ಜಮಖಂಡಿ

ಪಿ.ಬಿ.ಹೈಸ್ಕೂಲ ವಿದ್ಯಾರ್ಥಿಗಳು ಡ್ರೋನ್ ತಯಾರಿ

ಪಿ.ಬಿ.ಹೈಸ್ಕೂಲ ವಿದ್ಯಾರ್ಥಿಗಳು ಡ್ರೋನ್ ತಯಾರಿ
ಡ್ರೋನ್ ಮಾದರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ರಿತೇಶ ಕುಮಾರ ಸಿಂಗಸಂತಸ ವ್ಯಕ್ತಪಡಿಸ

ಲೋಕದರ್ಶನ ವರದಿ

ಜಮಖಂಡಿ 26: ಎಟಿಎಲ್ ಮಶೀನ ಸಹಾಯದಿಂದ ನಗರದ ಪಿ.ಬಿ.ಹೈಸ್ಕೂಲ ವಿದ್ಯಾರ್ಥಿಗಳು ಡ್ರೋನ್ ತಯಾರಿಸಿರುವದನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ  ರಿತೇಶ ಕುಮಾರ ಸಿಂಗ ಸಂಪೂರ್ಣವಾಗಿ ವೀಕ್ಷಿಸಿ ಶಾಲೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿಯೇ ಮಕ್ಕಳಿಂದ ಡ್ರೋನ್ ಮಾದರಿ ತಯಾರಿಸುವದರಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು ಇಂತಹ ಮಾದರಿ ಶಿಕ್ಷಕರಿಂದ ಶೈಕ್ಷಣಿಕವಾಗಿ ಬದಲಾವಣೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಕಿಯಾನ ಪ್ರೋಜೆಕ್ಟರ ಮೂಲಕ ಮಕ್ಕಳಲ್ಲಿ ಹೊಸ ಹೊಸದಾದ ವೈಜ್ಞಾನಿಕ ಉಪಕರಣಗಳನ್ನು ತಯಾರಿಸುತ್ತಿರುವದು ಸಂತಸ ತಂದಿದೆ. ಇಲ್ಲಿನ ಶಾಲೆಯ ಹೊರಾಂಗಣ ನೋಟ, ಸ್ವಚ್ಛತೆ, ಶಿಕ್ಷಕರ ಪಾಠ ಬೋಧನೆ, ಬಿಸಿ ಊಟ ತಯಾರಿಕೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಪಿ.ಬಿ.ಹೈಸ್ಕೂಲ ವಿದ್ಯಾಥರ್ಿಗಳೊಂದಿಗೆ ಸಂವಾದ ನಡೆಸಿ, ಕೆಲವೊಂದು ಪ್ರಶ್ನೆಗಳನ್ನು ಕೇಳಿ ಮಕ್ಕಳಲ್ಲಿನ ಕಲಿಕಾ ಮಟ್ಟವನ್ನು ಪರೀಕ್ಷಿಸಿದರು. ಸಂಸ್ಕೃತ ಭಾಷೆ, ಐಟಿ, ಆಟೋಮೊಬೈಲ್ ಹಾಗೂ ಹೊಸ ಕಟ್ಟಡಗಳನ್ನು ವೀಕ್ಷಿಸಿದರು.  ರಾಜ್ಯ ಯೋಜನಾ ನಿದರ್ೇಶಕಿ ಕಾವೇರಿ, ಅಪರ ಆಯುಕ್ತೆ ರಾಜಶ್ರೀ ಸಿಂತ್ರಿ, ಉಪನಿದರ್ೇಶಕ ಶ್ರೀಶೈಲ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸನ್ನವರ, ಪಿ.ಬಿ.ಹೈಸ್ಕೂಲ ಪ್ರಾಚಾರ್ಯಎನ್.ಎಮ್.ಚೌರ ಸೇರಿದಂತೆ ಹಲವರು ಇದ್ದರು.



ಸುದ್ದಿ ಓದಿ