ರಾಣೆಬೆನ್ನೂರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉತ್ತಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉತ್ತಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉತ್ತಮ ಸಹಕಾರ 

ರಾಣಿಬೆನ್ನೂರ:30 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾಡಿನ ಎಲ್ಲ ಗ್ರಾಮದ ಸದಸ್ಯರಿಗೆ ಬಹಳ ಉತ್ತಮ ರೀತಿಯಾದ ಸಹಕಾರವನ್ನು ಕೊಟ್ಟಿದೆ ಇದರಿಂದ ಜನರಿಗೆ ಆರ್ಥಿಕ ಸ್ವಾವಲಂಬನೆ ಜೀವನ ಸಾಗಿಸಲು ಆರ್ಥಿಕವಾಗಿ ಶೈಕ್ಷಣಿಕವಾಗಿ ತಿಳುವಳಿಕೆ ದೃಷ್ಟಿಯಿಂದಲೂ ಪ್ರಯೋಜನಕಾರಿಯಾಗಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಬಸವರಾಜ ಹುಲ್ಲತ್ತಿ ಹೇಳಿದರು. 

  ನಗರದ ಕಾಕಿ ಸಮುದಾಯಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ನಡೆದ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಇಂತಹ ಸಂಸ್ಥೆಯಲ್ಲಿ ಸ್ವಸಹಾಯ ಸಂಘದ ಒಕ್ಕೂಟದಲ್ಲಿ ತಾವೆಲ್ಲರೂ ಪದಾಧಿಕಾರಿಗಳು ಆಗಿರುವುದು ನಿಜಕ್ಕೂ ನಿಮ್ಮ ಪುಣ್ಯ. ಇದು ನಿಮ್ಮ ಹಲವು ಕರ್ತವ್ಯಗಳನ್ನು ಗಮನಿಸಿ ಒದಗಿ ಬಂದಿರುವಂತಹ ಅವಕಾಶ  ಹೀಗುರುವಾಗ ಸರಿಯಾಗಿ ಸಂಸ್ಥೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು. 

   ಸ್ವಾಕರವೇ ರಾಜ್ಯಾಧ್ಯಕ್ಷ  ನಿತ್ಯಾನಂದ ಕುಂದಾಪುರ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಕಳೆದ 14 ವರ್ಷಗಳಿಂದ ಈ ಭಾಗದಲ್ಲಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಸದೃಢರಾಗಲು ಜನರಿಗೆ ಬಹಳ  ಪೂರಕವಾದ ಕೆಲಸ ಕಾರ್ಯಗಳು ಮಾಡುತ್ತಾ ಬಂದಿದೆ. ಸಂಸ್ಥೆಯ ಕಾರ್ಯಗಳು ಪಾರದರ್ಶಕವಾಗಿದ್ದು ಯೋಜನೆಯ ಕಾರ್ಯಕ್ರಮಗಳ  ಉಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. 

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ, ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿ,  ಶ್ರೀ ಕ್ಷೇತ್ರ ಧರ್ಮಸ್ಥಳದ ಹಿನ್ನೆಲೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳೆದು ಬಂದ ದಾರಿ ಗ್ರಾಮ ಅಭಿವೃದ್ಧಿಯೋಜನೆಯಲ್ಲಿ ಒಳಗೊಂಡಿರುವ ಕಾರ್ಯಕ್ರಮಗಳು ಬ್ಯಾಂಕು ಹಾಗೂ ಯೋಜನೆ ಸಹಯೋಗದ ಅನುಷ್ಠಾನದ ಕಾರ್ಯಗಳು ಐಡಿಪಿಐ ಬ್ಯಾಂಕ್ ಮೂಲಕ ಸದಸ್ಯರಿಗೆ ಸಿಗುವ ಬಡ್ಡಿಯ ಬಗ್ಗೆ ಪ್ರಗತಿ ಬಂದು ಸ್ವಸಹಾಯ ಸಂಘಗಳ ಬಗ್ಗೆ ಸಂಘದ ಸದಸ್ಯರ ಜವಾಬ್ದಾರಿಯ ಬಗ್ಗೆ ಯೋಜನೆಯ ನೀಡುವಂತ ಸ್ಪಷ್ಟ ಮಾಹಿತಿಗಳನ್ನು ವಿವರಿಸಿದರು. 

    ನಂತರ ಸ್ಥಳೀಯ ಐಡಿಬಿಐ ಬ್ಯಾಂಕಿನ ವ್ಯವಸ್ಥಾಪಕ  ಪ್ರಸನ್ನ ಕುಮಾರ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬ್ಯಾಂಕ್ ಆರ್ಥಿಕ ಸಹಯೋಗದಿಂದ ಉತ್ತಮ ರೀತಿಯಾಗಿ ಕೆಲಸ ಕಾರ್ಯಗಳು ಮಾಡುತ್ತಿದೆ ಮತ್ತು ಬ್ಯಾಂಕಿನಿಂದ ಸಂಘದ ಸದಸ್ಯರಿಗೆ  ಪ್ರಗತಿ ನಿಧಿ ಸಾಲಕ್ಕೆನೀಡುತ್ತಿರುವ ಬಡ್ಡಿಯ ಬಗ್ಗೆ  ಹಾಗೂ ಬ್ಯಾಂಕುಗಳಿಗೆ ಸಂಘದ ಸದಸ್ಯರು ನೀಡಬೇಕಾದ ದಾಖಲಾತಿಯ ಬಗ್ಗೆ ಮತ್ತು ಬ್ಯಾಂಕಿನಿಂದ ತಾಲೂಕಿನಾದ್ಯಂತ ಈಗಾಗಲೇ ವಿತರಿಸಿದ ಪ್ರಗತಿ ನಿಧಿ ಸಾಲದ ಬಗ್ಗೆ ಹಾಗೂ ಮರುಪಾವತಿಯ ಗುಣಮಟ್ಟದ ಬಗ್ಗೆ ಮಾಹಿತಿ ನೀಡಿದರು. 

   ಜಿಲ್ಲೆಯ ಎಂಐಎಸ್ ಯೋಜನಾಧಿಕಾರಿಗಳು ಬ್ಯಾಂಕಿನಿಂದ ಸಂಘದ ಸದಸ್ಯರಿಗೆ ಯಾವ ರೀತಿ ಬಡ್ಡಿ ವಿಧಿಸುತ್ತಾರೆ ಅದರ ವಿಧಾನವನ್ನು ಮತ್ತು ಎಷ್ಟು ಮೊತ್ತ ಬಡ್ಡಿ ಆಗುತ್ತದೆ ಎಂಬುದು ಹಾಗೂ ಮಾಸಿಕ ವರದಿ ಮರುಪಾವತಿ ಚೀಟಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. 

   ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಬುಳ್ಳಪ್ಪ ಬಣಕಾರ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಶಿಸ್ತುಭದ್ಧ ಕಾರ್ಯಕ್ರಮದ ಯೋಜನೆ ಆಗಿದ್ದು ಐಡಿಬಿಐ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿಯಲ್ಲಿ ಪ್ರಗತಿ ನಿಧಿ ಸಾಲ ಸೌಲಭ್ಯ ನೀಡುತ್ತಿದ್ದು ಒಳ್ಳೆಯ ಉದ್ದೇಶಗಳಿಗೂ ಉಪಯೋಗಿಸಿಕೊಳ್ಳಿರಿ ಹಾಗೂ ಯೋಜನೆಯು ಹತ್ತಾರು ಜನಪರ ಕಾರ್ಯಗಳು ಮಾಡುತ್ತಿದ್ದು ಎಷ್ಟೋ ಬಡ ಜನಪರ ಕಾರ್ಯಕ್ರಮಗಳು ಮಾಡುತ್ತಿದ್ದು ಅದರ ಪ್ರಯೋಜನ ಪಡೆದುಕೊಳ್ಳಿರಿ ಎಂದು ತಿಳಿಸಿದರು. 

   ನಂತರ ಕ್ಷೇತ್ರ ಯೋಜನಾಧಿಕಾರಿ ಎಂ ಪಿ ಮಂಜುನಾಥ್ ಅವರು, ಗ್ರಾಮ ಅಭಿವೃದ್ಧಿ ಯೋಜನೆಯಲ್ಲಿ ಒಳಗೊಂಡ ಸಂಘದ ಸದಸ್ಯರಿಗೆ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು ವಿಮೆಯ ಕಾರ್ಯಕ್ರಮಗಳು ಸ್ವ ಉದ್ಯೋಗ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಹಾಗೂ ಇನ್ನಿತರ ಯೋಜನೆಯಿಂದ ಅನುಷ್ಠಾನಗೊಳ್ಳುತ್ತಿರುವ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು. 

   ಐಡಿಬಿಐ ಬ್ಯಾಂಕಿನ ಸಹಾಯಕ ಪ್ರಬಂಧಕರು,  ಮೇಲ್ವಿಚಾರಕರ ಶ್ರೇಣಿಯ ಸಿಬ್ಬಂದಿಗಳು, ಸೇವಾಪ್ರತಿನಿಧಿಗಳು, ಒಕ್ಕೂಟ ಪದಾಧಿಕಾರಿಗಳು, ಸಿಎಸ್ ಸಿ ಸೇವಾದಾರರು  ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು. 



ಫೋಟೊ30ಆರ್‌ಎನ್‌ಆರ್01ರಾಣಿಬೆನ್ನೂರ: ನಗರದ ಕಾಕಿ ಭವನದಲ್ಲಿ ನಡೆದ  ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ಜನಜಾಗೃತಿ ವೇದಿಕೆ ಸದಸ್ಯ ಬಸವರಾಜ ಹುಲ್ಲತ್ತಿ ಉದ್ಘಾಟಿಸಿದರು. 


ಸುದ್ದಿ ಓದಿ