ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಒತ್ತಾಯ
ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಒತ್ತಾಯ
ಧಾರವಾಡ 29:ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಎ ಐ ಕೆ ಕೆ ಎಒ ಎಸ್ ವತಿಯಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಕೊಡಬೇಕು, ಸಾಗುವಳಿದಾರರ ಮೇಲಿನ ಕೇಸುಗಳನ್ನು ಹಿಂಪಡೇಯಬೇಕೆಂದು ಒತ್ತಾಯಿಸಿ ಪ್ರವಾಸಿ ಮಂದಿರದಿಂದ ತಹಶೀಲ್ದಾರ್ ಕಚೇರಿ ವರಿಗೆ ಪ್ರತಿಭಟನಾ ಮೆರವಣಿಗೆ ಮಾಡಿ , ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ತೆದಾರ ಮೋಹನ್ ಪತ್ತಾರ ಒಂದು ವಾರದ ಒಳಗೆ ತಹಶೀಲ್ದಾರ್ ಜೊತೆಗೆ ಸಾಗುವಳಿದಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆಯದಾಗಿ ಹೇಳಿದರು.ಅಳ್ಳಾವರ ತಾಲೂಕಿನಲ್ಲಿ ಸುಮಾರು 70-80 ವರ್ಷಗಳಿಂದ ಭೂಹೀನ ಮತ್ತು ಬಡ ರೈತ ಕೃಷಿ ಕಾರ್ಮಿಕರು ಕಂದಾಯ ಹಾಗೂ ಅರಣ್ಯದ ಛ ಕುರುಚಲುಗುಡ್ಡ, ಕಲ್ಲು ಭೂಮಿ ಇರುವ ಪ್ರದೇಶದಲ್ಲಿ ತಮ್ಮ ಜೀವನೋಪಾಯಕ್ಕಾಗಿ ಬೇರೆ ಯಾವುದೇ ದಾರಿ ಇಲ್ಲದೇ ಅನಿವಾರವಾಗಿ ಸಾಗುವಳಿ ಮಾಡುತ್ತಿದ್ದಾರೆ.
ಬಹುಪಾಲು ರೈತರಿಗೆ ಇದರಿಂದ ಬರುವ ಅಲ್ಪ ಸ್ವಲ್ಪ ವರಮಾನವೇ ಜೀವನಾಧಾರವಾಗಿದೆ. ಇಲ್ಲಿಯವರೆಗೆ ಆಳ್ವಿಕೆ ಮಾಡಿದ ಎಲ್ಲ ಸರಕಾರಗಳಿಗೂ ಈ ಬಡ ರೈತರ ಜೀವನದ ವಸ್ತು ಸ್ಥಿತಿಯ ಅರಿವಿದ್ದೇ ಸರ್ಕಾರಕ್ಕೆ ಸೇರಿದ ಜಮೀನಿನಲ್ಲಿ ಉಳುಮೆಗೆ ಅವಕಾಶ ಕೊಡುತ್ತಾ ಬಂದಿದೆ.ಆದರೆ ಸರ್ಕಾರ ಒಂದಡೆ, ಭೂಮಿಯ ಹಕ್ಕು ಪತ್ರ ನೀಡುತ್ತೇವೆ ಎಂದು ಹೇಳುತ್ತಾ, ಹಿಂಬಾಗಿಲಿನಿಂದ ಸಾಗುವಳಿದಾರರ ಮೇಲೆ ಕೇಸ್ಗಳನ್ನು ಹಾಕಿ, ಅಮಾಯಾಕ ರೈತರನ್ನು ಕೋರ್ಟ್ ಗೆ ಅಲಿಯುವಂತೆ ಮಾಡಿದೆ. ಜೀವನ ನಡೆಸುವುದೇ ಕಷ್ಟವಾಗಿರುವ ಈಗಿನ ದಿನಗಳಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ, ಕೋರ್ಟ್ ಗೆ ಅಲೆಯುವಂತೆ ಮಾಡಿರುವುದು ನ್ಯಾಯವೇ ? ಹಾಗದರೇ ಸರ್ಕಾರ ಭೂಮಿ ಹಕ್ಕು ಪತ್ರ ನೀಡುತ್ತೇವೆ ಎಂದು ಹೇಳುತ್ತಿರುವುದು ಯಾಕೆ ? ಅಥವಾ ಕೇಸ್ ಹಾಕಿ ರೈತರನ್ನು ಭಯಪಡಿಸಿ ಭೂಮಿ ಕಸಿದುಕೊಳ್ಳಲು ಹೊರಟಿರುವುದು ಸರಿಯೇ ? ಇದನ್ನು ಸರ್ಕಾರ ಸ್ಪಷ್ಟಪಡಿಸಬೇಕು.
ಈ ನೀತಿಯನ್ನು ರೈತ ಸಂಘಟನೆ ಖಂಡಿಸುತ್ತದೆ. ಅಷ್ಟೇ ಅಲ್ಲದೆ ಇಂದಿನಾ ಬೆಲೆ ಏರಿಕೆ, ಅತೀವೃಷ್ಟಿ, ಅನಾವೃಷ್ಟಿ ಪರಿಸ್ಥಿತಿಯಲ್ಲಿ ರೈತರ ಬದುಕು ಕಂಗಾಲಾಗಿದೆ ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಬಡ ರೈತರ ಸಹಾಯಕ್ಕೆ ಧಾವಿಸಿ ಬರುವುದಿರಲಿ ರೈತರನ್ನು ಅನಿವಾರವಾಗಿ ಆತ್ಮಹತ್ಯೆಗೆ ದೂಡುತ್ತಿದೆ. ಈ ಗಂಭೀರತೆಯನು ಅರಿತು ಸಮಸ್ಯಗೆ ಸ್ಪಂದಿಸಬೇಕು.ಈ ಕೂಡಲೇ ತಾಲೂಕಿನಲ್ಲಿ ನೂರಾರು ಸಂಖ್ಯೆಯಲ್ಲಿ ಸುಮಾರು ವರ್ಷಗಳಿಂದ ಕಂದಾಯ ಹಾಗೂ ಅರಣ್ಯ ಭೂಮಿಯಲ್ಲಿ ಜೀವನೋಪಾಯಕ್ಕಾಗಿ ಬಡರೈತರು ಕೃಷಿ ಮಾಡುತ್ತಾ ಬಂದಿರುತ್ತಾರೆ. ಕೂಡಲೇ ಸರ್ಕಾರ ಭೂ ಮಂಜೂರಾತಿ ಸಮಿತಿಯನ್ನು ಕರೆದು. ಫಾರಂ ನಂ.57 ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಸಮಿತಿಯಲ್ಲಿ ಪರೀಶೀಲಿಸಿ ಕೂಡಲೇ ಜಿಲ್ಲೆಯ ಎಲ್ಲಾ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರ ಮಂಜೂರು ಮಾಡಬೇಕೆಂದು ತಮ್ಮಲ್ಲಿ ಒತ್ತಾಯಿಸುತ್ತಿದ್ದೇವೆ. ಬೇಡಿಕೆಗಳು ಭೂ ಮಂಜುರಾತಿ ಸಮಿತಿ ರಚಿಸಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು. ಅಮಾಯಕ ಸಾಗುವಳಿದಾರರ ಮೇಲಿನ ಕೇಸ್ಗಳನ್ನು ಈ ಕೂಡಲೇ ಹಿಂಪಡೆಯಬೇಕು. ಅರಣ್ಯದಂಚಿನಲ್ಲಿ ಕೃಷಿ ಮಾಡುತ್ತಿರುವ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಪ್ರತಿಭಟನಾ ಅಧ್ಯಕ್ಷತೆಯನ್ನು ಜಿಲ್ಲಾ ಉಪಾಧ್ಯಕ್ಷರಾದ ಹನುಮೇಶ್ ಹುಡೇದ ವಹಿಸಿದ್ದರು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಜಿಲ್ಲಾ ಅಧ್ಯಕ್ಷರಾದ ದೀಪಾ ಧಾರವಾಡ, ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ, ಮಾತನಾಡಿದರು. ಮುಖಂಡರಾದ ಸಜ್ಜನ ಚಲವಾದಿ , ಆನಂದ ಚಲವಾದಿ,ಶಿವರಾಜ ಚಲವಾದಿ, ಶ್ರೀದೇವಿ ಶಿವಾನಂದ ಚಲವಾದಿ, ಪುಂಡಲೀಕ ಬೈಲೂರು ದೊಡಿಬಾ, ಮುಂತಾದವರು ಭಾಗವಹಿಸಿದ್ದರು.