ಕಾಗವಾಡ

ಚಿಕಿತ್ಸೆ ನೀಡುವ ವೈದ್ಯರಿಗೂ ಕೊರೊನಾ ಕಂಟಕ

ಚಿಕಿತ್ಸೆ ನೀಡುವ ವೈದ್ಯರಿಗೂ ಕೊರೊನಾ ಕಂಟಕ

ಲೋಕದರ್ಶನ ವರದಿ

ಮೋಳೆ 26:  ಆರೋಗ್ಯ ಇಲಾಖೆಯ ನಿರಂತರ ಜಾಗೃತಿ ನಡುವೆಯೂ ಸಹ ವೈರಾಣು ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಪ್ರಯಾಸ ಪಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಚಿಕಿತ್ಸೆ ನೀಡುವ ವೈದ್ಯರಿಗೆ ಕೊರೊನಾ ಸೋಂಕು ವಕ್ಕರಿಸಿದೆ.

ಶನಿವಾರ ದಿ.25 ರಂದು ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಒಂದೇ ದಿನ ಮಂಗಸೂಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸೇರಿದಂತೆ 66 ಜನರಿಗೆ ಕೊರೊನಾ ಸೋಂಕು ದೃಢಪಟ್ಟ ವರದಿಯಾಗಿದೆ ಎಂದು ತಹಸೀಲ್ದಾರ ಪರಿಮಳಾ ದೇಶಪಾಂಡೆ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣದಿಂದ ಜನರು ಚಿಂತಾಕ್ರಾಂತರಾಗಿದ್ದು,  ಇದುವರೆಗೂ ಮನೆಗಳು, ರಸ್ತೆಗಳನ್ನು ಸೀಲ್ಡೌನ್ ಮಾಡುತ್ತಿದ್ದ ಸರಕಾರ ಈಗ ಸಕರ್ಾರಿ ಕಚೇರಿ ಆಸ್ಪತ್ರೆ, ಪೊಲೀಸ್ ಠಾಣೆಗಳನ್ನು ಸೀಲ್ಡೌನ್ ಮಾಡುವ ಮೂಲಕ ಜನರ ಭಯಕ್ಕೆ ಕಾರಣವಾಗಿದೆ.

ಸರಕಾರದ ನಿರ್ಲಕ್ಷವೇ ಕಾರಣ ;- ಈ ಹೆಮ್ಮಾರಿ ಸೋಂಕು ಯಾವಾಗ ಯಾರಿಗೆ ಹೇಗೆ ಹರಡುತ್ತದೆ ಎಂಬುದು ಗೊತ್ತಾಗುತ್ತಿಲ್ಲ. ನಿರೀಕ್ಷೆಗೂ ಮೀರಿ ಅಟ್ಟಹಾಸ ಮೆರೆಯುತ್ತಿದ್ದೆ. ಕೊರೊನಾ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತಿಯ ಸಂಪರ್ಕಕ್ಕೆ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡದೇ ಹೋಂ ಕ್ವಾರಂಟೈನ್ ಮಾಡುತ್ತಿರುವದರಿಂದ ಸೋಂಕಿತ ಸಂಪರ್ಕ ಹೊಂದಿದವರು ಕ್ವಾರಂಟೈನ್ಲ್ಲಿರದೆ ಎಲ್ಲಿ ಬೇಕೆಂದರಲ್ಲಿ ಅಡ್ಡಾಡುತ್ತಿರುವದರಿಂದ ಸೋಂಕು ಹರಡಲು ಕಾರಣವಾಗಿದೆ. ಇದಕ್ಕೆಲ್ಲ ಸರಕಾರದ ನಿರ್ಲಕ್ಷವೇ ಕಾರಣ ಎಂದು ಸಾರ್ವಜನಿಕರ ಆರೋಪವಾಗಿದೆ.

ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಶನಿವಾರ ದಿ.25 ರಂದು ಒಂದೇ ದಿನ 66 ಜನರಿಗೆ ಸೋಕು ದೃಡಪಟ್ಟಿದೆ. ಮಂಗಸೂಳಿ,13, ಶಿರಗುಪ್ಪಿ 11, ಉಗಾರ ಖುರ್ದ 3, ಜುಗುಳ 4, ಬೆವನೂರ 3, ಉಗಾರ ಬುದ್ರುಕ್ 3,ಐನಾಪುರ 5, ಕೃಷ್ಣಾ ಕಿತ್ತೂರ 4, ಕಾಗವಾಡ 16,  ಕುಸನಾಳ, ಮೋಳೆ, ಚಮಕೇರಿ ಹಾಗೂ ಸಂಬರಗಿ,ತಲಾ ಒಂದು ಪ್ರಕರಣ ಪತ್ತೆಯಾದ ವರದಿಯಾಗಿದೆ ತಹಸೀಲ್ದಾರ ಪರಿಮಳಾ ದೇಶಪಾಂಡೆ ಹೇಳಿದರು.

ಕಾಗವಾಡ ತಾಲೂತಿನಲ್ಲಿ ಸೋಂಕು ಪತ್ತೆಯಾದ ರೋಗಿಗಳಲ್ಲಿ 60 ವರ್ಷದ ಮೇಲ್ಪಟ್ಟವರನ್ನು ಹಾಗೂ ಸಕ್ಕರೆ ಕಾಯಿಲೆ ಹಾಗೂ ಹೃದಯ ರೋಗದಿಂದ ಬಳಲುತ್ತಿರುವವನ್ನು ಬೆಳಗಾವಿಯ ಬಿಮ್ಸ್ಗೆ ರಹವಾನಿಸಲಾಗುತ್ತಿದ್ದು ಉಳಿದವರನ್ನು ಶಿರಗುಪ್ಪಿಯಲ್ಲಿ ತಯಾರಿಸಲಾಗಿದ್ದ ಕೊರೋನಾ ಕೇರ್ ಸೆಂಟರನಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಹಸೀಲ್ದಾರ ಪರಿಮಳಾ ದೇಶಪಾಂಡೆ ಹೇಳಿದರು.

ಸುದ್ದಿ ಓದಿ