ಕಾಗವಾಡ

ಚೇಲನಾದೇವಿ ಪಾಟೀಲ್ ನಿಧನ: ವೀರಕುಮಾರ್ ಪಾಟೀಲ್ ಸಾಂತ್ವನ

ಚೇಲನಾದೇವಿ ಪಾಟೀಲ್ ನಿಧನ: ವೀರಕುಮಾರ್ ಪಾಟೀಲ್ ಸಾಂತ್ವನ

ಕಾಗವಾಡ 19: ಶೇಡಬಾಳ ಗೌಡರಾದ ದಿ. ಲಕ್ಷ್ಮಣಗೌಡಾ ಪಾಟೀಲ್ ಇವರ ಧರ್ಮಪತ್ನಿ ಚೇಲನಾದೇವಿ ಪಾಟೀಲ್ (94) ಇವರು ಶುಕ್ರವಾರ ದಂದು ಸಲ್ಲೇಖನ ವ್ರತ ಸ್ವೀಕರಿಸಿ ಜಿನೈಕ್ಯರಾದರು.

ಇವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮಾಜಿ ಇಂಧನ ಖಾತೆ ಸಚಿವ ವೀರಕುಮಾರ್ ಪಾಟೀಲ್ ಇವರ ಮಲತಾಯಿಯಾಗಿದ್ದರು. ಶೇಡಬಾಳ ಪಾಟೀಲ್ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಅವರ ಪುತ್ರರಾದ ಮಹಾವೀರ ಶಾಂತಗೊಂಡ ಪಾಟೀಲ್, ಆದಿರಾಜ್ ಭುಜಗೌಡಾ ಪಾಟೀಲ್ ಹಾಗೂ ಕಾಂಗ್ರೆಸ್ ಪಕ್ಷದ ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಉಪಸ್ಥಿತರಿದ್ದರು.

ಸುದ್ದಿ ಓದಿ