ಹೂವಿನ ಹಡಗಲಿ

ಲೋಕ ಕಲ್ಯಾಣಾರ್ಥವಾಗಿ ಚನ್ನವೀರಸ್ವಾಮಿಗಳು ಪಾದಯಾತ್ರೆ

ಲೋಕ ಕಲ್ಯಾಣಾರ್ಥವಾಗಿ ಚನ್ನವೀರಸ್ವಾಮಿಗಳು ಪಾದಯಾತ್ರೆ

ಲೋಕ ಕಲ್ಯಾಣಾರ್ಥವಾಗಿ ಚನ್ನವೀರಸ್ವಾಮಿಗಳು ಪಾದಯಾತ್ರೆ   

ಹೂವಿನ ಹಡಗಲಿ 28: ಲಿಂಗನಾಯಕನಹಳ್ಳಿಯ  ಸಮೀಪದ ಜಂಗಮಕ್ಷೇತ್ರದ ಚನ್ನವೀರಸ್ವಾಮಿಹಿರೇಬನ್ನಿಮಟ್ಟಿ ಹರವಿ ಗ್ರಾಮದವರೆಗೂ ಸೋಮವಾರ ಲೋಕ ಕಲ್ಯಾಣಾರ್ಥವಾಗಿ ಪಾದಯಾತ್ರೆ ಕೈಗೊಂಡರು.  ಹೊಳಲು ಗ್ರಾಮದ ಸದ್ಭಕ್ತರು ಶ್ರೀಗಳನ್ನು ಮಂಗಳವಾದ್ಯಗಳೊಂದಿಗೆ ಸ್ವಾಗತಿಸಿದರು. ಬೆಳಿಗ್ಗೆ" 6.30 ಗಂಟೆಯಿಂದ ಹೊರಟ ಪಾದಯಾತ್ರೆ ಹೌಸಿ, ಶಾಕಾರ, ಹೊಳಲು, ಮೈಲಾರ ಹಾಗೂ ಕುರುವತ್ತಿ ಮಾರ್ಗವಾಗಿ ಹರವಿ ಗ್ರಾಮದಲ್ಲಿರುವ ಶಾಖಾಮಠವನ್ನು ತಲುಪಿ ಮಂಗಲಗೊಂಡಿತು.  

ಬನ್ನಿಮಟ್ಟಿ ಶ್ರೀಚನ್ನಪ್ಪ ಶರಣರ ಹಾಗೂ ಲಿಂಗನಾಯಕನಹಳ್ಳಿಯ ಚನ್ನವೀರ ಶಿವಯೋಗಿಗಳಮಠದ 8ನೇ ಪೀಠಾಧಿಪತಿಗಳಾದ ಶ್ರೀಚನ್ನವೀರಮಹಾಸ್ವಾಮಿಗಳ 28ನೇ ಸ್ಮರಣೋತ್ಸವ ನಿಮಿತ್ತ ಈ ಪಾದಯಾತ್ರಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಶ್ರೀಗಳು ಬನ್ನಿಮಟ್ಟಿ ಗ್ರಾಮದವರು ಆಗಿದ್ದ- ರಿಂದ ಈ ಪಾದಯಾತ್ರೆಯನ್ನು ಅಲ್ಲಿಂದಲೇ ಪ್ರಾರಂಭಿಲಲಾಗಿದೆ ಎಂದು ಚನ್ನವೀರ ಶ್ರೀಗಳು ತಿಳಿಸಿದರು.ಕಾರ್ಯಕ್ರಮದಲ್ಲಿ ಹೂವಿನಹಡಗಲಿ ಗವಿಮಠದ ಡಾ.ಶಾಂತವೀರ ಸ್ವಾಮಿಜಿ. ಹೊಳಲು ಶ್ರೀಮಲ್ಲಕಾರ್ಜುನ ವಿರಕ್ತ ಮಠದ ಶ್ರೀಚನ್ನಬಸವ ಶ್ರೀಗಳು, ಹಿರೇಮಲ್ಲನಕೇರಿ ಚನ್ನಬಸವ ಶ್ರೀಗಳು ಹಾಗೂ ಹಾವನೂರು ದಳವಾಯಿ ಮಠದ ಶಿವಕುಮಾರ ಶ್ರೀಗಳು ಸೇರಿದಂತೆ ಬನ್ನಿಮಟ್ಟಿ ಮಕರಬ್ಬಿ, ಹೌಸಿ, ಹಾಗೂ ಮೈಲಾರ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು. ಪಾದಯಾತ್ರಿಗಳಿಗೆ ಹೊಳಲು ಗ್ರಾಮದ ಭಕ್ತರು ಉಪಹಾರ ವ್ಯವಸ್ಥೆ ಕಲ್ಪಿಸಿದರು. 


ಸುದ್ದಿ ಓದಿ