ಚಿಕ್ಕಮಾಗನೂರು ಗ್ರಾಮದಲ್ಲಿ ಗೋವಿನ ಜೋಳದ ಕ್ಷೇತ್ರೋತ್ಸವ
ರಾಣೇಬೆನ್ನೂರು03: ಜಿಲ್ಲೆಯಾದ್ಯಂತ ಗೋವಿನ ಜೋಳ ಅತಿ ಹೆಚ್ಚು ರೈತರು ಬೆಳೆಯುತ್ತಿದ್ದು, ಗೋವಿನ ಜೋಳದ ಸಂರಕ್ಷಣಾ ಘಟಕ ನಿರ್ಮಾಣ ಮಾಡುವುದು, ಜೊತೆಗೆ ರೈತರು ಬೆಳೆದಂಥ ಬೆಳಗೆ ಸರಿಯಾದ ಬೆಂಬಲ ಬೆಲೆ ಸಿಗಬೇಕಾದ ಇಂದಿನ ಅಗತ್ಯ, ಮತ್ತು ಅವಶ್ಯವಿದೆ ಎಂದು ತಾಲೂಕ ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.
ತುಮ್ಮಿನಕಟ್ಟಿ ಹೋಬಳಿಯ ಚಿಕ್ಕಮಾಗನೂರು ಗ್ರಾಮದಲ್ಲಿ ಶಿವಾನಂದಪ್ಪ ಸಿರೇಗೇರಿ ಇವರ ಹೊಲದಲ್ಲಿ ಸಿರಿ ಸೀಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ ಕಂಪನಿಯಿಂದ ಏರ್ಪಡಿಸಿದ್ದ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅತಿಹೆಚ್ಚು ರೈತರು ಗೋವಿನಜೋಳ ಬೆಳೆಯುತ್ತಿರುವುದರಿಂದ ಅವರಿಗೆ ಅವಶ್ಯವಾಗಿ ತಾಲೂಕಿನ ನಗರದಲ್ಲಿ ಸಂರಕ್ಷಣಾ ಘಟಕ ನಿಮರ್ಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.ಸಿರಿ ಸೀಡ್ಸ್ ಇಂಡಿಯಾ ಪ್ರವೇಟ್ ಲಿಮಿಟೆಡ್ ಕಂಪನಿಯವರು ರೈತರಿಗೆ ಬಿತ್ತನೆ ಮಾಡಲು ಉತ್ತಮವಾದ ಬೀಜ ಕೊಡಬೇಕು ಅಂದಾಗ ಮಾತ್ರ ರೈತರು ಬೆಳೆದ ಬೆಳೆಗೆ ಉತ್ತಮವಾದ ಬೆಲೆ ಸಿಗುತ್ತದೆ. ಕಂಪನಿಗೆ ಒಳ್ಳೆಯ ಹೆಸರು ಬರುತ್ತದೆ. ರೈತರು ಸಾಕಷ್ಟು ಖಚರ್ು ಮಾಡಿ ಬಿತ್ತನೆ ಮಾಡುತ್ತಾರೆ.
ಈ ಬಾರಿ ಬರಗಾಲ ಬಂದಿದೆ. ರೈತರು ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದರು. ದಿವ್ಯ ಸಾನಿಧ್ಯ ವಹಿಸಿದ್ದ,ಶ್ರಿ ರಂಭಾಪುರಿ ವೀರ ಸಿಂಹಾಸನ ಶಾಖಾ ಹಿರೇಮಠ ಲಿಂಗದಹಳ್ಳಿ,ಯ ಶ್ರೀ ಚೆನ್ನ ಮಲ್ಲವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು. ತಾಲೂಕಿನಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಈ ಬಾರಿ ರೈತರು ಬೆಳೆದಿದ್ದಾರೆ. ಮೆಕ್ಕೆಜೋಳ ಬೆಳೆದ ರೈತರಿಗೆ ಸರಿಯಾದ ಮಳೆ ಇಲ್ಲದೆ ಈ ವರ್ಷ ತೊಂದರೆಗೆಡಾಗಿದ್ದಾರೆ. ಸರ್ಕಾರ ಸೂಕ್ತ ಪರಿಹಾರಕ್ಕೆ ಈಗಾಗಲೇ ಘೋಷಣೆ ಮಾಡಿದೆ. ರೈತರು ಸಿರಿ ಸೀಡ್ಸ್ ಕಂಪನಿಯ ಹೆಚ್ಚು ಇಳುವರಿ ಬರುವಂತಹ ಮೆಕ್ಕೆಜೋಳ ಬೀಜಗಳನ್ನು ತೆಗೆದುಕೊಂಡು ಬಿತ್ತಿ, ಉತ್ತಮವಾಗಿ ಬೆಳೆಯನ್ನು ತೆಗೆದು ಮಾರಾಟ ಮಾಡಿದರೆ ರೈತರಿಗೆ ಸಿಗುವಂತ ಲಾಭ ಹೆಚ್ಚಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಪ್ರಶಾಂತರೆಡ್ಡಿ ಎರೆಕುಪ್ಪಿ, ರಾಜಶೇಖರ ರೆಡ್ಡಿ, ಎಲ್.ಶಶಿಶೇಖರ, ಮಂಜನಗೌಡ ಪಾಟೀಲ, ಯಲ್ಲಪ್ಪ ರೆಡ್ಡಿ ರಡ್ಡೇರ, ಮಳ್ಳಪ್ಪ ನಿಂಗಜ್ಜನವರ, ರವೀಂದ್ರ ಗೌಡ ಪಾಟೀಲ, ನಾಗರಾಜ, ಅಶೋಕಗೌಡ, ಗಂಗನಗೌಡ, ಸುರೇಶ ಭಾನುವಳ್ಳಿ, ಅಶೋಕ ಬೆಳವಿಗಿ, ಕರಬಸಪ್ಪ ಕೂಲೇರ, ಸೇರಿದಂತೆ ಮತ್ತಿತರ ಗಣ್ಯರು ಗ್ರಾಮದ ನಾಗರಿಕರು ಪಾಲ್ಗೊಂಡಿದ್ದರ