ಶಿಗ್ಗಾವ್

5ರಂದು ಬನ್ನಿ ಮುಡಿಯುವ ಕಾರ್ಯಕ್ರಮ

5ರಂದು ಬನ್ನಿ ಮುಡಿಯುವ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ 02: ಪಟ್ಟಣದ ಶ್ರೀ ಗ್ರಾಮದೇವಿ ದೇವಸ್ಥಾನದಿಂದ ಸಾಮೂಹಿಕ ಬನ್ನಿ ಮುಡಿಯುವ ಮೆರವಣಿಗೆಯು ದಿ. 5ರಂದು ಬುಧವಾರ ಮಧ್ಯಾಹ್ನ 3-30ಘಂಟೆಗೆ ಪ್ರಮುಖ ದೇವಾಲಯಗಳ ಪಲ್ಲಕ್ಕಿಗಳೊಂದಿಗೆ ಹೊರಟು ಬನ್ನಿಮಂಟಪ (ಗ್ರಾಮದೇವಿ) ಪಾದಗಟ್ಟಿಯಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಪೂಜ್ಯರ ಹಿರಿಯರ ಸಮ್ಮುಖದಲ್ಲಿ ನಡೆಯಲಿದೆ ಕಾರಣ ನಗರದ ಗುರುಹಿರಿಯರು, ಯುವಕರು, ಗಣೇಶೋತ್ಸವ ಸಮಿತಿಗಳ ಸರ್ವಸದಸ್ಯರು, ಎಲ್ಲಾ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ವ್ಯಾಪಾರಸ್ಥರು, ತಮ್ಮ ವಹಿವಾಟು ಬಂದ ಮಾಡಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ  ಭಾಗವಹಿಸಿ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಹಿಂದೂ ಧರ್ಮದ ದಸರಾ ಹಬ್ಬವನ್ನು ವೈಭವಯುತವಾಗಿ ಆಚರಿಸೋಣ ಎಂದು ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು ಪ್ರಕಟಣೆಗೆ ಕೋರಿದ್ದಾರೆ.

ಸುದ್ದಿ ಓದಿ