ಒಳ ಮೀಸಲಾತಿಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿ,
ಒಳ ಮೀಸಲಾತಿಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿ,
ರಾಣಿಬೆನ್ನೂರ 26: ರಾಜ್ಯ ಸರ್ಕಾರ ಈಗಾಗಲೇ ಒಳ ಮೀಸಲಾತಿ ಕುರಿತು ಸಚಿವ ಸಂಪುಟದ ಸಭೆಯಲ್ಲಿ ನಿರ್ಧರಿಸಲು ತಯಾರಿ ನಡೆಸುತ್ತಿರುವುದು ಕಂಡುಬರುತ್ತದೆ, ಇದನ್ನು ವಿರೋಧಿಸಿ ರಾಜ್ಯದಲ್ಲಿರುವ ಗೋರ್ ಬಂಜಾರ ಸಮುದಾಯ ನಿರಂತರ ಹೋರಾಟ ಮಾಡುತ್ತಲ್ಲಿದೆ. ಸಮುದಾಯದ ವಿರೋಧಿ ಧೋರಣೆ ನೀತಿ ಅನುಸರಿಸದೇ, ಈ ಕೂಡಲೇ ನಿರ್ಧರಿಸಲು ಹೊರಟಿರುವ ನಮವನ್ನು ಕೈಬಿಡಬೇಕು ಇಲ್ಲವಾದಲ್ಲಿ ರಾಜ್ಯದಾದ್ಯಠ ಉಗ್ರ ಹೋರಾಟ ತಿಳಿಸಬೇಕಾಗುತ್ತದೆ ಎಂದು ಸಲ್ಲಿಸಿರುವ ಮನವಿಯಲ್ಲಿ ಗೋರ್ಸೇನಾ ಸಮಿತಿ ಎಚ್ಚರಿಸಿದೆ.
ರಾಜ್ಯದಲ್ಲಿರುವ ಲಂಬಾಣಿ, ಭೋವಿ, ಕೊರ ಚ, ಕೊರಮ, ಸಮುದಾಯಗಳನ್ನು ಒಂದು ಗುಂಪಿಗೆ ಸೇರಿಸಿ, ಈ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿ ಇಂದ, ಹೊರಗಿಡಬೇಕೆನ್ನುವ ಯತ್ನವು ಎಂದಿಗೂ ಸಹಿಸಲು ಸಾಧ್ಯವಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನಾತ್ಮಕವಾಗಿ ನೀಡಿರುವ ಮೀಸಲಾತಿಯನ್ನು ಆ ಸಂವಿಧಾನಾತ್ಮಕ ಹಾಗೂ ಆ ವೈಜ್ಞಾನಿಕವಾಗಿ ವರ್ಗಿಕರಣವನ್ನು ಸರ್ಕಾರ ಮೀಸಲಾತಿಯ ವರ್ಗೀಕರಣ ರಾಜ್ಯದಲ್ಲಿರುವ ಎಲ್ಲಾ ಸಮುದಾಯಗಳ ಸರಿಯಾದ ಅಧ್ಯಯನ ಇಲ್ಲದೆ ಹಾಗೂ ವೈಜ್ಞಾನಿಕವಾಗಿ ಸರಿಯಾದ ದತ್ತಾಂಶ ಸಂಗ್ರಹಿಸಲಾರದೇ, ತರಾತುರಿಯಲ್ಲಿ ಮಾಡಕೂಡದು.
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರಕಿರುವ ಅವಕಾಶಗಳು, ಆರ್ಥಿಕ ಸ್ಥಿತಿ ಗತಿಗಳು, ರಾಜಕೀಯ ಸ್ಥಾನ ಮಾನ, ಹಾಗೂ ಸಾಮಾಜಿಕ ವ್ಯವಸ್ಥೆಯ ನಿಖರ ಅಂಕಿ ಅಂಶಗಳನ್ನು ಒಳಗೊಂಡ ದತ್ತಾಂಶವನ್ನು ಆಧರಿಸದೇ, ಒಳ ಮೀಸಲು ಹಂಚಿಕೆಯ ನಿರ್ಧಾರ ಸಮಂಜಸವಾದ ನಡೆಯಲ್ಲ ಎಂದು ಸರಕಾರದ ನಿರ್ಧಾರವನ್ನು ಖಂಡಿಸಿದ್ದಾರೆ. ರಾಜ್ಯದ ಬಂಜಾರ,ಭೋವಿ, ಕೊರಚ, ಕೋರಮ ಸಮುದಾಯಗಳ ಪರವಾಗಿ ಸರಿಯಾದ ಅಧ್ಯಯನ ಇಲ್ಲದೇ, ವರ್ಗಿಕರಿಸಬಾರದೆಂದು ಗೋರ್ ಸೇನಾ ಸಂಘಟನೆ ಒತ್ತಾಯಿಸಿ ರಾಜಧಾನಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಕ್ಟೋಬರ್ 2, 2024 ರಂದುಭಾಗವಹಿಸಿದ 500ಕ್ಕೂ ಹೆಚ್ಚು ಸತ್ತಾಗ್ರಹಿಗಳ ಸಾಕ್ಷಿಯಾಗಿ ರಾಜ್ಯ ಸರ್ಕಾರಕ್ಕೆ ಇಂದು ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದು ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಇದೇ 28 ರಂದು ಸಚಿವ ಸಂಪುಟ ಸಭೆಯನ್ನು ವಿರೋಧಿಸಿ, ರಾಜ್ಯಮಟ್ಟದಲ್ಲಿ ಸಮಗ್ರ ಬಂಜಾರ, ಭೋವಿ, ಕೊರಚ, ಕೊರಮ, ಸಮುದಾಯಗಳಿಗೆ ಯಾವುದೇ ಅನ್ಯಾಯ ಆಗಬಾರದೆಂದು ಗೋರ್ ಸೇನಾ ರಾಜ್ಯ ಘಟಕವು ಈ ಮೂಲಕ ಎಚ್ಚರಿಕೆಯ ಮನವಿ ಸಲ್ಲಿಸುತ್ತಿದೆ ಈಗಾಗಲೇ ಈ ಕುರಿತು ವಿರೋಧಿ ನೀತಿ ಅನುಸರಿಸಿದ ಬಿಜೆಪಿ ಹಠವೂ, ತಾಂಡಾ ಬಚಾವ್ ಎಂಬ ಘೋಷಣೆಯು ಮೊಳಗಿದ್ದು, ಮುಂದೆ ಕಾಂಗ್ರೆಸ್ ಹಠಾವೂ, ತಾಂಡಾ ಬಚಾವೋ, ಎಂದು ಬದಲಾಗದಂತೆ ಇರುವ ನಿಗಾ ವಹಿಸಲು ಎಚ್ಚರಿಸುತಿದ್ದೇವೆ. ಎಂದು ಮನವಿಯಲ್ಲಿ ಕಿಡಿ ಕಾರಿದ್ದಾರೆ.
ಮನವಿಸಲಿಕ್ಕೆ ಮುಂಚೂಣಿಯಲ್ಲಿ ಪಾಂಡಾಗಳ ಮುಖಂಡರಾದ ರಾಮಪ್ಪ ನಾಯಕ್, ಚಂದ್ರು ಲಮಾಣಿ, ವಸಂತ ಪೂಜಾರ್, ರಮೇಶ್ ನಾಯಕ್, ದಾನಪ್ಪ ಪೂಜಾರ್, ಮಾಲತೇಶ್ ಲಮಾಣಿ, ಮಾರುತಿ ಲಮಾಣಿ, ದೇವಲಪ್ಪ ಲಮಾಣಿ ಆನಂದ್ ಲಮಾಣಿ ಹಾಲೇಶ್ ಲಮಾಣಿ, ಬೀರ್ಪ ಲಮಾಣಿ, ಸೇರಿದಂತೆ ಗೋರ್ ಸೇನಾ ಸಮಿತಿಯ ನೂರಾರು ಯುವಕರು, ಹಿರಿಯರು ಮುಖಂಡರು ಪಾಲ್ಗೊಂಡಿದ್ದರು.