ಶಿಕ್ಷಕರು ಮಕ್ಕಳಿಗೆ ಶಿಕ್ಷೆ ನೀಡುವಂತಿಲ್ಲವೆಂದು ಬಿಈಓ ಅಶೋಕ ಖಡಕ್ ಎಚ್ಚರಿಕೆ
ಲೋಕದರ್ಶನ ವರದಿ,
ಜಮಖಂಡಿ ೧೦: ತಾಲೂಕಿನ ಪ್ರಾಥಮಿಕ ಹಾಗೂ ಹೈಸ್ಕೂಲ್ಗಳಲ್ಲಿನ ಶಿಕ್ಷಕರು ಯಾವುದೇ ಕಾರಣಕ್ಕೂ ಮಕ್ಕಳಿಗೆ ಶಿಕ್ಷೆ ನೀಡುವಂತಿಲ್ಲವೆಂದು ಬಿಈಓ ಅಶೋಕ ಬಸಣ್ಣವರ ಖಡಕ್ ಆಗಿ ಎಚ್ಚರಿಕೆ ನೀಡಿದರು.
ನಗರದ ಬಿಆರ್ಸಿ ಸಭಾಭವನದಲ್ಲಿ ನಡೆದ ಮುಖ್ಯ ಗುರುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆಚ್ಚುವರಿ ಶಿಕ್ಷಕರು ಹಾಜರಾದ ಶಾಲೆಗಳಲ್ಲಿ ಸೂಚಿಸಿದಂತೆ ಅತಿಥಿ ಶಿಕ್ಷಕರನ್ನು ಕಡ್ಡಾಯವಾಗಿ ಬಿಡುಗಡೆ ಮಾಡಬೇಕು. ಶಿಕ್ಷಕರು ವ್ಯಾಟ್ಸಪ್ ಹಾಗೂ ಎಸ್ಎಂಎಸ್ಗಳ ಕುರಿತು ಜಾಗೃತಿ ವಹಿಸುವುದು. ರಾಜಕೀಯ ಪಕ್ಷಗಳಿಗೆ ಸೇರಿದ ಅಥವಾ ಸರ್ಕಾರದ ವಿರುದ್ಧ ಸಂದೇಶವನ್ನು ಹಂಚಿಕೊಳ್ಳುವಂತಿಲ್ಲ. ಶಾಲೆಗಳಿಂದ ಕೋಚಿಂಗ್ ಕ್ಲಾಸ್ಗಳಿಗೆ ಶಾಲಾ ವಿದ್ಯಾರ್ಥಿಗಳು ಹೋಗುತ್ತಿದ್ದು, ಕಂಡು ಬಂದಿದ್ದು, ಶಾಲೆಗಳಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆದು ಶಾಲೆಗಳಲ್ಲಿ ಗೈರು ಉಳಿಯುವುದನ್ನು ತಡೆಗಟ್ಟಲು ಸಂಬಂಧಿಸಿದ ಶಿಕ್ಷಕರು ಕಟ್ಟನಿಟ್ಟಾಗಿ ಕ್ರಮವಹಿಸಬೇಕು. ಶೂ ಸಾಕ್ಸ್ ಖರೀದಿ ಪ್ರಕ್ರಿಯೆ ಆರಂಭವಾಗಿದ್ದು, ಸರ್ಕಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.
ಶಾಲೆಗಳಲ್ಲಿ ಮೊಬೈಲ್ ಬಳಕೆಯನ್ನು ಸರಕಾರಿ ಸುತ್ತೋಲೆಯಂತೆ ನಿಷೇಧಿಸಲಾಗಿದೆ. ಮುಖ್ಯೋಪಾಧ್ಯಾಯರು ಅಗತ್ಯ ಕ್ರಮ ವಹಿಸಬೇಕು. ಸ್ಪಷ್ಟ ಓದು ಶುದ್ಧ ಬರಹ ಸಂಬಂಧಿಸಿದಂತೆ ನಿಖರ ಮಾಹಿತಿ ಇಡುವುದು ಹಾಗೂ ಸುಧಾರಣೆಗೆ ಪ್ರಯತ್ನಿಸಬೇಕು. ಶಾಲೆಗಳಲ್ಲಿ ಶೌಚಾಲಯಗಳು ಅಸ್ವಚ್ಚವಾಗಿ ಹಾಗೂ ಉತ್ತಮ ನಿರ್ವಹಣೆಗೆ ಕ್ರಮ ವಹಿಸಬೇಕು. ವೇದಿಕೆ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಪ್ರೋಟೋಕಾಲ್ ಕಡ್ಡಾಯವಾಗಿ ಅನುಸರಿಸುವುದು. ಪಾಠ ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕಲಿಕೆಯನ್ನು ಪರಿಣಾಮಕಾರಿ ಹಾಗೂ ಆಕರ್ಷಕ ಗೊಳಿಸಬೇಕು. ಜಾತಿ,ಜನ್ಮ ದಿನಾಂಕ ಹೆಸರು ತಿದ್ದುಪಡಿಗೆ ಸಂಬಂಧಿಸಿದಂತೆ ಪಾಲಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಅಲ್ಲದೇ ಆಧಾರ್ ವೆರಿಫಿಕೇಶನ್ ಪೂರ್ಣಗೊಳಿಸುವುದು ಪಠ್ಯಪುಸ್ತಕಗಳ ಹಂಚಿಕೆಯನ್ನು ಕೂಡಲೇ ಮಾಡಬೇಕೆಂದು ಮುಖ್ಯಗುರುಗಳಿಗೆ ಸೂಚಿಸಿ ಈ ಎಲ್ಲ ವಿಷಯಗಳನ್ನು ಕಡ್ಡಾಯವಾಗಿ ಶಾಲಾ ಸಿಬ್ಬಂದಿ ಸಭೆ ನಡೆಸಿ ತಿಳಿಸಲು ಸೂಚಿಸಿದರು.