ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ
ಲೋಕದರ್ಶನ ವರದಿ,
ಜಮಖಂಡಿ02: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದರೆ ಈ ದೇಶದಲ್ಲಿ ಅಚ್ಚೆದಿನ ಎಂದಿದ್ದರು ಆದರೆ 9 ವರ್ಷಗಳು ಕಳೆದರೂ ಮೋದಿ ಅವರು ಒಳ್ಳೆ ದಿನಗಳೆ ಬರಲೇ ಇಲ್ವರ್ರಿ, ಬರೆ ಕೆಟ್ಟ ದಿನಗಳೆ ಬಂದು, ಅಧಿಕಾರಕ್ಕೆ ಬಂದರೆ ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ ಹಾಕುತ್ತೆನೆ ಎಂದಿದ್ದರು, 15 ಲಕ್ಷ ಅಲ್ಲ, 15 ಪೈಸೆನೂ ಹಾಕಲಿಲ್ವರ್ರಿ ಎಂದು ಮಾಜಿ ಸಿಎಂ,ಸಿದ್ದರಾಯ್ಯನವರು ವ್ಯಂಗವಾದರು.
ನಗರದ ಸಮೀಪದ ಕಡಪಟ್ಟಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಕಾಂಗ್ರೆಸ್ನ ಪ್ರಜಾಧ್ವನಿ ಸಮಾವೇಶ ಹಾಗೂ ಕೈಗೆ ಕೈಜೋಡಿಸಿ ಪಾದಯಾತ್ರೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಈಶ್ವರಪ್ಪಗೆ 40 ಪಸೆರ್ಂಟ್ ಕೊಡಲಾಗದೇ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ್ರು, ಈಗ ಸರ್ಕಾರ ಅವರಿಗೆ ಕ್ಲೀನ್ ಚೀಟ್ ಕೊಟ್ಟಿದೆ, ಬಿಜೆಪಿಯ ಬೊಮ್ಮಾಯಿ ಸಕರ್ಾರ ಅಲಿಬಾಬಾ, ಚಾಲೀಸ್ ಚೋರ್ ಇದ್ದಂಗೆ, ಏನೂ ಕೆಲಸ ಮಾಡಲ್ಲ. ಬರೀ ಲೂಟಿ ಸರಕಾರವಾಗಿದೆ. ರಾಜ್ಯದಲ್ಲಿ ಬಡವರಿಗೆ ಒಂದೆ ಒಂದು ಮನೆಗಳನ್ನು ನೀಡಿಲ್ಲ, ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಅಲ್ಪಸಂಖ್ಯಾತರ ಕಲ್ಯಾಣಕ್ಕೆ 5 ಸಾವಿರ ಕೋಟಿ ನೀಡುವದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. 2013 ರಲ್ಲಿ ನಾನು ಸಿಎಂ ಆದಾಗ 400 ಕೋಟಿ ಇತ್ತು, 2018ರಲ್ಲಿ ಮಂಡಿಸಿದ ಬಜೆಟ್ ನಲ್ಲಿ 3150 ಕೋಟಿ ಇಟ್ಟಿದ್ದೆ, ಮತ್ತೆ ಅಧಿಕಾರಕ್ಕೆ ಬಂದ್ರೆ 5 ಸಾವಿರ ಕೋಟಿ ಇಡುವುದಾಗಿ ಘೋಷಿಸಿದರು. ಮಹಿಳಾ ಸ್ವ ಸಹಾಯ ಸಂಘಗಳ 2500 ಕೋಟಿ ರೂಗಳ ಸಾಲವನ್ನು ಮನ್ನಾ ಮಾಡುತ್ತೆವೆ ಎಂದು ಭರವಸೆ ನೀಡಿದರು.
ಶಾಸಕ ಆನಂದ ನ್ಯಾಮಗೌಡ ಸದನದಲ್ಲಿ ಮತ್ತು ಕ್ಷೇತ್ರದಲ್ಲಿ ಒಳ್ಳೆ ಕಾರ್ಯ ಮಾಡುತ್ತಿದ್ದಾನೆ, ಸಜ್ಜನ ರಾಜಕಾರಣಿಯಾಗಿದ್ದಾನೆ, ಇಂತವರು ಬೆಳೆಸಿ ಕ್ಷೇತ್ರದ ಹೆಸರು ತರುತ್ತಾನೆ, ಈ ಭಾರಿ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರು ಕೈ ಜೋಡಿಸಿ ಆಶಿವರ್ದಿಸಬೇಕು ಎಂದು ಮನವಿ ಮಾಡಿಕೊಂಡರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಜಮೀರ ಅಹ್ಮದ, ಶಾಸಕ ಆನಂದ ನ್ಯಾಮಗೌಡ ಮಾತನಾಡಿದರು.
ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಉಮಾಶ್ರೀ, ಎಚ್.ವೈ.ಮೇಟಿ, ಮಾಜಿ ಶಾಸಕ ಜೆ.ಟಿ.ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ವಿಣಾ ಕಾಶಪ್ಪನವರ, ನಜೀರ ಕಂಗನೊಳ್ಳಿ, ಶ್ರೀಶೈಲ ದಳವಾಯಿ, ಪದ್ಮಜೀತ ನಾಡಗೌಡ, ದಾನೇಶ ಘಾಟಗೆ, ಅರುಣಕುಮಾರ ಶಹಾ, ಎನ್.ಎಸ್.ದೇವರವರ, ರಪಿಕ ಬಾರಿಗಡ್ಡಿ, ಮುತ್ತಣ್ಣ ಹಿಪ್ಪರಗಿ, ರಕ್ಷಿತಾ ಈಟಿ, ಅರ್ಜುನ ದಳವಾಯಿ, ರವಿ ಯಡಹಳ್ಳಿ, ವರ್ದಮಾನ ನ್ಯಾಮಗೌಡ, ಬಸವರಾಜ ನ್ಯಾಮಗೌಡ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದರು. ಇತರರು ಇದ್ದರು.