ಕಲೆ ಜೀವನ ಉತ್ಸಾಹದ ಶಲೆ: ಬಾಗನೆ
ಕಾಗವಾಡ 10: ಪಟ್ಟಣದ ಶಿವಾನಂದ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ 2022-23ನೇ ಸಾಲಿನ ತಾಲೂಕಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಗಳ ಉದ್ಘಾಟನಾ ಸಮಾರಂಭವನ್ನು ಯತಿಶ್ವರಾನಂದ ಸ್ವಾಮೀಜಿಯವರು ದೀಪ ಬೆಳಗುವದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಉಪ ಪ್ರಾಚಾರ್ಯ ಪ್ರೊ. ಎಸ್.ಎಸ್.ಬಾಗನೆ ಅವರು ಮಾತನಾಡಿ ಕಲೆ ಜೀವನ ಉತ್ಸಾಹದ ಶಲೆ ಕಲೆಯು ಪ್ರತಿಯೊಬ್ಬರಲ್ಲೂ ಇರುತ್ತದೆ ಎಂದರು.
ಆಧ್ಯಕ್ಷ ಪ್ರೊ.ವಿ.ಎಸ್.ತುಗಶೆಟ್ಟಿಯವರು ಅಧ್ಯಕ್ಷೀಯ ಪರ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸ ಬೇಕೆಂದು ಹೇಳಿದರು.
ಬಿ.ಎ.ಪಾಟೀಲ ಕಾರ್ಯದರ್ಶಿ ಗಳು ಆಡಳಿತ ಮಂಡಳಿ ಉಪಸ್ಥಿತರಿದ್ದರು. ಜೆ.ಎನ್.ನಾಯ್ಕ್, ಎಸ್.ಎಸ್.ಗಣೆ, ಕೆ.ಎಸ್.ಕಮತೆ, ಎ.ಎಸ್.ಕೊರವಿ, ಎಮ್.ಎಲ್.ಕೋರೆ, ಎ.ಎ.ಪಿಂಪಳೆ, ಎಸ್.ಟಿ.ಬಡಿಗೇರ, ಆರ್.ಎಸ್.ಮೋರೆ, ಪಿ.ವಿ.ಚೌಗಲಾ, ಜಿ.ಎಮ್. ಮಗದುಮ, ಪಿ.ಸಿ.ಪುಟಾಣಿ ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಪ್ರೊ. ಪಿ.ಬಿ.ನಂದಾಳೆಯವರು ಸ್ವಾಗತಿಸಿದರು. ಎಂ.ಎಸ್. ಮಾಂಜರಿ ವಂದಿಸಿದರು. ಎಮ್.ವಾಯ್. ಮಾಳಿ ನಿರೂಪಿಸಿದರು