ರಾಣೆಬೆನ್ನೂರ

ಭುವನೇಶ್ವರಿ ದೇವಿ ಭಾವಚಿತ್ರದ ಮೆರವಣಿಗೆ

ಭುವನೇಶ್ವರಿ ದೇವಿ ಭಾವಚಿತ್ರದ ಮೆರವಣಿಗೆ

ಭುವನೇಶ್ವರಿ ದೇವಿ ಭಾವಚಿತ್ರದ ಮೆರವಣಿಗೆ  

ರಾಣಿಬೆನ್ನೂರ 03:  ಇಲ್ಲಿನ ಸ್ಟೇಶನ್ ರಸ್ತೆಯ ಕರ್ನಾಟಕ ಸಂಘದ ಆವರಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ಏರಿ​‍್ಡಸಿದ 69 ನೇ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣವನ್ನು ತಹಶೀಲ್ದಾರ ಆರ್‌.ಎಚ್‌. ಭಾಗವಾನ್ ನೆರವೇರಿಸಿದರು.  

    ಕರ್ನಾಟಕ ಸಂಘದಿಂದ ಪ್ರಾರಂಭವಾದ ಭುವನೇಶ್ವರಿ ದೇವಿ ಭಾವಚಿತ್ರದ ಹಾಗೂ  ಸ್ಥಬ್ದ ಚಿತ್ರಗಳ ಮೆರವಣಿಗೆಯು ಸಕಲ ವಾಧ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಂದು ತಲುಪಿತು.  ವಿವಿಧ  ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳು ಸ್ಥಬ್ದ ಚಿತ್ರ ಹಾಗೂ  ವಿವಿಧ ವೇಷ ಭೂಷಣ ಧರಿಸಿದ್ದರು. ನಗರದ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು, ಕರವೇ, ಆಟೋ ಚಾಲಕರು, ಅಭಿಮಾನಿಗಳು ಭಾಗವಹಿಸಿದ್ದು ಮೆರವಣಿಗೆಗೆ ಮೆರಗು ನೀಡಿತು. 

    ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ, ತಾಪಂ ಇಒ ಪರಮೇಶ, ಪೌರಾಯುಕ್ತ ಎಫ್‌.ಐ. ಇಂಗಳಗಿ, ದೈಹಿಕ ಶಿಕ್ಪ್ಷಣಾದಿಕಾರಿ ಪ್ರಭಾಕರ ಚಿಂದಿ, ಬಿಆರ್‌ಪಿ ಮಂಜು ನಾಯಕ, ಗಂಗಪ್ಪ ನಾಯಕ, ಹೇಮಂತ ಎಸ್‌.ಕೆ, ಕೊಟ್ರೇಶಪ್ಪ ಎಮ್ಮಿ, ನಿತ್ಯಾನಂದ ಕುಂದಾಪುರ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು. 



ಫೋಟೊ:3ಆರ್‌ಎನ್‌ಆರ್06ರಾಣಿಬೆನ್ನೂರ: ಇಲ್ಲಿನ ಸ್ಟೇಶನ್ ರಸ್ತೆಯ ಕರ್ನಾಟಕ ಸಂಘದ ಆವರಣದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ಏರಿ​‍್ಡಸಿದ 69 ನೇ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣವನ್ನು ತಹಶೀಲ್ದಾರ ಆರ್‌.ಎಚ್‌. ಭಾಗವಾನ್ ನೆರವೇರಿಸಿದರು. 


ಸುದ್ದಿ ಓದಿ