ಜಮಖಂಡಿ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ: ಶಾಸಕ ನ್ಯಾಮಗೌಡ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ: ಶಾಸಕ ನ್ಯಾಮಗೌಡ

ಲೋಕದರ್ಶನ ವರದಿ,

ಜಮಖಂಡಿ 25: ಕೈಗೆ ಕೈ ಜೋಡಿಸಿ ಪಾದಯಾತ್ರೆಯ ಮೂಲಕ ಕ್ಷೇತ್ರದ ಜನತೆಗೆ ಭೇಟಿ ನೀಡಿದ್ದೇವೆ. ಜನರಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಇರುವ ಪ್ರೀತಿ, ಆತ್ಮವಿಶ್ವಾಸ ಅವರಲ್ಲಿ ಇರುವ ಒಲವು ನೋಡಿದರೆ ಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

ನಗರದ ದೇಸಾಯಿ ವೃತ್ತದಲ್ಲಿ ಮೂರನೇ ಹಂತದ ಪಾದಯಾತ್ರೆಗೆ ಚಾಲನೆ ನೀಡಿ. ಅರಳಿಕಟ್ಟಿಯ ಬ್ಯಾಳಿ ಬಸವೇಶ್ವರ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎರಡು ಹಂತಗಳಲ್ಲಿ ಗ್ರಾಮೀಣ ಭಾಗದಲ್ಲಿ ಪಾದಯಾತ್ರೆ ಮುಗಿಸಿ ಈಗ ಮೂರನೇ ಹಂತದ ಪಾದಯಾತ್ರೆಯನ್ನು ನಗರದಲ್ಲಿ ಪ್ರತಿ ವಾರ್ಡಗಳಲ್ಲಿ ಹಮ್ಮಕೊಂಡಿದ್ದೇವೆ. ಈ ನಾಲ್ಕು ವರ್ಷಗಳಲ್ಲಿ ನಾವೂ ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದ ಮೇಲೆ ಯಾವ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ ಎಂದು ಜನರಿಗೆ ಮಾಹಿತಿ ನೀಡುತ್ತಿದ್ದೇವೆ ಎಂದರು.

 ವಾರ್ಡ್ನ  ಸದಸ್ಯೆ ಬಂದವ್ವ ಅರಕೇರಿ , ಮಲ್ಲವ್ವಾ ಪಾಯಗೊಂಡ, ಚನ್ನಮಲ್ಲಪ್ಪ ನ್ಯಾಮಗೌಡ, ಸದಾಶಿವ ಅರಕೇರಿ, ನಂದೆಪ್ಪಾ ನ್ಯಾಮಗೌಡ, ಶಿವು ತೆಲಬಕ್ಕನವರ , ಲಕ್ಮ್ಷಣ ತುಪ್ಪದ, ಸುರೇಖಾ ಅರಕೇರಿ , ಸಾಯವ್ವಾ ತುಪ್ಪದ , ರೇಖಾ ಹೇಸಮನಿ, ಸರೋಜಿನಿ ತೆಲಬಕ್ಕನವರ ಸೇರಿದಂತೆ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಇದ್ದರು.


ಪೋಟೊ : ನಗರದ ಅರಳಿಕಟ್ಟಿಯ ಬ್ಯಾಳಿ ಬಸವೇಶ್ವರ ದೇವಸ್ಥಾನದಲ್ಲಿ ಶಾಸಕ ಆನಂದ ನ್ಯಾಮಗೌಡ ಅವರಿಗೆ ಸನ್ಮಾನಿಸಿ, ಮಹಿಳೆಯರು ಆರತಿ ಮಾಡಿದರು 

ಸುದ್ದಿ ಓದಿ