ಬ್ರಹ್ಮಶ್ರೀ ನಾರಾಯಣ ಗುರು ಭಾರತೀಯ ಸಮಾಜ ಕಂಡ ಓರ್ವ ಶ್ರೇಷ್ಠ ಸಂತ
ಸಿಂದಗಿ 10: ಹಿಂದುಳಿದ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಅವರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟ ಬ್ರಹ್ಮಶ್ರೀ ನಾರಾಯಣ ಗುರು ಭಾರತೀಯ ಸಮಾಜ ಕಂಡ ಓರ್ವ ಶ್ರೇಷ್ಠ ಸಂತ ಎಂದು ಪ್ರಾಚಾರ್ಯ ಎಮ.ಎಸ್.ಹೈಯಾಳಕರ ಉಪನ್ಯಾಸ ನೀಡಿದರು.
ಪಟ್ಟಣದ ತಾಲೂಕು ತಹಶೀಲ್ದಾರ್ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಈ ಕಲ್ಪನೆಯನ್ನು ಮೂಡಿಸಿ, ಅದನ್ನು ಜನ ಮನಕ್ಕೆ ಹರಡಿದ ಬ್ರಹ್ಮಶ್ರೀ ನಾರಾಯಣ ಗುರುಗಳು. ಕೇರಳದ ತಿರುವನಂತಪುರದ ಚೆಂಬಳತ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹುಟ್ಟೂರು. ತಂದೆ ಮದನ್ ಆಶಾನ್, ತಾಯಿ ಕುಟ್ಟಿಯಮ್ಮ. ಅವರು ಮಗನಿಗಿಟ್ಟ ಹೆಸರು ನಾಣು. ಬಾಲ್ಯದಲ್ಲಿ ವಿದ್ಯಾಭ್ಯಾಸಕ್ಕಾಗಿ ಅವರು ಊರೂರು ಅಲೆದಾಡ ಬೇಕಾಯಿತು. ತಂದೆಗೆ ಅಸೌಖ್ಯ ಕಾಡಿದಾಗ ಅವರು ಊರಿಗೆ ಮರಳಿ, ಶಾಲೆ ತೆರೆದು, ಮಕ್ಕಳಿಗೆ ಪಾಠ ಮಾಡಿದರು. ಜನ ಅವರನ್ನು ನಾಣು ಆಶಾನ್ ಎಂದು ಕರೆದರು. ಆಶಾನ್ ಎಂದರೆ ಉಪಾಧ್ಯಾಯ ಎಂದರ್ಥವಿದೆ. ಶ್ರೀ ನಾರಾಯಣ ಗುರುಗಳು ಅನೇಕ ವಿದ್ವಾಂಸರು, ಗುರುಗಳಲ್ಲಿ ಕಲಿತರು, ಮಾರ್ಗದರ್ಶನ ಪಡೆದರು ಎಂದರು.
ಇದೇ ಸಂದರ್ಭದಲ್ಲಿ ತಾಲುಕು ದಂಡಾಧಿಕಾರಿ ನಿಂಗಣ್ಣ ಬಿರಾದಾರ, ಶೀರಸ್ತೆದಾರ್ ಸುರೇಶ ಮ್ಯಾಗೇರಿ, ಸಮಾಜದ ಅಧ್ಯಕ್ಷ ತಮ್ಮಣ್ಣ ಈಳಗೇರ, ಅರವಿಂದ ಈಳಗೇರ, ಸಚಿನ್ ಈಳಗೇರ, ಬಸವರಾಜ ಬಾಗೇವಾಡಿ, ರುಕ್ಮಯ್ಯ ಗುತ್ತೇದಾರ, ನರಸಯ್ಯ ಈಳಗೇರ ಬಸವರಾಜ ಈಳಗೇರ, ದಿನೇಶ ಶರಣಯ್ಯ, ಮಹೇಶ, ಈಳಗೇರ, ರಾಹುಲ್ ಗುತ್ತೇದಾರ ಸೇರಿದಂತೆ ಸಮಾಜದ ಮುಖಂದರು ಇದ್ದರು.