೋಜನೆಯಡಿ ಕೂಲಿಗಾರರಿಗೆ ಉದ್ಯೋಗ
ಸಂಬರಗಿ 25: ಗಡಿ ಭಾಗದ ಅರಳಿಹಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೆರೆ ಹೂಳು ಎತ್ತುವ ಕಾಮಗಾರಿ ಪ್ರಾರಂಭ ಮಾಡಿ ಕೂಲಿಗಾರರಿಗೆ ಕೆಲಸ ನೀಡಿ ಅನುಕೂಲ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಕೆಲಸಕ್ಕೆ ಹೋಗುವ ಕೂಲಿಗಾರರಿಗೆ ಉದ್ಯೋಗ ನೀಡಿದ್ದಾರೆ.
ಗಡಿ ಭಾಗದ ಗ್ರಾಮ ಸತತ ಬರಗಾಲಕ್ಕೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ, ಕೂಲಿಗಾರರಿಗೆ ಕೆಲಸ ಇಲ್ಲದ ಕಾರಣ ನೆರೆಯ ಸಾಂಗ್ಲಿ ಜಿಲ್ಲೆಯ ಮಿರಜ ಕವಟೆಮಹಾಂಕಾಳ ತಾಲೂಕಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಕಳೆದ ವಾರದಲ್ಲಿ ಗಡಿ ಭಾಗದ ಹಲವಾರು ಗ್ರಾಮಗಳಲ್ಲಿ ಉದ್ಯೋಗ ಖಾತರಿ ಕಾಮಗಾರಿ ಪ್ರಾರಂಭ ಮಾಡಿದ್ದಾರೆ. ಕೂಲಿಗೆ ಹೋಗುವ ಕೂಲಿಗಾರರಿಗೆ ಸ್ವಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೆಲಸವನ್ನು ಪ್ರಾರಂಭ ಮಾಡಿದ್ದಾರೆ. ಒಬ್ಬ ಕೂಲಿ ಕಾರ್ಮಿಕನಿಗೆ 309 ರೂ.ಗಳಿದ್ದು ವರ್ಷದಲ್ಲಿ ನೂರು ದಿನ ಕೆಲಸವನ್ನು ನೀಡುತ್ತೇವೆ. ಉದೋಗ ಖಾತರಿ ಕಾಮಗಾರಿ ಸ್ಥಳದಲ್ಲಿ ನೀರು, ಆರೋಗ್ಯ ಸೇವೆ ಕಲ್ಪಿಸಲಾಗಿದೆ. ಕೂಲಿಗಾರರಿಗೆ ದಿನದಲ್ಲಿ 2 ವೇಳೆ ಹಾಜರಾತಿ ಹಾಗೂ ಎನ್ ಎನ್ ಎಮ್ ಎಸ್ ಹಾಕಲಾಗುತ್ತಿದೆ. ಆದ ಕಾರಣ ಕೂಲಿಕಾರರಿಗೆ ಕೆಲಸ ಬಿಟ್ಟು ಬೇರೆ ಕಡೆ ಹೋಗುವ ಅವಕಾಶವಿಲ್ಲ.
ಅರಳಿಹಟ್ಟಿ ಗ್ರಾಮದ ಹೊರ ವಲಯದಲ್ಲಿ ಕೆರೆ ಹೂಳು ಎತ್ತುವ ಕಾಮಗಾರಿ ಪ್ರಾರಂಭವಿದ್ದು 127 ಕೂಲಿಗಾರರು ಕೆಲಸ ಮಾಡುತ್ತಿದ್ದಾರೆ. ಇನ್ನು ಕೂಲಿಗಾರರು ಹೆಚ್ಚುವ ಸಾಧ್ಯತೆ ಇದೆ. ಈ ಕಾಮಗಾರಿಗೆ ಸುಮಾರು 5 ಲಕ್ಷ ರೂಪಾಯಿ ವೆಚ್ಚ ಇದೆ. ಗ್ರಾಮ ಪಂಚಾಯತಿ ಸಿಬ್ಬಂದಿ ವಿಠೋಜ ಕಂಟೀಕರ ಹಾಗೂ ರಾಹುಲ ಕಾಂಬಳೆ ಸ್ಥಳದಲ್ಲಿಯಿದ್ದು ಉದ್ಯೋಗ ಖಾತರಿ ಕಾಮಗಾರಿಯನ್ನು ಪರಿಶೀಲನೆ ಮಾಡುತ್ತಿದ್ದಾರೆ