ಜಮಖಂಡಿ

ರಾಧೆ-ಕೃಷ್ಣರ ವೇಷಧರಿಸಿ ಸಂಭ್ರಮಿಸಿದ ಮಕ್ಕಳು

ರಾಧೆ-ಕೃಷ್ಣರ ವೇಷಧರಿಸಿ ಸಂಭ್ರಮಿಸಿದ ಮಕ್ಕಳು

ಲೋಕದರ್ಶನ ವರದಿ,

ಜಮಖಂಡಿ  8: ನಗರದ ಬಸವಜ್ಯೋತಿ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ರಾಧೆ-ಕೃಷ್ಣರ ವೇಷಧರಿಸಿ ಸಂಭ್ರಮಿಸಿದರು.

ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶಾಲೆಯ ನೂರಾರು ಮಕ್ಕಳು ಹೊಸಬಟ್ಟೆ ಧರಿಸಿ, ಕೊರಳಲ್ಲಿ ವಿವಿಧ ಬಗೆಯ ಸರಹಾಕಿಕೊಂಡು, ತಲೆಗೆ ಕಿರೀಟ ಕಟ್ಟಿಕೊಂಡು, ಕೈಯಲ್ಲಿ ಕೊಳಲು ಹಿಡಿದು ಕ್ಯಾಮೆರಾ ಕಣ್ಣಿಗೆ ಪೋಸು ಕೊಟ್ಟು ಖುಷಿ ಪಟ್ಟರು. ತಾಯಂದಿರು ಮಕ್ಕಳ ವೇಷಭೂಷಣವನ್ನು ತಿದ್ದಿ, ಆನಂದಿಸಿದರು. ಶಿಕ್ಷಕಿಯರು ಮಕ್ಕಳ ಸಂಭ್ರಮದಲ್ಲಿ ಭಾಗಿಯಾಗಿದ್ದರು. 


 

ಸುದ್ದಿ ಓದಿ