ರಾಣೆಬೆನ್ನೂರ

ಎಸ್‌. ಎಸ್‌. ಕೆ. ಸಮಾಜದ ರಾಜ್ಯಾಧ್ಯಕ್ಷರಾಗಿ ಡಾ. ಶಶಿಕುಮಾರ್ ಆಯ್ಕೆ

ಎಸ್‌. ಎಸ್‌. ಕೆ. ಸಮಾಜದ  ರಾಜ್ಯಾಧ್ಯಕ್ಷರಾಗಿ ಡಾ. ಶಶಿಕುಮಾರ್ ಆಯ್ಕೆ

ರಾಣೇಬೆನ್ನೂರು  30 : ನಗರದ ಶಕ್ತಿಧಾಮ ಬಡಾವಣೆಯಲ್ಲಿ ನಡೆದ ರಾಜ್ಯ ಎಸ್ ಎಸ್‌ಸಮಾಜದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಡಾ. ಶಶಿಕುಮಾರ ಮೆಹರವಾಡೆ ಅವರನ್ನುರಾಜ್ಯ ಎಸ್ ಎಸ್ ಕೆ ಸಮಾಜದ ನೂತನ ಅಧ್ಯಕ್ಷರನ್ನಾಗಿ ಸಭಾಧ್ಯಕ್ಷ, ರಾಜ್ಯ ಸಭಾಸದಸ್ಯ ನಾರಾಯಣಸಾ ಭಾಂಡಗೆಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಅಶೋಕ್ ಕಾಟವೆ, ಹು-ಧಾ ಕೇಂದ್ರ ಪಂಚಾಯಿತಿ ಅಧ್ಯಕ್ಷ ಸತೀಶ ಮೆಹರವಾಡೆ, ಅಖಿಲ ಭಾರತ ಎಸ್‌ಎಸ್‌ಸಮಾಜದ ಪ್ರಧಾನ ಕಾರ್ಯದರ್ಶಿ ಶ್ಯಾಮಕಬಾಡಿ, ಎಸ್‌ಎಸ್‌ಕೆ ಬ್ಯಾಂಕ್ ಅಧ್ಯಕ್ಷ ವಿಠಲ ಲದವಾ, ಟಿ.ಎಂ. ಮೆಹರವಾಡೆ, ನೀಲಕಂಠಸಾ ಜಡಿ, ನಾರಾಯಣಸಾ ನಿರಂಜನ, ನಾಗೇಶ್ ಕಲ್ಬುರ್ಗಿ, ರಾಜ್ಯಸಂಘಟನಾ ಕಾರ್ಯದರ್ಶಿ ಎಚ್‌.ಡಿ. ಕಾಟವಾ, ಮಾರುತಿರಾವ ಪವಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ