ಜಮಖಂಡಿ

ದಸರಾ ಉತ್ಸವ: ಅ.15 ರಿಂದ 24ರವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ

ದಸರಾ ಉತ್ಸವ: ಅ.15 ರಿಂದ 24ರವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ

ಲೋಕದರ್ಶನ ವರದಿ

ಜಮಖಂಡಿ: 5: ರಾಜ್ಯದಲ್ಲಿ ಶೇ 70 ಕ್ಕಿಂತ ಹೆಚ್ಚು ವೀರಶೈವ ಲಿಂಗಾಯತರಿದ್ದು. ವೀರಶೈವ ಲಿಂಗಾಯತ ಧರ್ಮ ಸನಾತನವಾದದ್ದು ಮತ್ತು ಶ್ರೇಷ್ಠವಾದದ್ದು. ಶಿವನ ಸ್ವರೂಪದ ಶಿವಾಲಯಗಳು ಭಕ್ತಿ ಮೆರೆಯುತ್ತಿವೆ. ದಸರಾ ಉತ್ಸವದ ನಿಮಿತ್ಯ ಮುತ್ತಿನಕಂತಿ ಶ್ರೀಮಠದಲ್ಲಿ ಅ.15 ರಿಂದ 24ರ ವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. 

ನಗರದ ಮುತ್ತಿನಕಂತಿ ಹಿರೇಮಠದಲ್ಲಿ ನಡೆದ ದಸರಾ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

 ನಗರದಲ್ಲಿ ಓಲೇಮಠ, ಮುತ್ತಿನಕಂತಿಮಠ, ಕಲ್ಯಾಣಮಠಗಳು ಶ್ರೇಷ್ಠ ಮಠಗಳಾಗಿವೆ. ಅವುಗಳನ್ನು ಸುರಕ್ಷಿತವಾಗಿ ನೋಡಿಕೊಂಡು ಹೋಗುವದು ಎಲ್ಲ ಭಕ್ತರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಅವುಗಳಿಗೆ ಸಹಾಯ. ಸಹಕಾರ ನೀಡುತ್ತಾ ಮಠಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು. 

ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿ, ನವರಾತ್ರಿ ಉತ್ಸವದ ನಿಮಿತ್ಯ ಶ್ರೀಮಠದಲ್ಲಿ ಪ್ರತಿವರ್ಷ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಭಕ್ತರಿಗೆ ಧಾರ್ಮಿಕ ಚಿಂತನೆ ಜಾಗೃತಿ ಮೂಡಿಸುವ ಕಾರ್ಯ ಶ್ರೀಮಠದಿಂದ ನಡೆಯುತ್ತಾ ಬರಲಾಗಿದೆ. ಜಾತಿ, ಮತ ಎನ್ನದೆ ಎಲ್ಲ ವರ್ಗದ ಭಕ್ತರನ್ನು ಅಪ್ಪಿಕೊಂಡು ಹೋಗುವ ಸಂಪ್ರದಾಯ ಹಿರಿಯ ಶ್ರೀಗಳಿಂದ ನಡೆದುಕೊಂಡು ಬಂದಿದೆ. ಭಕ್ತರು ಮಠದ ಮೇಲೆ ಅಪಾರ ಪ್ರೀತಿ, ಗೌರವ ತೋರುತ್ತಿರುವದು ನಮ್ಮ ಸೌಭಾಗ್ಯ ಎಂದರು. 

2007 ರಲ್ಲಿ ಮಠಕ್ಕೆ ಪಟ್ಟಾಧಿಕಾರ ವಹಿಸಿಕೊಂಡಾಗಿನಿಂದ ಮಠವನ್ನು ಹಂತಹಂತವಾಗಿ ಬೆಳವಣಿಗೆ ಮಾಡುತ್ತಾ ಸಮಾಜದಲ್ಲಿ ಪರಿವರ್ತನೆಯಾಗಬೇಕು. ಧರ್ಮ ಜಾಗೃತಿಯಾಗಬೇಕು. ಧಾರ್ಮಿಕ ಚಿಂತನೆ ನಡೆಯಬೇಕು. ಸಮಾಜದ ಬಿನ್ನಾಭಿಪ್ರಾಯಗಳು ತೊಲಗಬೇಕು. ಯುವಕರು ಧಾರ್ಮಿಕ ಚಿಂತನೆಯತ್ತ ಒಲವು ತೋರಬೇಕು. ಧರ್ಮ ಉಳಿಯಬೇಕು ಎಂಬ ಉದ್ದೇಶದಿಂದ ನವರಾತ್ರಿ ಉತ್ಸವವನ್ನು ವಿಜೃಂಭನೆಯಿಂದ ಆಚರಿಸುತ್ತಾ ಬರಲಾಗುತ್ತಿದೆ ಎಂದರು. 

ಶ್ರೀಗಳ ಜನ್ಮದಿನದ ಅಂಗವಾಗಿ ವಿವಿಧ ಸಮಾಜದ ಮುಖಂಡರು ಸಂಘ, ಸಂಸ್ಥೆಯ ಪದಾಧಿಕಾರಿಗಳು ಸನ್ಮಾನಿಸಿದರು. 

ಡಾ, ರಾಕೇಶ ಲಾಡ, ಸಂತೋಷ ಚನಾಳ, ಸುರೇಶ ಕಡಕೋಳ ಮಾತನಾಡಿದರು. ವೇದಿಕೆಯಲ್ಲಿ ಹುನ್ನೂರಿನ ವಿಶ್ವನಾಥ ಶಾಸ್ತ್ರಿಗಳು, ಜಗದೆಲ್ಲಮ್ಮ ದೇವಿ ದೇವಸ್ಥಾನದ ಅರ್ಚಕ ಪರಶುರಾಮ ಪೂಜಾರಿ ಉಪಸ್ಥಿತರಿದರು. ಪ್ರಕಾಶ ಅರಕೇರಿ ಸ್ವಾಗತಿಸಿದರು. ಪ್ರದೀಪ ಮೆಟಗುಡ್ಡ ನಿರೂಪಿಸಿದರು. 


ಸುದ್ದಿ ಓದಿ