ವಕೀಲರ ಸಂರಕ್ಷಣಾ ಮಸೂದೆ ಅಧಿವೇಶನದಲ್ಲಿ ಮಂಡಿಸಲು ಒತ್ತಾಯ
ರಾಣೆಬೆನ್ನೂರು 18: ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಿಗೆ ನ್ಯಾಯದ ಪರ ವಾದ ಮಂಡಿಸುವ ವಕೀಲರ ಮೇಲೆ ಅನೇಕ ರೀತಿಯಲ್ಲಿ ದಬ್ಬಾಳಿಕೆ ಮತ್ತು ಅಲ್ಲೇ ಪ್ರಕರಣಗಳು ನಡೆಯುತ್ತಿದ್ದು, ವಕೀಲರ ಸಂರಕ್ಷಣಾ ಮಸೂದೆ 2021 ನಡೆಯಲಿರುವ ಅಧಿವೇಶನದಲ್ಲಿ ಮಂಡಿಸುವಂತೆ ಒತ್ತಾಯಿಸಿ ಶನಿವಾರ ವಕೀಲರ ಸಂಘದ ನೂರಾರು ವಕೀಲರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದರು. ನ್ಯಾಯದಾನ ಕ್ಷೇತ್ರದಲ್ಲಿ ತಮ್ಮ ನ್ಯಾಯ ಪರ ಸೇವೆ ಸಲ್ಲಿಸುವ ವಕೀಲರ ಮೇಲೆ ಪೊಲೀಸರಿಂದ ಸಾರ್ವಜನಿಕರಿಂದ, ಹಲ್ಲೆ, ದಬ್ಬಾಳಿಕೆ ನಿರಂತರವಾಗಿ ನಡೆಯುತ್ತಿವೆ. ಇದರಿಂದ ವಕೀಲರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಎಂದು ಸಲ್ಲಿಸಿರುವ ಮನವಿಯಲ್ಲಿ ಹೇಳಿದ್ದಾರೆ. ಸರಕಾರ ಈಗಾಗಲೇ ವೈದ್ಯರಿಗೆ ರಕ್ಷಣಾ ಕಾನೂನು ಜಾರಿ ಮಾಡಿರುವಂತೆ ವಕೀಲರಿಗೂ ಸಹ ಕೂಡಲೇ ರಕ್ಷಣಾ ಕಾಯ್ದೆಯನ್ನು ಇದೇ 18-12-2022 ರಂದು ನಡೆಯುವ ಅಧಿವೇಶನದಲ್ಲಿ ಮಂಡಿಸಿ ಮಂಜೂರು ಮಾಡಲು ಸಂಘವು ಸಲ್ಲಿಸಿರುವ ಮನವಿಯಲ್ಲಿ ಕೋರಿದ್ದಾರೆ. ಈಗಾಗಲೇ ಕಾಯ್ದೆಯು ಅಂತಿಮ ಕರಡು ಕಾನೂನು ಇಲಾಖೆಯಲ್ಲಿ ಇದ್ದು, ವಕೀಲರ ರಕ್ಷಣಾ ಮಸೂದೆಯನ್ನು ಮಂಡನೆ ಮಾಡಿ ಜಾರಿಗೆ ತರಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ವಕೀಲರ ಸಂಘದ ಅಧ್ಯಕ್ಷರು ಹಾಗೂ ಅಧಿಕಾರಿಗಳು ಒತ್ತಾಯಿಸಿದ್ದಾರೆ ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಸಂಘದ ಅಧ್ಯಕ್ಷ ಬಿ. ಹೆಚ್.ಬುರಡಿಕಟ್ಟಿ, ಉಪಾಧ್ಯಕ್ಷ ಎಲ್ಎಫ್ ಕೆಂಗೊಂಡ, ಪ್ರಧಾನ ಕಾರ್ಯದರ್ಶಿ ಎನ್ ಎಂ ದೊಂಬರ, ಸಹ ಕಾರ್ಯದಶರ್ಿ ಉಮೇಶ್ ಕೊನ ಬೇವು ಮತ್ತು ಪದಾಧಿಕಾರಿಗಳು ಹಾಗೂ ಸಂಘದ ಹಿರಿಯ ನ್ಯಾಯವಾದಿಗಳು ಕಿರಿಯ ನ್ಯಾಯವಾದಿಗಳು ಮಹಿಳಾ ನ್ಯಾಯವಾದಿಗಳು ಪಾಲ್ಗೊಂಡಿದ್ದರು