ಶತಮಾನದ ಶರಣ ಪರಂಪರೆಯಲ್ಲಿ ಡೋಹರ ಕಕ್ಕಯ್ಯ ಸಮಾನತೆಗೆ ಒತ್ತು ನೀಡಿದ ಶರಣರು
ಲೋಕದರ್ಶನ ವರದಿ
ರಾಣೆಬೆನ್ನೂರು 11: ಬಸವಾದಿ ಶರಣರ 12ನೇ ಶತಮಾನದಲ್ಲಿ ಸಮಾನತೆಗಾಗಿ ಕ್ರಾಂತಿ ಮಾಡಿದ ಅಣ್ಣ ಬಸವಣ್ಣನವರ ಅಗ್ರಪಂಕ್ತಿಯಲ್ಲಿ ಮಹಾಪ್ರಸಾದಿ ಡೋಹರ ಕಕ್ಕಯ್ಯ ನವರು ಸಹ ಸಮಾನತೆಗಾಗಿ, ತಮ್ಮದೇ ಆದ ವೈಚಾರಿಕ ಚಿಂತನೆಯಲ್ಲಿ ಪರಂಪರೆಯನ್ನು ಬೆಳೆಸಿದ ವರಾಗಿದ್ದಾರೆ ಎಂದು ಶರಣ, ನಿವೃತ್ತ ಪ್ರಾಧ್ಯಾಪಕ ಎಸ್. ಜಿ.ಹಿರೇಮಠ ಹೇಳಿದರು ಅವರು ಇತ್ತೀಚೆಗೆ ಗೌರಿಶಂಕರ ನಗರದ ನಿವೃತ್ತ ಸರಕಾರಿ ನೌಕರರ ಭವನದಲ್ಲಿ ಮಾಡದ ಮಹಾ ಪ್ರಸಾದಿ ಡೋಹರ ಕಕ್ಕಯ್ಯನವರ ಸಮಾಜ ಸಂಘವು ಆಯೋಜಿಸಿದ್ದ, 150ನೇ ಮಾಸಿಕ ಸತ್ಸಂಗ ಧಾಮರ್ಿಕ ಕಾರ್ಯಕ್ರಮದಲ್ಲಿ, ಶರಣ ಪರಂಪರೆ ಕುರಿತು, ಉಪನ್ಯಾಸ ನೀಡಿ ಮಾತನಾಡಿದರು. ಭಾರತ ದೇಶ, ವಿವಿಧತೆಯಲ್ಲಿ ಏಕತೆಯನ್ನು ಕಾಣುವ, ಪರಂಪರಾಗತ ಶರಣರ ಕಾಲದಿಂದಲೂ ಸಾಗುತ್ತಾ ಬಂದಿದೆ.
ಇಂತಹ ಸಂಸ್ಕಾರ ಭಾರತೀಯರಲ್ಲಿ ಅಂದು ಇದೇ.ಇಂದು ಸಾಗಿದೆ, ಮುಂದೆಯು ಸಾಗುತ್ತದೆ ಎಂದರು. ಶರಣ ಪರಂಪರೆ ಇಂದು ನಿನ್ನೆಯದಲ್ಲ ಇದು ನಿರಂತರ ಪ್ರಕ್ರಿಯೆ, ಶಾಂತಿ ನೆಮ್ಮದಿ ಬರಬೇಕಾದರೆ ನಾವೆಲ್ಲರೂ ಶರಣರು ಹಾಕಿ ಕೊಟ್ಟ ಸಂಸ್ಕಾರ ಪರಂಪರೆಯಲ್ಲಿ ಸಾಗಬೇಕು. ಮತ್ತು ಧರ್ಮ ಸಂಸ್ಕಾರದಲ್ಲಿ ಸಾಗುತ್ತಾ ಜೀವನ ಮುಕ್ತಿಗೊಳಿಸಿ ಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು. ಡೋಹರ ಕಕ್ಕಯ್ಯ ಸತ್ಸಂಗ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅರುಣ್ ಕುಮಾರ್ ಪೂಜಾರ್ ಅವರು, ಸಮಾಜದಲ್ಲಿ ಸಮಾನತೆ ಸಾಧಿಸಬೇಕಾದರೆ. ಸಣ್ಣ ಸಣ್ಣ ಸಮಾಜಗಳು, ಬಸವಾದಿ ಶರಣರು ಹಾಕಿಕೊಟ್ಟ ಸತ ಸಂಪ್ರದಾಯದ ಮೂಲಕ, ಒಂದಾಗಿ, ಒಗ್ಗಟ್ಟಾಗಿ, ಏಕತೆಯನ್ನು ಸಾರುತ್ತ,, ಸಾಗಬೇಕಾದ ಇಂದಿನ ಬಹು ಅಗತ್ಯವಿದೆ ಎಂದರು.ಸಮಾಜದ ಅಧ್ಯಕ್ಷ ಬಾಬು ಯ ಘೋಡಕೆ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಣಿ ಪವಾರ್, ಮಂಜುಳಾ ಹತ್ತಿ,, ಗಂಗಮ್ಮ ಹಾವನೂರು,ನಾಡಿನ ವಿವಿಧ ಜಿಲ್ಲೆಗಳಿಂದ ಕಿಶೋರ ಶ್ರೇಯ್ಕರ ಅರವಿಂದ ಘೋಡಕೆ, ಮಹದೇವಪೂಳ್, ಸಂತೋಷ್ ಸಣುರ. ಬಸವರಾಜ ನಾರಾಯಣ ಕರ, ಪರಮಾನಂದ ಘೋಡಕೆ, ಪೂರ್ಣ ಜಿ ಭರಾಟೆ, ಚಂದ್ರಪ್ಪ ಶೇರಖಾನೆ, ಅನಿಲ್ ಹುಟಗಿ, ದಿಲೀಪ್ ಘೋಡಕೆ, ಮಂಜುನಾಥ್ ಹುಟಗಿ, ಅಪ್ಪಾಸಾಹೇಬ ಮಹೋರ್ಕರ್, ಸುರೇಶ್ ಘೋಡಕೆ, ಎನ್. ಎನ್.ಬೋಸ್ಲೆ ಸುಭಾಷ್ ಚಂದ್ರ ಪೂಳ್, ಸೇರಿದಂತೆ ಸಮಾಜದ ಮತ್ತಿತರ ಗಣ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು, ಆರಂಭದಲ್ಲಿ ಮಾಜಿ ಅಧ್ಯಕ್ಷ ಅಪ್ಪಾಸಾಹೇಬ್ ಮಾಹೂರ್ಕರ್ ಅವರು ಸಾಮೂಹಿಕ ವಚನ ಪ್ರಾರ್ಥನೆ ಮಾಡಿದರು. ಪ್ರಭುಲಿಂಗ ನಾರಾಯಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಕೇಶ್ ಪೂಳ್ ನಿರೂಪಿಸಿ ನಾಗರಾಜ.ಭೂಸ್ಲೆ ವಂದಿಸಿದರು.