ಹೂವಿನ ಹಡಗಲಿ

ಪತ್ರಕರ್ತರ ಕುಟುಂಬಕ್ಕೆ ಹೃದಯ ಆರೋಗ್ಯ ಶಿಬಿರ ತಪಾಸಣೆ

ಪತ್ರಕರ್ತರ ಕುಟುಂಬಕ್ಕೆ ಹೃದಯ ಆರೋಗ್ಯ ಶಿಬಿರ ತಪಾಸಣೆ

ಲೋಕದರ್ಶನ ವರದಿ

ಹೂವಿನಹಡಗಲಿ 18: ಮನುಷ್ಯನ ಯಾಂತ್ರಿಕ ಬದುಕಿನಲ್ಲಿ ಮಾನಸಿಕ ಒತ್ತಡ,ಕಲುಷಿತ ಆಹಾರ ಸೇವನೆಯಿಂದ ಈಚೆಗೆ 40ವರ್ಷದಲ್ಲಿ ಹೃದಯ ಕಾಯಿಲೆಗಳು ಹೆಚ್ಚುತ್ತಿದ್ದು ಆರೋಗ್ಯ ಕಡೆ ನಿರ್ಲಕ್ಷ್ಯ ಮಾಡದೇ ತಜ್ಞ ವೈದ್ಯರ ಕಡೆ ಚಿಕಿತ್ಸೆ ಪಡೆದುಕೊಳ್ಳಿ ಎಂದು ಬೆಂಗಳೂರು ಹೃದಯ ರೋಗ ತಜ್ಞ ಡಾ.ಗುರುರಾಜ ಬಿ.ಸಲಹೆ ನೀಡಿದರು.

ಪಟ್ಟಣದ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಕರ್ತರ ಕುಟುಂಬದ ಸದಸ್ಯರಿಗೆ ಆಯೋಜಿಸಿದ್ದ ಹೃದಯ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಯುವಕರು ಹೆಚ್ಚಾಗಿ ತಂಬಾಕು,ಗುಟ್ಕಾ ತಿನ್ನುತ್ತಿದ್ದು ಇದರಿಂದ ಹೃದಯ ಕಾಯಿಲೆ,ಕೆನ್ಸರ್ ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. 

ತಾಲೂಕು ವ್ಯೆದ್ಯಾಧಿಕಾರಿ ಡಾ.ಬಿ.ಶಿವಕುಮಾರ ಮಾತನಾಡಿ ಪ್ರತಿಯೊಬ್ಬರು ಹಣ,ಆಸ್ತಿ ಮತ್ತು ಬಂಗಾರ ಖರೀದಿಗೆ ಮುಂದಾಗುತ್ತಾನೆ ಹೊರತು ದುರಾಸೆಯಿಂದ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಿ ಸಂಪಾದಿಸಿದ ಹಣವನ್ನು ಅನುಭವಿಸಲಾಗದೆ ಅನಾರೋಗ್ಯದಿಂದ ಆಸ್ಪತ್ರೆಗೆ ಖರ್ಚು ಮಾಡುತ್ತಾನೆ ಎಂದ ಅವರು ಆರೋಗ್ಯ ದೃಷ್ಟಿಯಿಂದ ಮಕ್ಕಳಿಗೆ ನೀಡುವ ಇಂದ್ರಧನುಷ ಲಸಿಕೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಹೆಚ್ಚಾಗಿ ಬೇಕರಿ ತಿನ್ನುಸ್ಸುಗಳನ್ನು ಕಡಿಮೆ ಮಾಡಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು. 

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಶಿವಕುಮಾರ ಸಾಲಗೇರಿ ಮಾತನಾಡಿ ತಮ್ಮ ತಮ್ಮ ಹುಟ್ಟು ಹಬ್ಬದ ಆಚರಣೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದ ಅವರು ಇಂತಹ ಆರೋಗ್ಯ ಶಿಬಿರಗಳು ಹೆಚ್ಚಾಗಿ ನಡೆಯಲಿ ಎಂದರು.ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ನಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ಅಧ್ಯಕ್ಷ ನಿಯಾಜ್ ಮಾತನಾಡಿದರು. ಹೆಚ್.ಚಂದ್ರಪ್ಪ ಪ್ರಾರ್ಥನೆ ನಂತರ ಮಧುಸೂಧನ ಸ್ವಾಗತಿಸಿದರು,ಎಂ.ಪಿ.ಎಂ.ಶಿವಪ್ರಕಾಶ್ ನಿರೂಪಿಸಿದರು.ವಿಶ್ವನಾಥ ಹಳ್ಳಿಗುಡಿ ಪ್ರಾಸ್ತಾವಿಕ ಮಾತನಾಡಿದರು.ಕೆ.ಚಂದ್ರು ವಂದಿಸಿದರು. ಇದೇ ವೇಳೆ ಶಿಬಿರದಲ್ಲಿ ಪತ್ರಕರ್ತರ ಕುಟುಂಬದ ಸದಸ್ಯರು ಬಿ.ಪಿ,ಶುಗರ್ ಹಾಗೂ ಹೃದಯ ರೋಗಿಗಳ ತಪಾಸಣೆಯನ್ನು ಮಾಡಲಾಯಿತು.  


ಸುದ್ದಿ ಓದಿ