ಶಿಗ್ಗಾವ್

ನೂತನ ಹಡಪದ ಸಮಾಜದ ಪದಾಧಿಕಾರಿಗಳಿಗೆ ಅರ್ಹತಾ ಪತ್ರ ವಿತರಣೆ

ನೂತನ ಹಡಪದ ಸಮಾಜದ ಪದಾಧಿಕಾರಿಗಳಿಗೆ ಅರ್ಹತಾ ಪತ್ರ ವಿತರಣೆ

ಲೋಕದರ್ಶನ ವರದಿ

ಶಿಗ್ಗಾವಿ 20: ಸಂಘಟನೆ ಮತ್ತು ನಾಯಕತ್ವ ಎಂಬುದು ನಿಂತ ನೀರಾಗಬಾರದು ಅದು ಸದಾ ಚಲಿಸುತ್ತಿರುವ ನೀರಿನಂತಿರಬೇಕೆಂದು ಹಡಪದ ಸಮಾಜದ ಜಿಲ್ಲಾದ್ಯಕ್ಷ ಶಣ್ಮುಖಪ್ಪ ಕಾಯಕದ ಹೇಳಿದರು.

ತಾಲೂಕಿನ ಕುನ್ನೂರ ಗ್ರಾಮದ ಹಡಪದ ಅಪ್ಪಣ್ಣ ಸಮಾಜದ ಸಭಾಭವನದಲ್ಲಿ ಶಿಗ್ಗಾವಿ ತಾಲೂಕಾ ಹಡಪದ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ತಾಲುಕಾ ನೂತನ ಹಡಪದ ಸಮಾಜದ ಪದಾಧಿಕಾರಿಗಳಿಗೆ ಅರ್ಹತಾ ಪತ್ರ ವಿತರಣೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯಲ್ಲಿಯೇ ಶಿಗ್ಗಾವಿ ತಾಲೂಕಿನ ಸಮಾಜ ಸಂಘಟನೆ ಉತ್ತಮವಾಗಿದ್ದು ಪದಾಧಿಕಾರಿಗಳು ತಮಗೆ ನೀಡಿದ ಜವಾಬ್ದಾರಿಯನ್ನ ಜವಾಬ್ದಾರಿ ನಿಭಾಯಿಸಿ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಲು ಶ್ರಮಿಸುವಂತೆ ಸಲಹೆ ನೀಡಿದರು.

ರಾಜ್ಯ ಸಮನ್ವಯ ಸಮೀತಿ ಸಂಚಾಲಕ ಗುಡ್ಡಪ್ಪ ಮಲ್ಲೂರ, ಮುಖಂಡರಾದ ಬಸವರಾಜ ಕಾಯಕದ, ಹನುಮಂತ ಹಡಪದ, ಬಾಬಣ್ಣ ಕ್ಯಾಲಕೊಂಡ, ಶಿವು ಲಕ್ಕಿ, ಬಸವರಾಜ ಹಡಪದ ಮಾತನಾಡಿದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಶಿಗ್ಗಾವಿ ತಾಲೂಕಾ ಹಡಪದ ಸಮಾಜದ ಅದ್ಯಕ್ಷ ಮಲ್ಲಿಕಾಜರ್ುನ ಹಡಪದ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಹಡಪದ ಸಮಾಜದ ಹನುಮಂತ ಹಡಪದ ಹಾಗೂ ಮಂಜುನಾಥ ಹಡಪದ ಅವರುಗಳು ವಿದೇಶಿ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು, ನಂತರ ನೂತನ ಹಡಪದ ಸಮಾಜದ ಪದಾಧಿಕಾರಿಗಳಿಗೆ ಅರ್ಹತಾ ಪತ್ರ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಸಮಾಜದ ಮುಖಂಡರಾದ ಗುರುಬಸಪ್ಪ ಹಡಪದ, ಮುತ್ತುರಾಜ ಕ್ಷೌರದ, ಮಂಜುಳಾ ಶಿಡೇನೂರ, ಶಿವರಾಜ ಕ್ಷೌರದ, ಜಗದೀಶ ಹಡಪದ, ವೀರೇಶ ಹಡಪದ, ರುದ್ರಪ್ಪ ಹಡಪದ ಸೇರಿದಂತೆ ಹಡಪದ ಸಮಾಜದ ತಾಲೂಕಿನ ಮುಖಂಡರು ಇದ್ದರು 

ಸುದ್ದಿ ಓದಿ