ನೂತನ ಕರಾವಳಿ ಬಳಗ ಅಸ್ತಿತ್ವಕ್ಕೆ ಸಂಘಟನೆ ಬೆಳೆಯಲು ಸಹಕಾರ ಅಗತ್ಯ : ಸುಧಾಕರ ಶೆಟ್ಟಿ
ರಾಣೆಬೆನ್ನೂರು 13: ಯಾವುದೇ ಸಂಘಟನೆಗಳು ಉಳಿದ ಬೆಳೆಯಬೇಕಾದರೆ ಸರ್ವರಲ್ಲಿ ಸಮ ಭಾವದ ಮನೋ ಭೂಮಿಕೆ ಬಹು ಮುಖ್ಯವಾಗುತ್ತದೆ ಎಂದು ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಹರಿ ಓಂ ಸುಧಾಕರ ಶೆಟ್ಟಿ ಹೇಳಿದರು.
ಅವರು ಸೋಮವಾರ ವಿನಾಯಕ ನಗರದ ಕುಂದಾಪುರ ಸಭಾಭವನದಲ್ಲಿ ನಡೆದ ನೂತನ ಕರಾವಳಿ ಬಳಗದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಭಾಷೆಗಿಂತ ಭಾವ ದೊಡ್ಡದು ಕರಾವಳಿ ಸಮುದಾಯ ಶ್ರಮಿಕರು. ಹಸಿದು ಬಂದವರಿಗೆ ಅನ್ನ ನೀಡುವುದರ ಮೂಲಕ ಆತ್ಮಾನಂದವನ್ನು ಪಡೆಯುವರು ಎಂದು ಕರಾವಳಿ ಸಂಸ್ಕೃತಿಯನ್ನು ವಿಶ್ಲೇಷಿಸಿ ಮಾತನಾಡಿದರು.
ದೇಶ,ಭಾಷೆ, ಒಂದೇ ಆದರೆ ಸಂಸ್ಕೃತಿ ಬೇರೆ ಬೇರೆಯಾಗಿದ್ದರು ಭಾರತದ ಸಂಸ್ಕೃತಿ ವಿಶ್ವದ ಎಲ್ಲ ರಾಷ್ಟ್ರಗಳಿಗಿಂತಲೂ ಮಿಗಿಲಾಗಿದೆ, ಭಾರತದ ಪರಂಪರೆ ಬಹುದೊಡ್ಡ ಪರಂಪರೆ ಇಲ್ಲಿ ಜನ್ಮ ತಾಳುವುದೇ ಪೂರ್ವಜನ್ಮದ ಪುಣ್ಯದ ಫಲ ಎಂದು ಭಾವಿಸಬೇಕಾಗಿದೆ ಎಂದರು. ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಅವರು, ರಾಣೆಬೆನ್ನೂರು ಪರಿಪೂರ್ಣ ಅಭಿವೃದ್ಧಿಯ ತಮ್ಮ ಕನಸು ಇನ್ನು ಸಮರ್ಪಕವಾಗಿ ನನಸಾಗಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ.
ರಾಣೆಬೆನ್ನೂರಿಗೆ ಕಳೆದ ಹತ್ತು ವರ್ಷಗಳ ಹಿಂದೆ ಬಂದು ಈ ಕ್ಷೇತ್ರದ ಜನರ ಬದುಕಿ ಸೇವೆ ಸಲ್ಲಿಸುತ್ತಿದ್ದೇನೆ. ನಮ್ಮ ದುಡಿಮೆಯ ಒಂದು ಭಾಗ ಜನಸೇವೆಗಾಗಿ ಮೀಸಲಿಟ್ಟಿದ್ದೇನೆ. ಕೆಲವು ತಪ್ಪು ನಿಧರ್ಾರಗಳಿಂದಾಗಿ ರಾಜಕೀಯವಾಗಿ ಅನೇಕ ಬದಲಾವಣೆಗಳು ಕಾಣುವಂತಾಯಿತು. ಹಣ ಗಳಿಸುವ ಉದ್ದೇಶ ನನ್ನದಲ್ಲ, ವಾಣಿಜ್ಯ ನಗರ ವಿಶ್ವದ ಭೂಪಟದಲ್ಲಿ ಅಭಿವೃದ್ಧಿಯ ಮೂಲಕ ಗುರುತಿಸುವಂತಾಗಬೇಕು ಎನ್ನುವುದು ತಮ್ಮ ಸಂಕಲ್ಪವಾಗಿದೆ ಎಂದರು.ಇನ್ನೋರ್ವ ಅತಿಥಿ ಹಾವೇರಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪ್ರಕಾಶ ಶೆಟ್ಟಿ ಅವರು, ಸಂಘಟನೆಯಲ್ಲಿ ಬಲವಿದೆ, ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವ ಕರಾವಳಿ ಸಮುದಾಯ, ಜನರ ಸಹಕಾರದೊಂದಿಗೆ ಬದುಕು ಕಟ್ಟಿಕೊಂಡಿದ್ದೇವೆ, ಎಲ್ಲರಂತೆ ನಾವು ಸಹ ಪ್ರಗತಿ ಕಾಣಬೇಕಾಗಿದೆ,
ಸಕರ್ಾರ ಮತ್ತು ಜನ ಆಡಳಿತ ನಮ್ಮೊಂದಿಗೆ ಜೋಡಿಸಿ ಸಹಕಾರ ನೀಡಬೇಕಾದ ಇಂದಿನ ಅಗತ್ಯವಿದೆ ಎಂದರು. ನಾಗ ಶಾಂತಿ ಪ.ಪೂ. ಕಾಲೇಜು ಆಚಾರ್ಯ ಪ್ರೊ . ಬಿ. ಬಿ. ನಂದ್ಯಾಲ ಅವರು ಸಮಾಜದ ಅಭಿವೃದ್ಧಿಯಲ್ಲಿ ಸಂಘಟನಾತ್ಮಕ ಶಕ್ತಿ ವಿಷಯ ಕುರಿತು ಮಾತನಾಡಿ, ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ, ಕರಾವಳಿ ಬಳಗದ ಅಧ್ಯಕ್ಷ ರತ್ನಾಕರ ಕುಂದಾಪುರ ಅವರು,ಸಮುದಾಯ ಒಂದು ಕಡೆ ಕೂಡಬೇಕು, ಕರಾವಳಿಯ ಆಚಾರ, ವಿಚಾರ,ಮತ್ತು ಅಲ್ಲಿನ ಸಮಗ್ರ ಸಂಸ್ಕೃತಿ ಅರಿವು ಮೂಡಿಸಬೇಕು ಎನ್ನುವ ಏಕೈಕ ಉದ್ದೇಶದಿಂದ ಬಳಗ ಆರಂಭಿಸಲಾಗಿದೆ.
ಈ ಮಣ್ಣಿನಲ್ಲಿ ಬಹು ವರ್ಷಗಳಿಂದ ಜೀವನ ಬದುಕು ಸಾಗಿಸುತ್ತಿರುವ ಈ ಸಮುದಾಯಕ್ಕೆ ಅಗತ್ಯವಿರುವ, ನಿವೇಶನ, ಭವನ ನಿರ್ಮಾಣಕ್ಕೆ 2, ಕೋಟಿ ರೂ ಅನುದಾನ ದೊರಕಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್ ಶಂಕರ್ ಅವರಲ್ಲಿ ಮನವಿ ಮಾಡಿದರು. ವೇದಿಕೆಯಲ್ಲಿ ಧನಲಕ್ಷ್ಮಿ ಆರ್. ಶಂಕರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕರಾವಳಿ ಸಮುದಾಯದ 300 ಕ್ಕೂ ಹೆಚ್ಚು ನಾಗರಿಕರು ಮಹಿಳೆಯರು ಪಾಲ್ಗೊಂಡಿದ್ದರು. ರಜನಿ ಕರಿಗಾರ್ ಸಂಗಡಿಗರು ಸಂಗೀತ ಸೇವೆ ಸಲ್ಲಿಸಿದರು. ಇಂದಿರಾ ಸಾವಂತಲವರ ಪ್ರಾರ್ಥಿಸಿದರು, ನಾಗೇಶ್ ಕುಂದಾಪುರ ನಿರೂಪಿಸಿ, ಎನ್.ಜಿ ಕುಂದಾಪುರ ವಂದಿಸಿದರು