ದೇವಿಕಾ ಪಿ.ಯು. ವಿಜ್ಞಾನ ವಾಣಿಜ್ಯ ಕಟ್ಟಡ ಭೂಮಿ ಪೂಜೆ
ದೇವಿಕಾ ಪಿ.ಯು. ವಿಜ್ಞಾನ ವಾಣಿಜ್ಯ ಕಟ್ಟಡ ಭೂಮಿ ಪೂಜೆ
ರಾಣೇಬೆನ್ನೂರು 30: ಇಲ್ಲಿನ ಗಣೇಶ್ ನಗರದಲ್ಲಿನ, ಪ್ರತಿಷ್ಠಿತ ಶ್ರೀ ವೆಂಕಟೇಶ್ವರ ವಿದ್ಯಾ ಸಂಸ್ಥೆಯು, ತನ್ನ ವಿನೂತನ, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನೂತನವಾಗಿ ದೇವಿಕಾ ಪಿಯು ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ನೂತನ ಕಟ್ಟಡದ, ಭೂಮಿ ಪೂಜಾ ಸಮಾರಂಭವು, ನವೆಂಬರ್ 2, 2024ರಂದು ಶನಿವಾರ ಮುಂಜಾನೆ 9:37ಕ್ಕೆ ವಾಸ್ತು ಶಾಂತಿ ಮತ್ತು ಲಕ್ಷ್ಮೀ ಪೂಜೇಯೊಂದಿಗೆ ಜರುಗಲಿದೆ ಎಂದು ಸಂಸ್ಥೆಯ ಚೇರ್ಮನ್, ನ್ಯಾಯವಾದಿ ಸಿ.ಆರ್.ಪಾಟೀಲ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯದರ್ಶಿ ವಿಜಯಾ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕ ಗಣೇಶ್ ಓದುಗೌಡರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೇವಿಕಾರಾಣಿ ಪಾಟೀಲ್, ಉಪಸ್ಥಿತರಿರುವರು.