ರಾಣೆಬೆನ್ನೂರ

ಅಮೃತವರ್ಷಿಣಿ ವಿದ್ಯಾಲಯದಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಜಯಂತಿ

ಅಮೃತವರ್ಷಿಣಿ ವಿದ್ಯಾಲಯದಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಜಯಂತಿ

ಅಮೃತವರ್ಷಿಣಿ ವಿದ್ಯಾಲಯದಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಜಯಂತಿ

ರಾಣಿಬೆನ್ನೂರ 21: ತಾಲೂಕಿನ ಕೋಡಿಯಾಲ ಗ್ರಾಮದ ಅಮೃತವರ್ಷಿಣಿ ವಿದ್ಯಾಲಯದಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಶಾಲೆಯ ಸಂಸ್ಥಾಪಕ ಪಿ. ಕೆ. ಪ್ರಕಾಶ್ ರಾವ್ ಭಕ್ತ ಕನಕದಾಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.  

    ಈ ವೇಳೆ ಮಾತನಾಡಿದ ಅವರು, ದಾಸರಲ್ಲಿ ಕವಿ, ಕವಿಗಳಲ್ಲಿ ದಾಸರೆಂಬ ಹೆಗ್ಗಳಿಕೆಗೆ ಪಾತ್ರರಾದವರು. ಕಿರ್ತನೆಗಳ ಮೂಲಕ ಸಮಾಜವನ್ನು ಕಟ್ಟಿದ್ದಾರೆ ಅವರ ಕುಲ ಕುಲ ಕುಲವೆಂದು ಹೊಡೆದಾಡಿದಿರಿ ನಿಮ್ಮ ಕುಲದ ನೆಲಯ ನೇನಾದರೂ ಬಲ್ಲಿರಾ ಎಂದು ಹೇಳುವುದರ ಮೂಲಕ ಜನರನ್ನು ಎಚ್ಚರಿಸಿ, ಮೌಢ್ಯತೆಯನ್ನು ಖಂಡಿಸಿ ಸಮಾನತೆಯ ಹರಿಕಾರರೇನಿಸಿದ್ದಾರೆ. ಅದ್ದರಿಂದ ವಿದ್ಯಾರ್ಥಿಗಳು ಇಂತಹ ದಾರ್ಶನಿಕರ ವ್ಯಕ್ತಿತ್ವ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.  ಕಾರ್ಯದರ್ಶಿ ವಿನಯ್ ರಾವ್‌., ಮುಖ್ಯಶಿಕ್ಷಕಿ ಚೇತನಾ ರಾವ್ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ