ಕ್ರೀಡಾಪಟುಗಳಿಗೆ ಬ್ಲಾಕ್ ಬೆಲ್ಟ್ ವಿತರಣೆ
ಶೇಡಬಾಳ : ಮುಪ್ಪಿನಾವಸ್ಥೆ, ಮಧ್ಯವಯಸ್ಕರಾದ ಮೇಲೆ ಬೊಜ್ಜು ಕರಗಿಸುವಗೋಸ್ಕರ ವ್ಯಾಯಾಮ ಮಾಡುವುದರ ಬದಲಾಗಿ ಬಾಲ್ಯದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಹಾಗೂ ಶರೀರವನ್ನು ಸದೃಢಗೊಳಿಸುವಂತೆ ಶಿರಗುಪ್ಪಿಯ ಸಾಮಾಜಿಕ ಕಾರ್ಯಕರ್ತ ಹಾಗೂ ರೈತ ಸಂಘದ ಮುಖಂಡ ಸುರೇಶ ಚೌಗಲೆ ಕರೆ ನೀಡಿದರು.
ಅವರು ಶನಿವಾರ ದಿ. 24 ರಂದು ಶಿರಗುಪ್ಪಿ ಗ್ರಾಮದ ಮಲ್ಲಿಕಾಜರ್ುನ ಕಲ್ಯಾಣ ಮಂಟಪದಲ್ಲಿ ಬೆಳಗಾವಿ ಜಿಲ್ಲಾ ರಾಣಿ ಚೆನ್ನಮ್ಮ ಸೆಲ್ಫ್ ಡಿಫೆನ್ಸ್ ಮತ್ತು ಕರಾಟೆ ಸ್ಪೋಟ್ಸ್ ಅಸೋಸಿಯೆಶನ್ ಆಯೋಜಿಸಿದ್ದ ಕರಾಟೆ ಸ್ಪರ್ಧೆಯಲ್ಲಿ ಉತ್ತೀರ್ಣರಾದ ಕ್ರೀಡಾಪಟುಗಳಿಗೆ ಬ್ಲಾಕ್ ಬೆಲ್ಟ್ ವಿತರಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡುತ್ತಾ ಇಂದಿನ ದಿನಮಾನಗಳಲ್ಲಿ ಮನೆಯಿಂದ ಹೊರಗೆ ಹೋದ ವಿದ್ಯಾಥರ್ಿನಿಯರು, ಮಹಿಳೆಯರು ಸುರಕ್ಷಿತವಾಗಿ ಮನೆಗೆ ಬರುತ್ತಾರೆಂಬ ನಂಬಿಕೆ ಪಾಲಕರಲ್ಲಿ ಇಲ್ಲದಂತಾಗಿದೆ. ದಿನಾಲು ಜೀವಹಾನಿ, ಮಾನಹಾನಿ, ಅತ್ಯಾಚಾರ ಪ್ರಕರಣಗಳು ಜರುಗುತ್ತಲೇ ಇವೆ. ಇವೆಲ್ಲದರಿಂದ ತಮ್ಮ ಪ್ರಾಣ ಹಾಗೂ ಮಾನ ರಕ್ಷಣೆ ಮಾಡಿಕೊಳ್ಳಬೇಕಾದರೆ ಪ್ರತಿಯೊಬ್ಬರು ಕರಾಟೆ ಕಲಿಯುವುದು ಅತ್ಯವಶ್ಯವಾಗಿದ್ದು ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ರಾಣಿ ಚೆನ್ನಮ್ಮ ಸೆಲ್ಫ್ ಡಿಫೆನ್ಸ್ ಮತ್ತು ಕರಾಟೆ ಸ್ಪೋಟ್ಸ್ ಅಸೋಸಿಯೆಶನ್ ಸಂಸ್ಥಾಪಕರಾದ ಜುಗೂಳದ ರಾಜು ಪಾಟೀಲ ಮಾತನಾಡುತ್ತಾ ವಿದ್ಯಾರ್ಥಿ- ವಿದ್ಯಾರ್ಥಿ ನಿಯವರು ಕ್ರೀಡಾಕೂಟಗಳಲ್ಲಿ ಭಾಗವಹಿಸುವದರಿಂದ ಶಾರೀರಿಕವಾಗಿ ಸದೃಡವಾಗುವುದರ ಜತೆಗೆ ಮಾನಸಿಕವಾಗಿಯೂ ಸದೃಡವಾಗಿರುತ್ತಾರೆ. ನಗರ ಪ್ರದೇಶಗಳಲ್ಲಿ ರಾತ್ರಿ ಸಮಯದಲ್ಲಿ ಮಹಿಳೆಯರು, ವಿದ್ಯಾಥರ್ಿನಿಯರು ಒಂಟಿಯಾಗಿ ಹೊರಗೆ ಹೋಗುವುದೆ ದುಸ್ತರವಾಗಿರುವ ಇಂದಿನ ದಿನಮಾನಗಳಲ್ಲಿ ಮಹಿಳೆಯರು ತಮ್ಮ ಮಾನ, ಪ್ರಾಣ ರಕ್ಷಣೆಗಾಗಿ ಕರಾಟೆ ಕಲಿಯುವುದು ಅವಶ್ಯವಾಗಿದೆ. ಅದೇ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯಾಥರ್ಿನಿಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಕರಾಟೆ ಟ್ರೇನಿಂಗ್ ಸ್ಕೂಲ್ ಪ್ರಾರಂಭಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾಜು ಪಾಟೀಲ ಹೇಳಿದರು.
ಕಾರ್ಯದರ್ಶಿ ಮಂಜುನಾಥ ಭೋವಿ ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸುತ್ತಾ ಕಾಗವಾಡದಲ್ಲಿ 25 ವಿದ್ಯಾಥರ್ಿಗಳಿಗೆ ಪ್ರಾರಂಭವಾಗಿರುವ ಬೆಳಗಾವಿ ಜಿಲ್ಲಾ ರಾಣಿ ಚೆನ್ನಮ್ಮ ಸೆಲ್ಫ್ ಡಿಫೆನ್ಸ್ ಮತ್ತು ಕರಾಟೆ ಸ್ಪೋಟ್ಸ್ ಅಸೋಸಿಯೆಶನ್ ಕರಾಟೆ ಅಸೋಸಿಯೋಶನ್ ಇಂದು ಜಿಲ್ಲೆಯಾದ್ಯಂತ, ರಾಜ್ಯಾದ್ಯಂತ ಕರಾಟೆ ಟ್ರೇನಿಂಗ್ ಸ್ಕೂಲ್ಗಳನ್ನು ಪ್ರಾರಂಭಿಸಿದ್ದು, ಸಾವಿರಾರು ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವುದು ಸಂಸ್ಥೆಗೆ ಸಂದ ಗೌರವವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಬೆಲ್ಟ್ದಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಪದವಿ ಪತ್ರ, ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸತ್ಕರಿಸಿ ಸನ್ಮಾನಿಸಿದರು.
ನೆರೆದ ಅತಿಥಿ, ಗಣ್ಯಮಾನ್ಯರ ಮುಂದೆ ಕರಾಟೆ ಪಟುಗಳು ತಮ್ಮ ಕರಾಟೆ ಪ್ರತಿಭೆಯನ್ನು ಪ್ರದರ್ಶಿಸಿ ನೆರೆದ ಜನಸ್ತೋಮವನ್ನು ಮಂತ್ರಮುಗ್ಧಗೊಳಿಸಿದರು.
ಈ ಸಮಯದಲ್ಲಿ ಸುರೇಶ ಚೌಗಲೆ, ಗ್ರಾಪಂ ಅಧ್ಯಕ್ಷೆ ಅರ್ಪಣಾ ಪಾಟೀಲ, ಸಂತೋಷ ಸರ್, ರಾಮು ವಡ್ಡರ, ಸಂತೋಷ ಶಿರಗಾಂವೆ, ಮನೋಜ ವಡ್ಡರ, ಕಾವೇರಿ ಜಾಧವ, ಪರೀಕ್ಷೆಯ ತೀಪರ್ುಗಾರರಾದ ಕೃಷ್ಣಾ ಅಡಗಲೆ, ರಾಜು ಪಾಟೀಲ, ಲಕ್ಷ್ಮಣ ವಡ್ಡರ, ನಂದೇಶ ಘಾಟಗೆ, ಅಜೀತ ಅರಬೋಳೆ, ತರಭೇತಿ ಶಿಕ್ಷಕರಾದ ಅನೀಲ ಭಜಂತ್ರಿ, ಕಿರಣ ಭಜಂತ್ರಿ, ರೋಹಿತ ಮಾಳಿ, ರಾಹುಲ ಪಾಟೀಲ, ದೀಪಕ ಪಾಟೀಲ, ಕುಮಾರ ಭಜಂತ್ರಿ, ಶಂಕರ ರಾಯಮಾನೆ, ಸ್ವಾತಿ ಕಾಂಬಳೆ, ಅಕ್ಷತಾ ಪಾಟೀಲ, ಕುಮಾರ ಸನದಿ, ನವಿನಾಥ ಗೌಂಡಿ, ಚೇತನ ಭಜಂತ್ರಿ, ಯುಕ್ತಿ ಮುಲ್ಯ, ಸಂದೀಪ ಸರ್ ಸೇರಿದಂತೆ ತಾಲೂಕಿನ ಕರಾಟೆ ಪಟುಗಳು, ಪಾಲಕರು, ತರಭೇತುದಾರರು ಅಪಾರ ಸಂಖ್ಯೆಯಲ್ಲಿ ಇದ್ದರು.
ಶಿಕ್ಷಕ ಸಂದೀಪ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.