ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಚಕ್ಕಡಿ ಜಾಥಾ
ಲೋಕದರ್ಶನ ವರದಿ
ಶಿಗ್ಗಾವಿ 14: ಶಿಗ್ಗಾವಿ ಪಟ್ಟಣದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ ತಾಲೂಕಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಚಕ್ಕಡಿ ಜಾಥಾವನ್ನು ಹಮ್ಮಿಕೊಳ್ಳಲಾಯಿತ್ತು.
ಶಿಗ್ಗಾವಿ ಕಿತ್ತೂರಾಣಿ ಚನ್ನಮ್ಮ ವೃತ್ತದಿಂದ ಆರಂಭವಾದ ಚಕ್ಕಡಿ ಜಾತಾಗೆ ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಚಾಲನೆ ನೀಡಿದರು, ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ನರಹರಿ ಕಟ್ಟಿ, ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ, ಮುಖಂಡರಾದ ಕರೆಯಪ್ಪ ಕಟ್ಟಿಮನಿ, ಅರ್ಜುನ ಹಂಚಿನಮನಿ, ಶ್ರೀಕಾಂತ್ ಬುಳ್ಳಕ್ಕನವರ, ಮಂಡಲ ಕಾರ್ಯದರ್ಶಿ ಬಸವರಾಜ ನಾರಾಯಣಪೂರ, ಪ್ರತೀಕ ಕೊಳೇಕರ, ಮಲ್ಲಿಕಾರ್ಜುನ ಹಡಪದ, ಮುತ್ತು ಯಲಿಗಾರ ಶಿಗ್ಗಾವಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಶಾಂತ ಬಡ್ಡಿ, ಕಿರಣ ಯಲಿಗಾರ, ಫಕೀರೇಶ ಯಲಿಗಾರ, ಸಂತೋಷ ನವಲಗುಂದ, ಈರಣ್ಣಾ ದುಂಡಶಿ, ಪುಟ್ಟು ಕಾರ್ದಾನಿ, ಸಂತೋಷ್ ಕಟ್ಟಿಮನಿ, ಶಿವಣ್ಣ ಕಾರದಾನಿ, ವೀರಗಲ್ಲಿ ಹಳೆಪೇಟೆ, ಮ್ಯಾಗೇರಿ ಓಣಿ ಸೇರಿದಂತೆ ಶಿಗ್ಗಾವಿ ನಗರದ ಎಲ್ಲ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು