ಭಾವೈಕ್ಯತೆಯ ಸಮನ್ವಯಕಾರ ಇಬ್ರಾಹಿಂ ಸುತಾರ
ಇಂಡಿ05: ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡಿದ ತತ್ವಪದಕಾರ ಮತ್ತು ಪ್ರವಚನಕಾರಾಗಿದ್ದ ಇಬ್ರಾಹಿಂ ಸುತಾರ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಸಂತಾಪ ವ್ಯಕ್ತಪಡಿಸಿದರು.
ಅವರು ಇಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಜರುಗಿದ ಇಬ್ರಾಹಿಂ ಸುತಾರ-ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನರ್ಾಟಕ ಮತ್ತು ನೆರೆಯ ರಾಜ್ಯಗಳಲ್ಲಿ ಕಳೆದ 40 ವರ್ಷಗಳಿಂದ ತಮ್ಮ ಹಾಡುಗಳು ಮತ್ತು ಭಜನೆಗಳ ಮೂಲಕ ಸಾಮಾಜಿಕ ಮತ್ತು ಕೋಮು ಸೌಹಾರ್ದತೆಯನ್ನು ಹರಡಲು ಹೆಸರುವಾಸಿಯಾಗಿದ್ದರು.ಮಹಾತ್ಮ ಕಬೀರರಂತೆ ಇವರು ಜನರಲ್ಲಿ ಭಾವೈಕ್ಯತೆಯನ್ನು ಉಂಟು ಮಾಡುತ್ತಿದ್ದರು ಎಂದು ಹೇಳಿದರು. ಶಾಲಾ ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ ಸಂತಾಪ ಸೂಚಿಸಿ, ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವ ಶಿಕ್ಷಣ ಇಂದಿನ ಅಗತ್ಯವಾಗಿದೆ.ಮಕ್ಕಳಿಗೆ ಮೌಲ್ಯಗಳನ್ನು ತಿಳಿಸಿ ಹೇಳುವ ಅನಿವಾರ್ಯತೆ ಇದೆ ಎಂದು ತಮ್ಮ ಜೀವನದದ್ದಕ್ಕೂ ಸಂದೇಶ ಸಾರಿದ ಇಬ್ರಾಹಿಂ ಸುತಾರ ಅವರು ದೇಶ ಕಂಡ ಅಪರೂಪದ ಪ್ರವಚನಕಾರರಾಗಿದ್ದರು ಎಂದರು. ಟಿಜಿಟಿ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ,ವಸುದೈವ ಕುಟುಂಬಕಂ ಎಂಬುವುದು ನಮ್ಮ ಸಂಸ್ಕೃತಿಯ ಮೂಲ ಮಂತ್ರವಾಗಿದೆ. ಬಡವ , ಶ್ರೀಮಂತ ಎಲ್ಲರೂ ಸಮಾನರಾಗಿ ಬಾಳಬೇಕು. ಎಲ್ಲ ಜಾತಿಯ ಜನರು ಸಮಾನತೆಯನ್ನು ಕಾಪಾಡಿಕೊಳ್ಳಬೇಕು . ಪ್ರಗತಿಪರ ಬೆಳವಣಿಗೆಗೆ ಭಾವೈಕ್ಯತೆ ಅಗತ್ಯವಾಗಿದೆ ಎಂದು ಹೇಳಿದರು. ಎಸ್ ಎಚ್ ಮೈದರಗಿ,ಎನ್ ಬಿ ಚೌಧರಿ,ಎಸ್ ಬಿ ಹೆಬ್ಬಾಳ, ಎಸ್ ಪಿ ಪೂಜಾರಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದರು