ಶಿಗ್ಗಾವ್

ಹಳೆ ಬಂಕಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಹಳೆ ಬಂಕಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಲೋಕದರ್ಶನ ವರದಿ

ಶಿಗ್ಗಾವಿ 28: ಹಳೆ ಬಂಕಾಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ದೃಷ್ಟಿಯಿಂದ ಒಗ್ಗಟ್ಟಾಗಿ ಯುವ ಮುಖಂಡ ಗಿರೀಶ್ ಬೈಲ್ವಾಳ ಅವರನ್ನು ಅಧ್ಯಕ್ಷರನ್ನಾಗಿ, ಉಪಾಧ್ಯಕ್ಷರನ್ನಾಗಿ ರತ್ನವ್ವ ರಾಮಪ್ಪ ತಳವಾರ ಆಯ್ಕೆಮಾಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳಾದ  ಸುರೇಶ್ ಮುರಾರಿ, ರಮೇಶ್ ಹಿತ್ತಲಮನಿ, ಸುರೇಶ್ ಶೆಟ್ಟಿನವರ, ನಜಿರಾಬಾನು ಬುಡ್ಡೆಸಾಬ್ನವರ್, ನಿರ್ಮಲಾ ಇಳಿಗೇರ್, ಗಂಗಮ್ಮ ಹರಿಜನ ಸೇರಿದಂತೆ ಊರಿನ ಹಿರಿಯರು ನಾಗರಿಕರು ಉಪಸ್ಥಿತರಿದ್ದರು. ದೂರವಾಣಿ ಮೂಲಕ ಮಾತನಾಡಿ ಕೆಪಿಸಿಸಿ ಸಂಯೋಜಕ ಯಾಶೀರ್ ಖಾನ್ ಪಠಾಣ, ಕೆಪಿಸಿಸಿ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಸಂಸದ ಮಂಜುನಾಥ್ ಕುನ್ನೂರ್, ಪಕ್ಷದ ಮುಖಂಡ ಮಂಜುನಾಥ್ ಮಣ್ಣಣ್ಣವರ್ ನೂತನ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ 

ಸುದ್ದಿ ಓದಿ