ರಾಣೆಬೆನ್ನೂರ

ಕರವೇ ಸ್ವಾಭಿಮಾನಿ ಬಣದ ಮೆಡ್ಲೇರಿ ಗ್ರಾಮ ಘಟಕದ ನೇಮಕ

ಕರವೇ ಸ್ವಾಭಿಮಾನಿ ಬಣದ ಮೆಡ್ಲೇರಿ ಗ್ರಾಮ ಘಟಕದ ನೇಮಕ

ರಾಣೇಬೆನ್ನೂರು 30: ಕನ್ನಡದ ನೆಲ ಜಲ ಭಾಷೆಯ ಉಳಿವಿಗಾಗಿ ಕನ್ನಡಮ್ಮನ ಸೇವೆಗಾಗಿ ಕನ್ನಡಿಗರು ಸದಾ ಸಿದ್ಧವಾಗಿರಬೇಕು ಎಂದು ಕರವೇ ಸ್ವಾಭಿಮಾನಿ ಬಣದ ರಾಣೇಬೆನ್ನೂರು ತಾಲೂಕಾ ಅಧ್ಯಕ್ಷ ಪಿ ವಿ ಮಠದ ಮಂಗಳವಾರ ಮೆಡ್ಲೇರಿಯ ಈಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿದೆ. ಗ್ರಾಮ ಘಟಕದ ಪದಾಧಿಕಾರಿಗಳ ಆಯ್ಕೆ ಮತ್ತು ನೇಮಕಾತಿ ಪತ್ರ ನೀಡಿ ಮಾತನಾಡಿದರು. 

ಸಂಘಟನೆಗಳನ್ನು ಕೇವಲ ಪ್ರಚಾರಕ್ಕಾಗಿ ಬಳಸಿಕೊಳ್ಳದೆ ನೊಂದವರ ದನಿಗೆ ಕಿವಿಯಾಗಿ ದುರ್ಬಲರ ರಕ್ಷಣೆಗಾಗಿ ಮುಂದಾಗಬೇಕಿದೆ. ಕನರ್ಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗುವಂತಾಗಲು ಕರವೇ ಸ್ವಾಭಿಮಾನಿ ಬಣ ಯಾವಾಗಲೂ ಹೋರಾಟಕ್ಕಾಗಿ ಬದ್ಧವಾಗಿರುತ್ತದೆ ಎಂದು ಹೇಳಿದರ.

 ತಾಲೂಕಿನಲ್ಲಿ ಮೆಡ್ಲೇರಿ ಗ್ರಾಮ ದೊಡ್ಡ ಗ್ರಾಮವಾಗಿದ್ದು ಹೂಬಳಿ ಕೇಂದ್ರವಾಗಿದೆ ಹಾಗಾಗಿ ಇಲ್ಲಿನ ಕನ್ನಡ ಪರ ಕಾಳಜಿಯುಳ್ಳ ಯುವಕರ ಒತ್ತಾಸೆಯ ಮೇರೆಗೆ ಇಂದು ಕರವೇ ಸ್ವಾಭಿಮಾನಿ ಬಣದ ಗ್ರಾಮ ಘಟಕವನ್ನು ಆರಂಭಿಸಲಾಗುತ್ತಿದೆ ಎಂದರುಕರವೇ ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಹನುಮಂತಪ್ಪ ಬಿಷ್ಟಣ್ಣನವರ ಉಪಾಧ್ಯಕ್ಷರನ್ನಾಗಿ ಚಂದ್ರು ಬಸಾಪುರ ಹಾಗೂ ಇತರ ಪದಾಧಿಕಾರಿಗಳನ್ನಾಗಿ ನಾಗೇಂದ್ರ ಬಣಕಾರ, ಕರಿಯಪ್ಪ ಬೂದನೂರು , ಫಯಾಜ್ ಆನಿ , ಮಾರುತಿ ತಳವಾರ, ಚನ್ನಬಸವ ಹಾವೇರಿ ಇನ್ನೂ ಮುಂತಾದವರಿಗೆ ನೇಮಕಾತಿ ಪತ್ರ ನೀಡಲಾಯಿತುಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಮಾರುತಿ ತಳವಾರ ಸ್ವಾಗತಿಸಿದರುಮಾಲತೇಶ ತಳವಾರ, ವಾಗೀಶ ಹುಲ್ಲತ್ತಿ , ದಾವಣಗೆರೆ ಜಿಲ್ಲಾ ಕರವೇ ಘಟಕದ ಅಧ್ಯಕ್ಷ ಬಿ ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ಪವನ ಶ್ಯಾಮನೂರು, ರಾಣೇಬೆನ್ನೂರು ಕರವೇ ಘಟಕದ ಉಪಾಧ್ಯಕ್ಷ ಮಲ್ಲಿಕಾಜರ್ುನ ಸಾವಕ್ಕಳವರ, ಕಾರ್ಯಾಧ್ಯಕ್ಷ ಶ್ರೀಕಾಂತ್ ಕೆಂಪಹಾಲಪ್ಪನವರ, ಮೃತ್ಯುಂಜಯ ಬೆಳಕೇರಿ ಇದ್ದರು 

ಸುದ್ದಿ ಓದಿ