ಕಾಗವಾಡ

ಬೃಹತ್ ಕೃಷಿ ಮೇಳದಲ್ಲಿ ಶ್ವಾನ ಪ್ರದರ್ಶನ

ಬೃಹತ್ ಕೃಷಿ ಮೇಳದಲ್ಲಿ ಶ್ವಾನ ಪ್ರದರ್ಶನ

ಕಾಗವಾಡ : ದೇಹದಲ್ಲಿ ಎಲಬುಗುಳು ಕಾಣಿಸಿದರು ಚಿರತೆಯಂತಹ ಓಟ,ನೋಟವುಳ ಮೂಧೋಳ ನಾಯಿಗ ಹೌಂಡ್ಸಗಳು ಶುಭ್ರ ಬಿಳಬಣದ ಕೇಶರಾಶಿ ಪಮೇರಿಯನ್ ಶ್ವಾನಗಳು ಮುದ್ದಾಗಿ ಓಡುವ ಪಗ್ಗಗಳು ತೋಳದಂತೆ ತೋರುವ ಜರ್ಮನ ಶೆಪರ್ಡಗಳು....!ಇದು ಕಾಗವಾಡ  ತಾಲೂಕಿನ ಐನಾಪೂರ ಪಟ್ಟಣದ ಸಿದೇಶ್ವರ ದೇವರ 53 ನೇ ಜಾತ್ರಾ ಮಹೋತ್ಸವದ ನಿಮಿತ್ಯ ಬೃಹತ್ ಕೃಷಿ ಮೇಳದಲ್ಲಿ ಆಯೋಜಿಸಿದ  ಶ್ವಾನ ಪ್ರದರ್ಶನದಲ್ಲಿ ಗಮನ ಸೆಳೆದ ನಾಯಿಗಳ ಝಲಕ ವಿವಿಧ ತಳಿಯ ಹತ್ತಾರು ನಾಯಿಗಳು ಶ್ವಾನ ಪ್ರಿಯರನು  ಸಂತೋಷ ಪಡೆಸಿದವು.

ರ್ಯಟ ವ್ಹಿಲ್ಲರ,ಪಿಗ್ ,ಲೋಬರೋಡರ ಜರ್ಮನ ಶಾಪರ್ಡ,ಗ್ರೇಟ್ ಡ್ವಾನಿ,ಲಂಬೋದರ,ಪುಗ್ ಹೌಂಡ್ಸ,ಪಿರಬುಲಬಿಗ್ಲ,ಬ್ಲಾಕಮೀಸಿಪ ಸೇರಿದಂತೆ 65ಕ್ಕೊ ಹೆಚ್ಚು ವಿವಿದ ತಳಿಯ ಶ್ವಾನಗಳು  ಪ್ರದರ್ಶನದಲ್ಲಿ ಭಾಗವಹಿಸಿದವು. ವಿಜಯಪೂರ,ಮೂಧೋಳ,ಮುಗಳಖೋಡ,ಅಥಣಿ, ಮಹಾರಾಷ್ಟ್ರದ ಸಾಂಗಲಿ,ಮಿರಜ, ಇಂಚಲಕಂಜಿ,ಜಯಸಿಂಗಪೂರದ ಶ್ವಾನಗಳು ಭಾಗವಹಿಸಿದವು.ಸಿಮ್ ಕಂಪನಿಯೋಂದರ ಜಾಹಿರಾತು ಮೂಲಕ ಗಮನ ಸೆಳೆದ ಪುಟ್ಟದೇಹ ರಚನೆಹೋಂದಿರುವ ಮುದ್ದಾದ ಪಗ್ ವಿಶೇಷವಾಗಿ ಚಿಕ್ಕಮಕ್ಕಳ ಆಕರ್ಷಣೆ ಕೇಂದ್ರವಾಗಿತ್ತು .ಚಿಕ್ಕಚಿಕ್ಕ ಕಾಲುಗಳು ಸುಕ್ಕುಗಟಿದ ಚರ್ಮದಲ್ಲಿ ಹುದಗಿದ ಗೋಲುಮುಖದಲ್ಲಿ ನಳನಳಿಸುವ ಈ ಶ್ವಾನ ಅತ್ತಿಂದತ್ತ ಓಡಾಡುತ್ತಿರುವುದನ್ನು ಕಂಡು ಚಿಣ್ಣರು ಖುಷಿ ಅನುಭವಿಸಿದರು. 

ಅಥಣಿಯ ಪಶುವೈದಾಧಿಕಾರಿ ಶ್ವಾನ ಪ್ರದರ್ಶನ ಸಮಾರಂಭ ಉದ್ದೇಶಿಸಿ ಮಾತನಾಡುತ್ತಾ ಸರಕಾರ ಚಿಂತನೆ ಮಾಡಿರುವ ಹಾಗೆ  ರಾಟ್ವವಿಲ್ ಪಿಟ್ಟಗಲ್ ನಾಯಿಗಳನ್ನು ರಿಜಿಸ್ಟಷನ್ ಮಾಡಿಸಬೇಕು  ಏಕೆಂದರೆ ಅವು ಹೆಚ್ಚು ಮನುಷ್ಯ ರಹಾಗು ಇತರ ಪ್ರಾಣಿಗಳ ಮೇಲೆ ಅಟ್ಯಾಕ್ ಮಾಡುತ್ತವೆ ಆದರಿಂದ ಅವುಗಳ ವ್ಯಾಕಿನೇಶನ ಮಾಡಿಸಬೇಕು ಎಂದರು. ಅತಿಥಿಗಳಾಗಿ ರಾಜೇಂದ್ರ ಪೊತದಾರ,ಕುಮಾರ ಅಪರಾಜ,ಉದಯ ನಿಡಗುಂದಿ ಭೂಪಾಲ ಮಾನಗಾಂವೆ,ಸುನೀಲ ಪಾಟೀಲ ಇತರರು ಇದ್ದರು. 

ಶ್ವಾನ ಪ್ರದರ್ಶನೆಗಾಗಿ ನೀಡುವ ಪ್ರಥಮ ಯಲ್ಲಪ್ಪಾ ಗುರುಪಾದೆ,ಜರ್ಮನ್ ಶಾಪ್, ತಳಿಯ ಶ್ವಾನ 1ಲಕ್ಷ, ಕಾರ್ತಿಕ ಕಾಂಬಳೆ  ಶೇರವನ್ ತಳಿ ಶ್ವಾನ7000 ದ್ವೀತಿಯಸ್ಥಾನ ಮೋಹನ ಮುಚ್ಚಂಡಿ 5ಸಾವಿರ,ತೃತಿಯಸ್ಥಾನ ವಿಶ್ವಾಸ  ಗ್ರೇಟ್ ರ್ಯಡನ 3 ಸಾವಿರ ರೂಗಳ ಬಹುಮಾನ ಪಡೆದುಕೊಂಡವು. ನಿರ್ಣಾಯಕರಾಗಿ ಪಶುವೈದ್ಯಾಧಿಕಾರಿಗಳಾದ ಡಾ.ಭುಜಬಲಿ ಐಗಳಿಡಾ.ಹೆಚ್ಚ.ಬಿ ಸಣ್ಣಕಿ,,ಡಾ.ಸಚಿನ ಸೌಂದಲಗಿ, ಡಾ.ಅಭಿನಂದನ ಪಾಟಿಲ, ಶ್ರೀಕಾಂತ ಗುಜಗಾಂವಿ ಸುನೀಲ ಪಾಟೀಲ ಕಾರ್ಯನಿರ್ವಹಿಸಿದರು.ಕೃಷಿ ಮೇಳದ ರೂವಾರಿಗುಂಡು ಖವಟಕೋಪ್ಪ,ಸುರೇಶ ಗಾಣಿಗೇರ, ರಾಮು ಸವದತ್ತಿ, ಜಗದೀಶ ಪಟವರ್ದನ, ಗುರುರಾಜ ಮಡಿವಾಳ, ಸಂಜು ಕುಸನಾಳೆ,ಮಲ್ಲಿಕಾರ್ಜುನ ಕೊಲಾರ, ಶೀತಲ ಬಾಲೋಜಿ, ಮಂಜುನಾಥ ಕುಚನೂರೆ, ವಿಶ್ವ ನಾಥ ನಾಮದಾರ, ಬಾಹುಬಲಿ ಕುಸನಾಳೆ, ಶಂಕರ ಕೋಬರ್ು, ಚಿದಾನಂದ ಕೊರ್ಜು, ಮಹೇಶ ತೇರದಾಳೆ, ಪ್ರದೀಪ ಪಾಟೀಲ, ಅಮೀತ ಡೂಗನವರ, ಸಿದ್ದಾಂತ ಪಾಟೀಲ, ಪ್ರದೀಪ ಬಡಿಗೇರ, ಸತೀಶ ಕುಸನಾಳೆ, ವಿಕಾಸ ಜಾಧವ, ಮಂಜುಬ್ರಿಷ್ಟಾನಿ, ಸದಾಶಿವ ಕೇರಿಕಾಯಿ , ರಾಜು ಖವಟಕೋಪ್ಪ, ಸಿದ್ದು ಅಡೀಶೇರಿ,ಸಂತೋಷ ತೇರದಾಳೆ, ಸುಮೀತ ಕುಸನಾಳೆ,ಗುರುರಾಜ ಕಾಲತಿಪ್ಪಿ, ಪ್ರಕಾಶ ಗಾಣಿಗೇರ, ಸಂದೀಪ ರಡ್ಡಿ, ಹೇಮಂತ ಪೂಜಾರಿ ಇತರರು ಇದ್ದರು 

ಸುದ್ದಿ ಓದಿ