ರಾಣೆಬೆನ್ನೂರ

ರಸ್ತೆಯಲ್ಲಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದ ವೃದ್ಧರು: ಅಂಚೆ ಕಚೇರಿ ಮುಂದೆ ಮಹಿಳೆಯರ ಪರದಾಟ

ರಸ್ತೆಯಲ್ಲಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದ ವೃದ್ಧರು: ಅಂಚೆ ಕಚೇರಿ ಮುಂದೆ ಮಹಿಳೆಯರ ಪರದಾಟ
ಕೆ. ಎಸ್. ನಾಗರಾಜ್.
ರಾಣೇಬೆನ್ನೂರು 15: ರಾಜ್ಯ ಸರ್ಕಾರ ಐದು ಯೋಜನೆಗಳನ್ನು ಜಾರಿಗೆ ತಂದು ಸಂಕಷ್ಟದಲ್ಲಿ ಇದ್ದರೂ ಸಹ  ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ಸರಕಾರ ವೃದ್ಯಾಪ್ಯ ವೇತನವನ್ನು ನೀಡುತ್ತಾ ಬರುತ್ತಿದೆ. ಅದರಲ್ಲಿ 60- 65 ವರ್ಷದವರಿಗೆ ಇಂದಿರಾ ಗಾಂಧಿ ವೃದ್ಯಾಪ್ಯ ವೇತನವಾಗಿ 600 ರೂಗಳು ಮತ್ತು 65 ವರ್ಷ ಮೇಲ್ಪಟ್ಟವರೆಗೆ ಸಂಧ್ಯಾ ಸುರಕ್ಷಾ ವೃದ್ಯಾಪ್ಯ ವೇತನವಾಗಿ 1200 ರೂಗಳು ನೀಡಲಾಗುತ್ತಿದೆ.
ನಗರದ ವ್ಯಾಪ್ತಿಯಲ್ಲಿ 35 ವಾರ್ಡ್ ಗಳಿದ್ದು ಅದರಲ್ಲಿ ಬಹುತೇಕ ಹಿರಿಯ ನಾಗರಿಕರು, ಅಂಗವಿಕಲರು ಹೆಚ್ಚಾಗಿದ್ದರಿಂದ ಭಾರತೀಯ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ಗಳು ಪ್ರತಿ ಮನೆಗೆ ತೆರಳಿ ವೃದ್ಯಾಪ ವೇತನ, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲರ ವೇತನ, ವಿಧವಾ ವೇತನ ನೀಡಬೇಕು. ನಗರದಲ್ಲಿ ಪೋಸ್ಟ್ ಮ್ಯಾನ್ ಗಳು ಈ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯಗಳಲ್ಲಿ ಕೇಳುತ್ತಿದೆ.
ನಗರದ ಮುಖ್ಯ ಅಂಚೆ ಕಚೇರಿಯ ಮುಂದೆ ಪ್ರತಿ ದಿನ 100 ರಿಂದ 150  ಫಲಾನುಭವಿಗಳು ಸರಥಿ ಸಾಲಿನಲ್ಲಿ ನಿಲ್ಲುತ್ತಾರೆ. ವೃದ್ಧರು ಅಂಗವಿಕಲರು ಬೆಳಿಗ್ಗೆ 5:00 ಯಿಂದ ಮಧ್ಯಾಹ್ನದವರೆಗೆ ಪಿಂಚಣಿಯನ್ನು ಪಡೆಯಲು ಬಿಸಿಲಿನಲ್ಲಿ ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಚೆ ಕಚೇರಿಯಲ್ಲಿ ಹೆಚ್ಚು ಕೌಂಟರ ಗಳನ್ನು ತೆರೆಯದೆ ಒಂದೇ ಕೌಂಟರ್ನಲ್ಲಿ ಪಿಂಚಣಿಯನ್ನು ನೀಡುತ್ತಿರುವುದು ಇದಕ್ಕೆಲ್ಲ ಕಾರಣವಾಗಿದೆ.
ನಿನ್ನೆ ಬೆಳಗ್ಗೆ ಮುಖ್ಯ ಅಂಚೆ ಕಛರಿಯ ಮುಂಭಾಗದ ಸರ್ಕಲ್ ನಲ್ಲಿ ಪೋಸ್ಟ್ ಮ್ಯಾನ್ ಓರ್ವ  ಬಯೋಮೆಟ್ರಿಕ್ ಬೈಕ್ ಮೇಲೆ ಇಟ್ಟುಕೊಂಡು ರಸ್ತೆ ಮಧ್ಯದಲ್ಲಿಯೇ ವೃದ್ದರಿಗೆ ಮತ್ತು ಮಹಿಳೆಯರಿಗೆ ಪಿಂಚಣಿ ನೀಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆರೋಪಕ್ಕೆ ಎಡೆ ಮಾಡಿಕೊಟ್ಟಂತಾಯಿತು. ವಾರ್ಡ್ ಗಳಿಗೆ ತೆರಳಿ ಪಿಂಚಣಿಗಳನ್ನು ನೀಡಲು ಬದಲು ಮುಖ್ಯ ಕಚೇರಿಗೆ ಬಂದ ಹಿರಿಯ ನಾಗರಿಕರಿಗೆ ರಸ್ತೆ ಮಧ್ಯದಲ್ಲಿಯೇ ಅವರಿಗೆ ಹಣ ನೀಡುತ್ತಿರುವುದನ್ನು ಸಾರ್ವಜನಿಕರು ಪ್ರಶ್ನೆ ಮಾಡಿದರೆ. ಮುಖ್ಯ ಕಚೇರಿಯಲ್ಲಿ ಕೌಂಟರ್ಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ರಸ್ತೆಯ ಮಧ್ಯದಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡಿ ಪಿಂಚಣಿ ನೀಡುತ್ತಿರುವುದು ಸರಿಯಲ್ಲ,
ಮುಖ್ಯ ಅಂಚೆ ಕಚೇರಿಯ ಹಿರಿಯ ಅಧಿಕಾರಿಗಳು ಎತ್ತ ಗಮನ ಹರಿಸಿ ವೃದ್ಧರಿಗೆ ಅಂಗವಿಕಲರಿಗೆ ಮಹಿಳೆಯರಿಗೆ ತೊಂದರೆ ಆಗದಂತೆ ಹೆಚ್ಚಿನ ಕೌಂಟರ್ ಗಳನ್ನು ತೆಗೆದು ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಾಮಾಜಿಕ ಭದ್ರತಾ ಯೋಜನೆಯನ್ನು ನೀಡಲು ಮುಂದಾಗಬೇಕು ಎನ್ನುವುದೇ ಸಾರ್ವಜನಿಕರ ಆಶಯವಾಗಿದೆ  
***ಪ್ರತಿ ತಿಂಗಳು ವೃದ್ಯಾಪ ವೇತನವನ್ನು ತೆಗೆದುಕೊಳ್ಳಲು ಮುಖ್ಯ ಅಂಚೆ ಕಚೇರಿಗೆ ಹೋಗಬೇಕು. ಹೆಚ್ಚು ವಯಸ್ಸಾದವರಿಗೆ ಅದು ಕಷ್ಟವಾಗುತ್ತದೆ. ನಾವು ಬೆಳಿಗ್ಗೆ 5 ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಂತು ಪಿಂಚಣಿ ಪಡೆಯುತ್ತಿದ್ದೇವೆ. ಅದು ತಪ್ಪಬೇಕು ಮನೆಗೆ ತಂದು ಕೊಡುವ ವ್ಯವಸ್ಥೆಯನ್ನು ಹಿರಿಯ ಅಧಿಕಾರಿಗಳು ಮಾಡಿದರೆ ಪುಣ್ಯ ಬರುತ್ತದೆ‌.
- ಲಕ್ಷಮವ್ವ ಗುದಿಗೇರ
ರಾಣೇಬೆನ್ನೂರು
**ನಗರವು ಹೆಚ್ಚು ಜನಸಂಖ್ಯೆ ಹೊಂದಿದ್ದೆ. ನಗರದ ಪಿಂಚಣಿ ಪಡೆಯುವರು ಮನೆಯಲ್ಲಿ ಇರುವುದು ಬದಲು ಮುಖ್ಯ ಕಚೇರಿಗೆ ಬಂದು ನಮ್ಮನ್ನು ಕಾಯುತ್ತಿರುತ್ತಾರೆ. ಅವರಿಗೆ ಎಷ್ಟೇ ಬಾರಿ ಹೇಳಿದರೂ ಅರ್ಥವಾಗುತ್ತಿಲ್ಲ. ವೃದ್ಧರು ಅಂಗವಿಕಲರು ಮಹಿಳೆಯರು ಮುಖ್ಯ ಕಚೇರಿಗೆ ಬಂದು ಸಾಲುಗಟ್ಟಿ ನಿಲ್ಲುತ್ತಾರೆ. ಅಲ್ಲಿ ಕೌಂಟರ್ಗಳ ಸಂಖ್ಯೆ ಕಡಿಮೆ ಇದೆ. ಹಿರಿಯ ನಾಗರಿಕರು ಕೇಳಿದರಿಂದ ಬೈಕ್ ಸೈಡ್ ಗೆ ಹಾಕಿ ಅವರಿಗೆ ಪಿಂಚಣಿ ವೇತನವನ್ನು ನೀಡಿದ್ದೆ.
-ಪೋಸ್ಟ್ ಮ್ಯಾನ್
ರಾಣೇಬೆನ್ನೂರು.

ಸುದ್ದಿ ಓದಿ