ಬಣಜಿಗ ಸಮಾಜದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ: ಬಿರಾದಾರ
ಇಂಡಿ: ಸಮಾಜದ ಎಲ್ಲ ವರ್ಗದವರನ್ನು ಸಮನ್ವಯದಿಂದ ಕರೆದೊಯ್ಯುವ ಸಾಮರ್ಥ್ಯ ಹೊಂದಿದ ವ್ಯಕ್ತಿಯನ್ನು ಬಣಜಿಗ ಸಮಾಜದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.
ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಚನ್ನುಗೌಡ ಪಾಟೀಲ(ರೋಡಗಿ) ಅವರನ್ನು ಸತ್ಕರಿಸಿ ನಂತರ ಮಾತನಾಡಿದ ಅವರು.
ಚನ್ನುಗೌಡ ಪಾಟೀಲರು ಸರ್ವ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಸಮಾಜ ಸಂಘಟಿಸುವುದರ ಜೊತೆಗೆ ಇತರೆ ಸಮಾಜದ ಪ್ರೀತಿ, ವಿಶ್ವಾಸ ಗಳಿಸಿಕೊಂಡು ಸಮಾಜ ಸಂಘಟನೆ ಮುನ್ನಡೆಸಿಕೊಂಡು ಹೋಗುವ ವಿಶ್ವಾಸವಿದೆ ಎಂದರು.
ಸನ್ಮಾನ ಸ್ವೀಕರಿಸಿ ಚನ್ನುಗೌಡ ಪಾಟೀಲ ಮಾತನಾಡಿ, ಸಮಾಜದ ಎಲ್ಲ ವರ್ಗದವರನ್ನು ಸಮನ್ವಯದಿಂದ ಕರೆದೊಯ್ಯುವ ಸಾಮಥ್ರ್ಯ ನಮ್ಮ ಬಣಜಿಗ ಸಮಾಜಕ್ಕೆ ಇದೆ. ನನ್ನನ್ನು ಸಮಾಜದವರು ಗುರುತಿಸಿ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದು ನನಗೆ ಹೆಚ್ಚಿನ ಜವಾಬ್ದಾರಿ ಬಂದಿದೆ. ಸಮಾಜ ಸಂಘಟನೆ ಮಾಡುತ್ತೇನೆ. ಬಣಜಿಗ ಸಮಾಜ ಎಸ್,ನಿಜಲಿಂಗಪ್ಪ, ಜೆ.ಎಚ್.ಪಟೇಲ ಸೇರಿದಂತೆ ಅನೇಕ ಮಹಾನ್ ನಾಯಕರನ್ನು ಜಗತ್ತಿಗೆ ಕೊಟ್ಟಿದೆ. ನಮ್ಮ ಹಿರಿಯರು ತೋರಿದ ಮಾರ್ಗವೇ ನಮಗೆ ಆದರ್ಶ ಆಗಬೇಕು.ಈ ನಿಟ್ಟಿನಲ್ಲಿ ಸಮಾಜದ ಸಂಘಟನೆಯ ಜವಾಬ್ದಾರಿ ನನ್ನ ಮೇಲೆ ಹೊರಿಸಿದ್ದು,ಅವರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಸಮಾಜ ಸಂಘಟನೆಯಲ್ಲಿ ತೊಡಗುವುದಾಗಿ ಹೇಳಿದರು.
ಎಂ. ಆರ್. ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಭೀಮರಾಯಗೌಡ ಬಿರಾದಾರ, ರಾಜಶೇಖರ ಯರಗಲ್ಲ, ಬತ್ತುಸಾಹುಕಾರ ಹಾವಳಗಿ, ಸಿಕಂದರ ಬೋರಾಮಣಿ, ಸಿದ್ದಣ್ಣ ಗುನ್ನಾಪೂರ, ಶಿವಾನಂದ ರಾವೂರ, ಅಣ್ಣಪ್ಪ ಬಿದರಕೋಟೆ, ಅಂಬಣ್ಣ ಧೋತ್ರೆ ಮೊದಲಾದವರು ಇದ್ದರು.