ಕಾಗವಾಡ

ಶಿವಾನಂದ ಮಹಾವಿದ್ಯಾಲಯದಲ್ಲಿ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮ

ಶಿವಾನಂದ ಮಹಾವಿದ್ಯಾಲಯದಲ್ಲಿ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮ

ಶಿವಾನಂದ ಮಹಾವಿದ್ಯಾಲಯದಲ್ಲಿ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮ 

ಕಾಗವಾಡ 21: ಸೈಬರ್ ಅಪರಾಧವು ಕಾನೂನು ಬಾಹಿರ ಕೃತ್ಯವಾಗಿದ್ದು, ಯಾವುದೇ ರೀತಿಯ ಸಂಹವನ ಸಾಧನದ ಮೂಲಕ ಅಕ್ರಮವಾಗಿ ಇದನ್ನು ಬಳಸಲಾಗುತ್ತಿದೆ. ಆದ್ದರಿಂದ ಈ ಹಾನಿಕಾರಕ ಚುಟುವಟಿಕೆಗಳಿಂದ ವಿದ್ಯಾರ್ಥಿಗಳು ಎಚ್ಚರ ವಹಿಸಬೆಕೆಂದು ಬೆಳಗಾವಿಯ ಸೈಬರ್‌ಕ್ರೈಂ ವಿಭಾಗದ ಮುಖ್ಯ ಪೇದೆ ಲಕ್ಷ್ಮಣ ಕುಂಬಾರೆ ತಿಳಿಸಿದರು. 

ಅವರು ಬುಧವಾರ ದಿ. 20 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತ ಗಣಕಯಂತ್ರ ವಿಭಾಗ, ಎನ್‌ಎಸ್‌ಎಸ್, ಬೆಳಗಾವಿ ಜಿಲ್ಲಾ ಪೋಲಿಸ್, ಸಿಇಎನ್ ಅಪರಾಧ ಪೋಲಿಸ್ ಠಾಣೆ ಇವುಗಳ ಸಹಯೋಗದಲ್ಲಿ ಸೈಬರ್ ಕ್ರೈಂ ಮತ್ತು ಮಾದಕ ದ್ರವ್ಯಗಳ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಜಂಗಮ ವಾಣಿ (ಮೊಬೈಲ್) ನಿಂದ ಎಚ್ಚರಿಕೆಯಿಂದ ಇರಬೇಕು. ಅದನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕು ಎಂದು ಕರೆ ನೀಡಿದರು. 

ಚಿಕ್ಕೋಡಿಯ ಸೈಬರ್ ಕ್ರ್ರೈಂ ಜಾಗೃತಿಯ ಸಂಯೋಜಕ ಅಮೀತ ಮಾಳಿ ವಿದ್ಯಾರ್ಥಿಗಳಿಗೆ ಪಿಪಿಟಿ ತೋರಿಸುವುದರ ಮೂಲಕ ಸೈಬರ್ ಕ್ರೈಂನ ಜಾಗೃತಿಯನ್ನು ಮೂಡಿಸಿದರು. 

ಕಾಗವಾಡದ ಪಿಎಸ್‌ಐ ಜಿ.ಜಿ. ಬಿರಾದಾರ ಮಾತನಾಡಿ, ಇವತ್ತಿನ ವಿದ್ಯಾರ್ಥಿಗಳು ತುಂಬಾ ಸೂಕ್ಷ್ಮವಾದ ದಿನಗಳಲ್ಲಿ ಜೀವಿಸುತ್ತಿದ್ದಾರೆ. ಈಗ ಮೊಬೈಲ್ ಹಾಗೂ ಅಂತರಜಾಲದ ಬಳಕೆಯನ್ನು ಅತೀ ಸೂಕ್ಷ್ಮವಾಗಿಯೇ ಬಳಸಬೇಕಾಗುತ್ತದೆ. ಸ್ವಲ್ಪ ಯಾಮಾರಿದರೂ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜೊತೆಗೆ ವಿದ್ಯಾರ್ಥಿಗಳು ಪರಿಶ್ರಮದಿಂದ ತಮ್ಮ ಸಾಧನೆಯನ್ನು ಮುಟ್ಟಬೇಕು ಎಂದರು. 

ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಎಸ್‌ಎ. ಕರ್ಕಿ ವಹಿಸಿದ್ದರು. ಈ ಸಮುಯದಲ್ಲಿ ಕಾಗವಾಡ ಪೋಲಿಸ್ ಠಾಣೆಯ ಸಿಬ್ಬಂದಿ, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಡಾ. ಎ.ಎಂ. ಜಕ್ಕಣ್ಣವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕು. ಪರುಶರಾಮ ಸಂಭೋಜಿ ನಿರೂಪಿಸಿದರು.  ಪ್ರೊ. ಬಿ.ಡಿ. ಧಾಮಣ್ಣವರ ವಂದಿಸಿದರು. 









ಸುದ್ದಿ ಓದಿ