ಕೋವಿಡ್ ನಿಯಂತ್ರಣ ತರಬೇತಿ ಕಾಯರ್ಾಗಾರ
ಲೋಕದರ್ಶನ ವರದಿ
ಗುಳೇದಗುಡ್ಡ 20: ಕೋವಿಡ್-19 ಸಾಂಕ್ರಾಮಿಕ್ ರೋಗದ ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದ ಪುರಸಭೆಯ ಆಶ್ರಯದಲ್ಲಿ ವಾಡರ್್ ಮಟ್ಟದ ಕಾಯರ್ಾಚರಣೆ ಪಡೆ ಸದಸ್ಯರು ಮತ್ತು ಬೂತ್ ಮಟ್ಟದ ಸಮಿತಿಗಳ ಮುಖ್ಯಸ್ಥರಿಗೆ ಯೂ ಟ್ಯೂಬ್ ತಂತ್ರಾಂಶವನ್ನು ಬಳಸಿಕೊಂಡು ಸೋಮವಾರ ಬೆಳಿಗ್ಗೆ 11 ಗಂಟೆಯಿಂದ ಮದ್ಯಹ್ನ 1 ಗಂಟೆಯವರೆಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದಲ್ಲಿ ಈ ತರಬೇತಿಯನ್ನು ಮೂರು ಸ್ಥಳಗಳಲ್ಲಿ ಆಯೋಜಿಸಲಾಗಿತ್ತು. ಕರನಂದಿ ಕಲ್ಯಾಣ ಮಂಟಪದಲ್ಲಿ ವಾಡರ್್ನಂ. 3,5,7,11,12,16,17,10, ಭಂಡಾರಿ ಕಾಲೇಜಿನ ಸಭಾಭವನದಲ್ಲಿ ವಾಡರ್್ನಂ.1,14,18,20,21,22,19, ಶೆಟ್ಟರ ಕಾಲೇಜಿನಲ್ಲಿ 2,4,6,8,9,13,15,23 ಹೀಗೆ ಒಟ್ಟು 23 ವಾಡರ್್ಗಳ ವಾಡರ್್ಗಳ ಸದಸ್ಯರಿಗೆ ಹಾಗೂ ವಾಡರ್್ಮಟ್ಟದ ಕಾಯರ್ಾಚರಣೆ ಪಡೆ ಸದಸ್ಯರು ಮತ್ತು ಬೂತ್ ಮಟ್ಟದ ಸಮಿತಿಗಳ ಮುಖ್ಯಸ್ಥರಿಗೆ ಹಮ್ಮಿಕೊಳ್ಳಲಾಗಿತ್ತು.
ಸತತ ಎರಡು ಗಂಟೆಗಳವರೆಗೆ ನಡೆದ ಈ ಕಾಯರ್ಾಗಾರದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೋವಿಡ್-19 ನಿಯಂತ್ರಣಕ್ಕೆ ಪ್ರತಿವಾಡರ್್ಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮತ್ತು ತಡೆಗಟ್ಟುವ ವಿವಿಧ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಪುರಸಭೆ ವ್ಯವಸ್ಥಾಪಕ ರಮೇಶ ಪದಕಿ, ಆರೋಗ್ಯ ಶಾಖೆಯ ಮುಖ್ಯಸ್ಥ ಶಿವು ಆಲೂರ ಸೇರಿದಂತೆ ಇನ್ನುಳಿದ ಸಿಬ್ಬಂದಿ ಹಾಜರಿದ್ದರು.