ವಕ್ಫ್ ಮಂಡಳಿ ವಿರುದ್ಧ ಬಿಜೆಪಿ ಪ್ರತಿಭಟನೆ
ವಕ್ಫ್ ಮಂಡಳಿ ವಿರುದ್ಧ ಬಿಜೆಪಿ ಪ್ರತಿಭಟನೆ
ಹೂವಿನಹಡಗಲಿ 04 ; ರೈತರ ಜಮೀನುಗಳನ್ನು ತನ್ನ ಆಸ್ತಿ ಎಂದು ಘೋಷಿಸಿ ವಕ್ಸ್ ಮಂಡಳಿ ನೋಟಿಸ್ ನೀಡುತ್ತಿರುವುದರ ವಿರುದ್ಧ ಸೋಮವಾರ ತಾಲ್ಲೂಕು ಬಿಜೆಪಿ ಪಕ್ಷದಿಂದ ಪಟ್ಟಣದ ಶಾಸ್ತ್ರೀಯ ವ್ರತ್ತದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿ ನಡೆದ ಪ್ರತಿಭಟನೆ ಯಲ್ಲಿ ಪಕ್ಷದ ಮುಖಂಡ ಈಟಿ.ಲಿಂಗರಾಜ. ವಕೀಲ ಬಸವರಾಜ ಮಾತನಾಡಿ ರೈತರ ಜಮೀನುಗಳನ್ನು ತನ್ನ ಆಸ್ತಿ ಎಂದು ಘೋಷಿಸಿ ವಕ್ಸ್ ಮಂಡಳಿ ನೋಟಿಸ್ ನೀಡುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡ ರಾದ ಕೊಟ್ರೇಶ ನಾಯ್ಕ. ಸುರೇಶ್ ಶಿವಪುರ. ವಿಲ್ಸನ್ ಸ್ವಾಮಿ.ಪಿ.ವಿ.ಬಸವರಾಜ. ಶಂಕರ್ಪ.ಮೀರಬಾಯಿ ಸೇರಿದಂತೆ ಪಕ್ಷದ ಕಾರ್ಯ ಕರ್ತರು ಇದ್ದರು. ನಂತರ ತಹಶಿಲ್ದಾರರ ಮೂಲಕ ಮನವಿಯನ್ನು ಸಲ್ಲಿಸಿದರು.