ಕರುನಾಡು ಸಂಘಟನೆಯಿಂದ ಪೌರಕಾರ್ಮಿಕರಿಗೆ ಸನ್ಮಾನ
ಲೋಕದರ್ಶನ ವರದಿ
ಶಿಗ್ಗಾವಿ 03: ಪಟ್ಟಣದ ಕರುನಾಡು ಕಟ್ಟಡ ನಿರ್ಮಾಣ ಕಾರ್ಮಿಕರ ಜಾಗೃತಿ ಹಾಗೂ ಅಭಿವೃದ್ದಿ ವೇದಿಕೆ ನೇತೃತ್ವದಲ್ಲಿ ಸಂಘದ ಕಾರ್ಯಾಲಯದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣದ ಪೌರ ಕಾರ್ಮಿಕರಿಗೆ ಗೌರವ ಸನ್ಮಾನ ನೇರವೇರಿಸಿದರು.
ಸನ್ಮಾನಗೈದು ಮಾತನಾಡಿದ ರಾಜ್ಯಾಧ್ಯಕ್ಷ ಹನುಮಂತ ಬಾರಂಗಿಯವರು ಕಾರ್ಮಿಕರಿಗೆ ಶುಭಾಶಯಗಳನ್ನು ಕೋರಿ, ಕಾರ್ಮಿಕರು ಇನ್ನೂ ಮೂಲಭೂತ ಸೌಕರ್ಯದಿಂದ ವಂಚಿತರಾಗುತ್ತಿದ್ದು ಅವರಿಗೆ ಸಿಗುವ ಸೇವಾ ಸೌಲಭ್ಯಗಳನ್ನು ಕೊಡಿಸಬೇಕೆಂದು ಸಂಘ ರಚನೆ ಮಾಡಿ ಪ್ರಾಮಾಣಿಕವಾಗಿ ಅವರಿಗೆ ಸಿಗುವ ಸೌಲಭ್ಯಗಳನ್ನು ದೊರಕಿಸುತ್ತಿದ್ದೇನೆ ಆ ನಿಟ್ಟಿನಲ್ಲಿ ನಮ್ಮ ಸಂಘಟನೆ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾರ್ಮಿಕ ಮುಖಂಡ ಮಲ್ಲಿಕಾಜರ್ುನಸ್ವಾಮಿ ಕಾಳೆ ಮಾತನಾಡಿ ಪಟ್ಟಣ ಸುಂದರವಾಗಿರಲು ಮತ್ತು ನಮಗೆ ಯಾವುದೇ ರೋಗ ರುಜಿನಗಳು ಬರದ ಹಾಗೇ ಮಾಡುವಲ್ಲಿ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯವಾದ್ದದ್ದು ಆ ದೃಷ್ಟಿಯಿಂದ ಪೌರಕಾರ್ಮಿಕರಿಗೆ ನಮ್ಮ ಸಂಘಟನೆಯಿಂದ ಸನ್ಮಾನಿಸಿ ಗೌರವಿಸಿದ್ದೇವೆ ಎಂದರು.
ಕಾರ್ಮಿಕ ಸಂಚಾಲಕ ಅನಿಲ ಕುರ್ಸಾಪೂರ ಮಾತನಾಡಿ ಪೌರಕಾರ್ಮಿಕರು ಮತ್ತು ಕಾರ್ಮಿಕರು ಇರದಿದ್ದರೆ ಒಂದು ಕ್ಷಣ ಯೋಚಿಸಿದಾಗ ಮೈಯಲ್ಲ ರೋಮಾಂಚನ ಗೊಳ್ಳುತ್ತದೆ ಏಕೆಂದರೆ ಅವರು ಇಲ್ಲದೇ ದೇಶವೇ ಇಲ್ಲ ಅಲ್ಲದೇ ಅವರು ಅಸಹ್ಯ ಪಡದೇ ತಮ್ಮ ಕರ್ತವ್ಯ ಎಂದು ಪರಿಸರ ಸ್ವಚ್ಚತೆ, ಗಟಾರ ಸ್ವಚ್ಚತೆಯನ್ನು ಪ್ರಾಮಾಣಿಕವಾಗಿ ಮಾಡುತ್ತಾರೆ ಎಂದರು.
ಕಾರ್ಮಿಕ ಮುಖಂಡ ದತ್ತಾತ್ರೇಯ ತಾಂಬೆ, ಪ್ರಕಾಶ ಕುಲಕರ್ಣಿ, ಸೇರಿದಂತೆ ಪೌರಕಾರ್ಮಿಕರು ಉಪಸ್ಥಿತರಿದ್ದರು